ಸೋಷಿಯಲ್ ಮೀಡಿಯಾ ಸ್ಟಾರ್, ಆರ್ಜೆ ಅಯ್ಯೋ ಶ್ರದ್ಧಾ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬರುವ ಡಾಕ್ಟರ್ ಜಿ ಸಿನಿಮಾದಲ್ಲಿ ಅವರು ಸ್ಟಾರ್ ನಟನೊಂದಿಗೆ ಅಯ್ಯೋ ಶ್ರದ್ಧಾ ನಟಿಸಲಿದ್ದಾರೆ. ಅಯ್ಯೋ ಶ್ರದ್ಧಾ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಪರಿಚಿತ ಹೆಸರು. ಸೋಷಿಯಲ್ ಮೀಡಿಯಾ ಬಳಸುವವರೆಲ್ಲಾ ಅವರ ಪಟ ಪಟ ಮಾತುಗಳನ್ನು ಖಂಡಿತಾ ಕೇಳದೇ ಇರುವುದು ತೀರಾ ವಿರಳ. ನಾವು ನಿತ್ಯ ನೋಡುವ ಸಣ್ಣ ಪುಟ್ಟ ವಿಚಾರಗಳನ್ನೇ ನಮ್ಮ ಕಣ್ಣಿಗೆ ಕಟ್ಟುವಂತೆ ಮನಸಿಗೆ ಮುಟ್ಟುವಂತೆ ವಿಡಿಯೋ ಮೂಲಕ ತೋರಿಸುವ ಶ್ರದ್ಧಾ ಅವರ ಪ್ರತಿಭೆಗೆ ವಿಶೇಷವಾದ ಅಭಿಮಾನಿ ಬಳಗವೂ ಇದೆ.

ಅಂದಹಾಗೆ ಅಯ್ಯೋ ಶ್ರದ್ಧಾ ಅವರು
ಬಾಲಿವುಡ್ ನಟ ಆಯುಷ್ಮಾನ್ ಜೊತೆ ನಟಿಸಲಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಶ್ರದ್ಧಾ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ವಿಭಿನ್ನ ಸಿನಿಮಾಗಳನ್ನು ಮಾಡುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ರಾಕುಲ್ ಪ್ರೀತ್ ಸಿಂಗ್ ಡಾಕ್ಟರ್ ಜಿ ನಲ್ಲಿ ವೈದ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತಲ್ಲದೆ ಅನುಭೂತಿ ಕಶ್ಯಪ್ ನಿರ್ದೇಶನ ಚಿತ್ರಕ್ಕಿದೆ.

ಇನ್ನು ಚಿತ್ರದಲ್ಲಿ ಶೀಬಾ ಚಡ್ಡಾ ಮತ್ತು ಶೆಫಾಲಿ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡತಿಯೊಬ್ಬರು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಿನಿಮಾ ಅಭಿಮಾನಿಗಳು ಖುಷಿಯಲ್ಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ