ಯೋಗ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಆಂದೋಲನದಲ್ಲಿ ಕರ್ನಾಟಕ ಸರ್ಕಾರವು ಇದೀಗ ವಿಶ್ವದಾಖಲೆ ಬರೆಯಲು ಮುಂದಾಗಿದೆ. ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿ ಎಂದು ಕರೆ ಕೊಟ್ಟಿದ್ದಾರೆ ನಟಿ ಶ್ವೇತಾ ಶ್ರೀವಾತ್ಸವ್.

“ನಮಸ್ಕಾರ ಕರ್ನಾಟಕ, ರಾಜ್ಯದ ಭಾಗವಾಗಿ ನಾವೆಲ್ಲರೂ ಒಂದಾಗುವ ಸಮಯ ಬಂದಿದೆ. ಎಲ್ಲರೂ ಒಟ್ಟಾಗಿ ಗಿನ್ನಿಸ್ ದಾಖಲೆ ನಿರ್ಮಿಸೋಣ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ, ಕರ್ನಾಟಕ ಸರ್ಕಾರವು ಯೋಗಥಾನ್ 2022- ವಿಶ್ವದ ಅತಿದೊಡ್ಡ ಯೋಗ ಮತ್ತು ಆರೋಗ್ಯ ಆಂದೋಲನವನ್ನು ಸೆಪ್ಟೆಂಬರ್ 17, 2022 ರಂದು ಆಯೋಜಿಸುತ್ತಿದೆ. ಐತಿಹಾಸಿಕ ಘಟನೆಯ ಭಾಗವಾಗಲು ಮತ್ತು ಕರ್ನಾಟಕವನ್ನು ಹೆಮ್ಮೆ ಪಡಿಸುವಂತೆ ಮಾಡಿ. ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯಲು ಇದು ನಿಮಗೆ ಅವಕಾಶವಾಗಿದೆ. ಇದರಲ್ಲಿ ಭಾಗವಹಿಸಿ” ಎಂದು ವಿಡಿಯೋ ಮೂಲಕ ಶ್ವೇತಾ ಶ್ರೀವಾತ್ಸವ್ ಮನವಿ ಮಾಡಿದ್ದಾರೆ.

ಇದರ ಜೊತೆಗೆ ” ಇನ್ನು ನಿಮಗೆ ಈ ಯೋಗಥಾನ್‍ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಆಸೆ ಇದ್ದರೆ https://www.yogathon2022.com/ ಈ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿ ನೀವು ಯೋಗಥಾನ್ ಗೆ ನೋಂದಯಿಸಿಕೊಳ್ಳಬಹುದು. ಈ ಮೂಲಕ ಕರ್ನಾಟಕವನ್ನು ಹೆಮ್ಮೆ ಪಡಿಸಿ” ಎಂದು ಶ್ವೇತಾ ಶ್ರೀವಾತ್ಸವ್ ಹೇಳಿದ್ದಾರೆ.

ಕೊನೆಯಲ್ಲಿ “ನೀವು ಯೋಗಾಥಾನ್ ನಲ್ಲಿ ಕೇವಲ ನೋಂದಾಯಿಸಿಕೊಳ್ಳುವುದಲ್ಲ, ಬದಲಿಗೆ ಮುಖ್ಯವಾಗಿ ರೆಫರ್ ಮತ್ತು ವಿನ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ 20 ಲಕ್ಷ ಮೌಲ್ಯದ ಬಹುಮಾನ ಕೂಡಾ ಪಡೆಯಬಹುದು. ತಡಮಾಡದೇ ಈಗಲೇ ಹೆಸರು ನೋಂದಾಯಿಸಿಕೊಳ್ಳಿ” ಎಂದು ಅವರು ಕರೆ ಕೊಟ್ಟಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ