ಶ್ರುತಿ ಹಾಸನ್ ಗೆ ಹಾಲಿವುಡ್ ಹೊಸದೇನಲ್ಲ. ಈ ಹಿಂದೆಯೂ ಅವರು ಹಾಲಿವುಡ್ ನಲ್ಲಿ ನಟಿಸಿದವರು. ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದ ಟ್ರೆಡ್ ಸ್ಟೋನ್ ಹೆಸರಿನ ಟಿವಿ ಸರಣಿಯೊಂದರಲ್ಲಿ ಅವರು ಕಾಣಿಸಿಕೊಂಡಿದ್ದರು. ಇದೀಗ ಅವರು ಮತ್ತೆ ಹಾಲಿವುಡ್ ಗೆ ಹಾರಿದ್ದಾರೆ.

ಅಂದಹಾಗೆ ಅವರು ಡಾಫ್ನೆ ಶಿಮೋನ್ ನಿರ್ದೇಶನದ ಸೈಕಲಾಜಿಕಲ್ ಥ್ರಿಲ್ಲರ್ ‘ದಿ ಐ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಶ್ರುತಿಗೆ ನಾಯಕನಾಗಿ ಮಾರ್ಕ್ ರೌಲಿ ಅಭಿನಯಿಸಲಿದ್ದಾರೆ. ಚಿತ್ರದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ”ದಿ ಐ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ತುಂಬಾ ಸಂತೋಷವಿದೆ. ಈ ತಂಡ ತುಂಬಾ ಕ್ರಿಯಾಶೀಲವಾಗಿದ್ದು ಮತ್ತು ಈ ರೀತಿಯ ಅಭಿನಯ ನನಗೆ ಇಷ್ಟವಾದದ್ದೂ ಹೌದು. ಒಟ್ಟಿನಲ್ಲಿ ಈ ಸಿನಿಮಾದ ಮೂಲಕ ಒಂದು ವಿಭಿನ್ನವಾದ ಕಥೆಯನ್ನು ಹೇಳಹೊರಟಿದ್ದೇವೆ” ಎಂದರು.

ಹಾಲಿವುಡ್ ಎಂದಾಕ್ಷಣ ಅಲ್ಲಿನ ಮೇಕಿಂಗ್ ರೀತಿ, ಗ್ರಾಫಿಕ್ಸ್ ರೀತಿ ಎಲ್ಲವೂ ವಿಭಿನ್ನವಾಗಿರುತ್ತದೆ. ಈ ಚಿತ್ರದಲ್ಲಿ ನಿಗೂಢ ದ್ವೀಪವೊಂದಕ್ಕೆ ಪ್ರಯಾಣ ಬೆಳೆಸುವ ನಾಯಕಿಯಾಗಿ ಶ್ರುತಿ ಕಾಣಿಸಿಕೊಳ್ಳಲಿದ್ದಾರೆ. ತನ್ನ ಗಂಡನ ಸಾವಿಗೆ ಕಾರಣವಾದ ದ್ವೀಪಕ್ಕೆ ತೆರಳುವ ಆಕೆ, ಪತಿಯ ಸಾವಿನ ಕಾರಣವನ್ನು ಹುಡುಕುವ ಸುತ್ತ ಕಥೆ ಇದೆ.

ಹಾಲಿವುಡ್ ಸಿನಿಮಾದೊಂದಿಗೆ ಪ್ರಭಾಸ್ ನಾಯಕ ನಟನಾಗಿ ಅಭಿನಯಿಸುತ್ತಿರುವ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲೂ ಶ್ರುತಿ ಹಾಸನ್ ನಾಯಕಿಯಾಗಿರಲಿದ್ದಾರೆ. ಇದರೊಂದಿಗೆ ನಂದಮೂರಿ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿ ಸಿನಿಮಾದಲ್ಲೂ ನಾಯಕಿಯಾಗಿ ಈಕೆ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಭಾರತ ಚಿತ್ರರಂಗದಲ್ಲಿ ಇದೀಗ ಬಿಝಿಯಾಗಿರುವ ನಟಿಯರ ಪೈಕಿ ಒಬ್ಬರಾಗಿದ್ದಾರೆ ಶ್ರುತಿ ಹಾಸನ್.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ