ಯೂಟರ್ನ್, ಆಪರೇಶನ್ ಅಲಮೇಲಮ್ಮ ಮುಂತಾದ ಕನ್ನಡ ಚಿತ್ರಗಳ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡ ನಟಿ ಶ್ರದ್ಧಾ ಶ್ರೀನಾಥ್ ಇದೀಗ ಬಾಲಿವುಡ್ ನತ್ತ ಮುಖಮಾಡಿದ್ದಾರೆ. ಈ ಮೊದಲು ‘ಮಿಲನ್ ಟಾಕೀಸ್’ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ ಹೆಗ್ಗಳಿಕೆ ಈ ಬಹುಭಾಷಾ ನಟಿಗಿದ್ದು, ಈಗ ಮತ್ತೊಂದು ಹೊಸ ಅವಕಾಶ ಕೂಡಿ ಬಂದಿದೆ.

ಮಿಲಿಂದ್ ಧೈಮಡೆ ನಿರ್ದೇಶಿಸುತ್ತಿರುವ `ಲೆಟರ್ಸ್ ಟು ಮಿಸ್ಟರ್ ಖನ್ನಾ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ತಾಯಿ ನೀತು ಕಪೂರ್, ಸನ್ನಿ ಕೌಶಲ್ ಜೊತೆ ಶ್ರದ್ಧಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರೀಕರಣದ ವೇಳೆ ತೆಗೆದಿರುವ ಫೋಟೋ ಸಖತ್ ವೈರಲ್ ಆಗಿದ್ದು ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ತಾಯಿ – ಮಗನ ಬಂಧ ಸಾರುವಂತಹ ಕಥೆ ಇದಾಗಿದ್ದು ನೀತು ಕಪೂರ್ ಜೊತೆ ಶ್ರದ್ಧಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದೆಂದೂ ಕಾಣಿಸಿಕೊಂಡಿರದ ಡಿಫರೆಂಟ್ ಪಾತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ ಎಂಬುದು ಮತ್ತೊಂದು ವಿಶೇಷ. ಈ ಚಿತ್ರಕ್ಕೆ ಲಯನ್ಸ್‌ಗೇಟ್ ಇಂಡಿಯಾ ಸ್ಟುಡಿಯೋ ಸಾಥ್ ನೀಡುತ್ತಿದ್ದು ಶೂಟಿಂಗ್ ಭರದಿಂದ ಸಾಗಿದೆ. ಚಿತ್ರತಂಡದಿಂದ ಮತ್ತಷ್ಟು ಅಪ್ ಡೇಟ್ ಗಳು ಸದ್ಯದಲ್ಲೇ ಹೊರಬರಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ