ಕೆಜಿಎಫ್ ಹಾಗೂ ಕಾಂತಾರದಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ ಅಡಿಯಲ್ಲಿ ಮತ್ತೊಂದು ಬಹುಭಾಷಾ ಸಿನಿಮಾ “ಬಘೀರಾ” ತೆರೆಗೆ ಬರಲು ಸಿದ್ಧವಾಗುತ್ತಿದೆ. ಕೆಜಿಎಫ್, ಕಾಂತಾರದ ನಂತರ ಬಘೀರಾನನ್ನು ತೆರೆ ಮೇಲೆ ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದು, ಆ ಸಿನಿಮಾ ಸಿನಿಪ್ರಿಯರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಬಘೀರಾ ದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಉಗ್ರಂ ಖ್ಯಾತಿಯ ಶ್ರೀಮುರಳಿ ತಮ್ಮ ಗಮನ ಹಾಗೂ ಸಮಯವನ್ನೆಲ್ಲಾ ವರ್ಕ್ ಔಟ್ ಗೆ ಮೀಸಲಿಟ್ಟಿದ್ದಾರೆ.

ಲಕ್ಕಿ ಸಿನಿಮಾ ಖ್ಯಾತಿಯ ಡಾ.ಸೂರಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಇದೊಂದು ಆಕ್ಷನ್ ಕಮರ್ಶಿಯಲ್ ಎಂಟರ್ಟೈನರ್ ಆಗಿದೆ. ಉಗ್ರಂ ಸಿನಿಮಾದ ಮೂಲಕ ಚೊಚ್ಚಲ ಪ್ರವೇಶ ಮಾಡಿ ಕೆಜಿಎಫ್ ಮೂಲಕ ಖ್ಯಾತಿಗಳಿಸಿರುವ ಪ್ರಶಾಂತ್ ನೀಲ್ ‘ಬಘೀರಾ’ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಶ್ರೀ ಮುರಳಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಶ್ರೀ ಮುರಳಿ “ಬಘೀರಾ ಸಿನಿಮಾದ ಚಿತ್ರೀಕರಣ ಶೇ. 25ರಷ್ಟು ಪೂರ್ಣಗೊಂಡಿದೆ. ಇನ್ನೂ ಬಹಳಷ್ಟು ಕೆಲಸ ಬಾಕಿಯಿದೆ. ಸದ್ಯಕ್ಕೆ ನನ್ನ ಸಂಪೂರ್ಣ ಗಮನ ಬಘೀರಾ ಮೇಲಿದೆ. ಮಂಗಳೂರಿನಲ್ಲಿ ಶೂಟಿಂಗ್ ನಂತರ ಸ್ವಲ್ಪ ವಿಶ್ರಾಂತಿ ಪಡೆದು ಗೋವಾದಲ್ಲಿ ಅಕ್ಟೋಬರ್ 29ರಿಂದ ಶೂಟಿಂಗ್ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ