ಭಾರತದ ಉದ್ಯಮಿ ಪದ್ಮಶ್ರೀ ವಿಜಯ ಸಂಕೇಶ್ವರ ಅವರ ಬಯೋಪಿಕ್ ಇದೀಗ ತಯಾರಾಗುತ್ತಿದೆ. ಅವರ ಸಾಧನೆಯ ಹಾದಿಯ ಕಥೆಗಳನ್ನು ತಿಳಿಯಲು ಬಹಳಷ್ಟು ಇದೆ. ಶ್ರೀಯುತರು ಕನ್ನಡದ ನಂಬರ್ ಒನ್ ಪತ್ರಿಕೆಯ ಮಾಲೀಕರಾಗಿದ್ದಲ್ಲದೆ ಒಂದು ನ್ಯೂಸ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇದೀಗ ಅವರ ಬಯೋಪಿಕ್ ಹೊರ ಬರಲಿದ್ದು ನಿನ್ನೆ ತಾನೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರಕ್ಕೆ “ವಿಜಯಾನಂದ” ಎಂದು ಹೆಸರಿಡಲಾಗಿದೆ.

ನಿರ್ದೇಶಕಿ ರಿಷಿಕಾ ಶರ್ಮ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಜಯಾನಂದ ಚಿತ್ರದಲ್ಲಿ ನಟ ನಿಹಾಲ್ ಆರ್ ಮುಖ್ಯ ಭೂಮಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿರುವ ಈ ಚಿತ್ರ ಇದೇ ಡಿಸೆಂಬರ್ 9ರಂದು ತೆರೆ ಕಾಣಲಿದೆ.

ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕಿ ರಿಷಿಕಾ ಶರ್ಮ ” ನಿಹಾಲ್ ಆರ್ ಅವರು ವಿಜಯ ಸಂಕೇಶ್ವರವರ ಬಗ್ಗೆ ಚಿತ್ರ ಮಾಡೋಣ ಎಂದಾಗ ನನಗೂ ಹೌದನಿಸಿತು. ಅವರ ಜೀವನ ಕಥೆ ಬಹಳಷ್ಟು ವಿಶೇಷವಾದದ್ದು. ಜನರಿಗೆ ಎಷ್ಟೋ ವಿಚಾರಗಳು ಗೊತ್ತಿಲ್ಲ ಅದನ್ನು ತಿಳಿ ಹೇಳಬೇಕು ಅವರ ಸಾಧನೆಯ ಹಾದಿಯನ್ನು ಜನರಿಗೆ ತಿಳಿಸಿ ಕೊಡಬೇಕೆಂದು ಆಸೆ ಆಯ್ತು. ಅದೇ ರೀತಿ ಅವರು ಸಂತೋಷದಿಂದ ಈ ಚಿತ್ರಕ್ಕೆ ಒಪ್ಪಿರುವುದು ಸಂತಸ ತಂದಿದೆ. “ಎಂದರು.

ಇತ್ತ ಚಿತ್ರದ ಬಗ್ಗೆ ಮಾತನಾಡಿರುವ ವಿಜಯ್ ಸಂಕೇಶ್ವರವರ ಸುಪುತ್ರ ವಿ ಆರ್ ಎಲ್ ಗ್ರೂಪ್ಸ್ ನ ಹೆಡ್ ಆನಂದ್ ಸಂಕೇಶ್ವರ ಅವರು ” ಈ ಮೊದಲು ನನ್ನ ತಂದೆಯ ಜೀವನದ ಬಗ್ಗೆ ಬಯೋಪಿಕ್ ಮಾಡಲು ಬಹಳಷ್ಟು ತಂಡ ನಮ್ಮನ್ನು ಅಪ್ರೋಚ್ ಆಗಿತ್ತು. ಆದರೆ ರಿಷಿಕ ಶರ್ಮ ಅವರ ತಂಡದ ಡೆಡಿಕೇಶನ್ ಹಾಗೂ ಶೈಲಿ ನಮಗೆ ತುಂಬಾ ಹಿಡಿಸಿತು. ಹಾಗಾಗಿ ಇದಕ್ಕೆ ಒಪ್ಪಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.

ಅಂದಹಾಗೆ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಬಹಳ ವಿಭಿನ್ನವಾದ ಚಿತ್ರಗಳು ಮೂಡಿ ಬರುತ್ತಿರುವುದು ಹೆಮ್ಮೆಯ ವಿಷಯ. ಕೆಜಿಎಫ್ ಚಾರ್ಲಿ 77 ಹಾಗೆ ಕಾಂತಾರಾ ಸ್ಯಾಂಡಲ್ ವುಡ್ ಕಡೆಗೆ ಜಗತ್ತಿನ ಗಮನ ಬರುವಂತೆ ಮಾಡಿದೆ. ಇದೀಗ ಪದ್ಮಶ್ರೀ ವಿಜಯ ಸಂಕೇಶ್ವರ ಅವರ ಜೀವನ ಗಾದೆಯನ್ನು ಹೇಳ ಹೊರುಟಿರುವುದು ಒಂದು ಒಳ್ಳೆ ಮೈಲಿಗಲ್ಲು ಎಂದು ಹೇಳಬಹುದು. ಅಲ್ಲದೆ ಇದು ಪಾನ್ ಇಂಡಿಯಾ ಚಿತ್ರ ಆಗಿ ಬಹಳಷ್ಟು ಭಾಷೆಗಳಲ್ಲಿ ಬರುತ್ತಿರುವುದರಿಂದ ಹೆಚ್ಚು ಜನರಿಗೆ ತಲುಪಲಿದೆ.

ವಿಜಯಾನಂದ ಚಿತ್ರದ ತಾರಾಗಣದಲ್ಲಿ ಅನಂತನಾಗ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಭರತ್ ಭೂಪಣ್ಣ, ಅನಿಶ್ ಕುರುವಿಲ್ಲ, ಅರ್ಚನಾ ಕೊಟ್ಟಿಗೆ, ವಿನಯ ಪ್ರಸಾದ್ ಇತ್ಯಾದಿ ಇವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ