ಮತ್ತೆ ಚಿತ್ರರಂಗದಡೆಗೆ ಮುಖ ಮಾಡಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರ ಸುಪುತ್ರ ವಿನಯ್ ರಾಜಕುಮಾರ್. ಹೌದು 2018ರಲ್ಲಿ ಬಿಡುಗಡೆಯಾದ “ಅನಂತ ವರ್ಸಸ್ ನುಸ್ರತ್” ಚಿತ್ರದ ನಂತರ ಈ ನಟ ಬೇರೆ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳಲೇ ಇಲ್ಲ.

ಇದೀಗ ಮತ್ತೆ ಚಿತ್ರರಂಗದೆಡೆಗೆ ಮುಖ ಮಾಡಿದ್ದು ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ ಪೆಪೆ’ ಚಿತ್ರದ ಬಗ್ಗೆ ಮಾತನಾಡಿದ ಅವರು ” ಇದೊಂದು ಆಕ್ಷನ್ ಓರಿಯೆಂಟೆಡ್ ಚಿತ್ರ. ಈವರೆಗೂ ನಾನು ಇಂತಹ ಕಥಾಹಂದರ ಚಿತ್ರವನ್ನು ಮಾಡೇ ಇಲ್ಲ, ಇದರ ಕಥೆ, ಸ್ಕ್ರಿಪ್ಟಿಂಗ್, ತಂಡ ಎಲ್ಲವೂ ನನಗೆ ತುಂಬಾ ಇಷ್ಟವಾಯಿತು ಹಾಗಾಗಿ ಒಪ್ಪಿಕೊಂಡೆ” ಎಂದರು.

ಇದರ ಜೊತೆಗೆ “ಈ ಚಿತ್ರತಂಡ ಬಹಳ ಪ್ಯಾಶನೇಟ್ ಆಗಿದೆ. ನನಗೆ ಬಹಳಷ್ಟು ಹೊಸ ವಿಚಾರಗಳನ್ನು ಕಲಿಯಲು ಅವಕಾಶವಾಯಿತು. ಇದಲ್ಲದೆ ಇನ್ನು ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಅದೆಲ್ಲವೂ ಕೂಡ ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ” ಎಂದು ಸಂತಸ ವ್ಯಕ್ತಪಡಿಸಿದರು.

“ಅನಂತ್ ವರ್ಸಸ್ ನುಸ್ರತ್ ಚಿತ್ರದ ನಂತರ ನಾನೊಂದು ನಾಲ್ಕು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡೆ. ಆದರೆ ಇದೀಗ ಮೇಲಿಂದ ಮೇಲೆ ಚಿತ್ರದ ಆಫರ್ಗಳು ಬರುತ್ತಿದೆ. ಹಾಗಾಗಿ ಇನ್ನು ಆಗಾಗ ನಾನು ಪ್ರೇಕ್ಷಕರಿಗೆ ಕಾಣಿಸಿಕೊಳ್ಳಲಿದ್ದೇನೆ ” ಎಂದರು ವಿನಯ್ ರಾಜ್ ಕುಮಾರ್.

ಚಿತ್ರದ ಹೆಸರು ಪೆಪೆ ಅದ್ಯಾಕೆ ಎಂದು ಕೇಳಿದಾಗ “ಚಿತ್ರದಲ್ಲಿ ನಾನು ಪ್ರದೀಪ ಎಂಬ ಪಾತ್ರವನ್ನು ಮಾಡುತ್ತಿದ್ದೇನೆ ಅವನನ್ನು ಅವನ ಸ್ನೇಹಿತರನ್ನು ಬಿಪಿ ಎಂದೆ ಕರೆಯುತ್ತಾರೆ ಹಾಗಾಗಿ ಚಿತ್ರದ ಹೆಸರು ಪೆಪೆ” ಎಂದು ಸ್ಪಷ್ಟನೆ ನೀಡಿದರು.

“ಚಿತ್ರದ ಸ್ಕ್ರಿಪ್ಟನ್ನು ನಾಲ್ಕಾರು ಬಾರಿ ಓದಿಕೊಂಡೆ. ಅಲ್ಲಿಗೆ ನನ್ನ ತಯಾರಿ ಮುಗಿಯಿತು. ನನಗೆ ಸ್ಕ್ರಿಪ್ಟ್ ಬಹಳ ಹಿಡಿಸಿದ್ದರಿಂದ ನಟಿಸಲು ಕಷ್ಟವೇನು ಆಗಲಿಲ್ಲ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ಮೂಡಿ ಬರುತ್ತಿರುವ ಚಿತ್ರ ಪ್ರೇಕ್ಷಕರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಇದನ್ನು ಪಾನ್ ಇಂಡಿಯಾ ಮಾಡುವ ಯೋಜನೆ ನಿಂತಿದೆ. ನನಗೆ ಚಿತ್ರಗಳಲ್ಲಿ ಹೀಗೆ ಇರಬೇಕು ಕಥೆ ಇಂತದ್ದೇ ಬೇಕು ಎಂಬ ಯಾವ ಅಪೇಕ್ಷೆಯು ಇಲ್ಲ. ಒಳ್ಳೆಯ ಸ್ಕ್ರಿಪ್ಟ್,ಒಳ್ಳೆಯ ತಂಡ ಸಿಕ್ಕರೆ ನಾನು ನಟಿಸಲು ಸಿದ್ಧ” ಎಂದು ತಮ್ಮ ಆಸಕ್ತಿಯ ಬಗ್ಗೆಯೂ ಮಾತನಾಡಿದರು.

ಸದ್ಯಕ್ಕೆ ನಟ ವಿನಯ್ ರಾಜ್ ಕುಮಾರ್ ಪೆಪೆ ಚಿತ್ರವಷ್ಟೇ ಅಲ್ಲದೆ ಟೆನ್, ಅಂದೊಂದಿತ್ತು ಕಾಲ, ಗ್ರಾಮಾಯಣ ಹೀಗೆ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ ಎಲ್ಲವೂ ಮುಂದಿನ ವರ್ಷ ತೆರೆ ಕಾಣಲಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ