ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಟೈಗರ್ ಶ್ರಾಫ್ ಇದೀಗ ಸುದ್ದಿಯಲ್ಲಿದ್ದಾರೆ. `ಭಾಘಿ-3′ ಸಿನಿಮಾಗಾಗಿ ಚಿತ್ರೀಕರಿಸುವಾಗ ಟೈಗರ್ ಶ್ರಾಫ್‌ಗೆ ಪೆಟ್ಟಾಗಿದೆ. ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದಾರೆ.

ಬಹುನಿರೀಕ್ಷಿತ ಸಿನಿಮಾ `ಭಾಘಿ 3′ ಶೂಟಿಂಗ್ ಮಾಡುವ ವೇಳೆ ನಟ ಟೈಗರ್, ಜಬರ್‌ದಸ್ತ್ ಆ್ಯಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಎಂತಹ ರಿಸ್ಕಿ ಶಾಟ್‌ಗಳನ್ನ ಎದುರಿಸಿದ್ದರು ಎಂಬ ವಿಡಿಯೋ ಶೇರ್ ಮಾಡಿದ್ದಾರೆ. ಈ ವೇಳೆ ನಟನ ಬೆನ್ನಿಗೆ ಪಟ್ಟಾಗಿದೆ. ವಿಡಿಯೋದಲ್ಲಿ ಇದನ್ನ ನೋಡಬಹುದಾಗಿದೆ. ಸಿನಿಮಾಗಾಗಿ ಮಾಡುವ ನಟನ ಸಾಹಸ, ಧೈರ್ಯ, ಶ್ರದ್ಧೆ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.