ಚಿತ್ರಗಳಿಂದ ವೆಬ್ ಸೀರೀಸ್ ಕಡೆಗೆ ಮುಖ ಮಾಡಿರುವ ನಟ ರಿಷಿ ತಮ್ಮ ಹೊಸ ತೆಲುಗು ವೆಬ್ ಸೀರೀಸ್ ಬಗ್ಗೆ ಮಾತನಾಡಿದ್ದಾರೆ. “ಸಿನಿಮಾಗಳಿಗೆ ಹೋಲಿಸಿದರೆ ವೆಬ್ ಸೀರೀಸ್ ನ ಫಾರ್ಮಟ್ ಬೇರೆ. ಸಿನಿಮಾಗಳಿಗೆ ಹೋಲಿಸಿದರೆ ವೆಬ್ ಸೀರೀಸ್ ನ ಕ್ವಾಲಿಟಿ ಕೂಡ ಅದ್ಭುತ. ಇದೊಂದು ರೀತಿ ಮೂರು ಸಿನಿಮಾಗಳನ್ನು ಒಂದೇ ಸಮಯದಲ್ಲಿ ಮಾಡುವಂತಹ ಅನುಭವ. ಈ ಮೊದಲು ಕೂಡ ಹಲವಾರು ವೆಬ್ ಸೀರೀಸ್ ಗಳ ಆಫರ್ ಬಂದಿದ್ದರು ನನಗೆ ಯಾವುದು ಕೂಡ ಅಷ್ಟೇನು ಮೆಚ್ಚುಗೆ ಅನಿಸಿರಲಿಲ್ಲ. ಆದರೆ ಈ ಬೆಡ್ ಸೀರೀಸ್ ಕಥೆ ನನಗೆ ತುಂಬಾ ಹಿಡಿಸಿದೆ” ಎಂದಿದ್ದಾರೆ.

ಭಾರತದಲ್ಲಿ ಓಟಿಟಿ ಫ್ಲ್ಯಾಟ್ ಫಾರ್ಮ್ ಗಳ ಬಗ್ಗೆ ಮಾತನಾಡಿದವರು ” ಓಟಿಟಿ ಇತ್ತೀಚೆಗಷ್ಟೇ ಭಾರತದಲ್ಲಿ ಪಾಪ್ಯುಲರ್ ಆಗುತ್ತಿದೆ. ಸೀರೀಸ್ ಗಳನ್ನು ನೋಡುವಾಗ ಪ್ರೇಕ್ಷಕರಿಗೆ ಅದನ್ನು ಮುಂದುವರಿಸಲು ಅಥವಾ ಅಲ್ಲೇ ಕೈ ಬಿಡಲು ಆಯ್ಕೆ ಇರುತ್ತದೆ. ಅದೇ ಸಿನಿಮಾದಲ್ಲಿ ಹಾಗಲ್ಲ ಮೂರು ಗಂಟೆಗಳ ಕಾಲ ಸಿನಿಮಾವನ್ನು ನೋಡಬೇಕಾಗುತ್ತದೆ ಅರ್ಧದಲ್ಲಿ ಇಷ್ಟವೆಲ್ಲವೆಂದು ಬಿಟ್ಟರು ಅದು ಇಡೀ ಚಿತ್ರಕಥೆ ಮುಗಿದಂತೆ ಅನಿಸುವುದಿಲ್ಲ. ವೆಬ್ ಸೀರೀಸ್ ಹಾಗಲ್ಲ ಎಪಿಸೋಡ್ ಗಳಿರುವುದರಿಂದ ಯಾವಾಗ ಬೇಕಾದರೂ ನೋಡಬಹುದು. ಹಾಗಾಗಿ ವೆಬ್ ಸೀರೀಸ್ ಇತ್ತೀಚಿಗೆ ಟ್ರೆಂಡಿಗೆ ಬಂದರೂ ಇದಕ್ಕೆ ಬಹುದೊಡ್ಡ ಭವಿಷ್ಯ ಇದೆ ಎಂದು ನನಗನಿಸುತ್ತದೆ” ಎಂದರು.

ಇನ್ನೂ ಅವರಿಗೆ ಅವಕಾಶ ನೀಡಿರುವ ವೆಬ್ ಸೀರೀಸ್ ತಂಡದ ಬಗ್ಗೆ ಮಾತನಾಡಿದವರು, “ನಾನು ಹುಟ್ಟಿ ಬೆಳೆದಿದ್ದೆಲ್ಲ ಮೈಸೂರಿನಲ್ಲಿ ಹಾಗಾಗಿ ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಬಿಟ್ಟರೆ ನನಗೆ ಬೇರೆ ಭಾಷೆಗಳಲ್ಲಿ ಅಷ್ಟೇನೂ ಹಿಡಿತವಿಲ್ಲ. ಹೈದ್ರಾಬಾದ್ ನ ವೆಬ್ ಸೀರೀಸ್ ತಂಡ ನನ್ನನ್ನು ನಟನೆಗೆ ಕರೆದಾಗ ಬಹಳಷ್ಟು ಅಚ್ಚರಿಯಾಗಿತ್ತು. ನಾನು ನನ್ನ ಕೈಲಾದಷ್ಟು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದೇನೆ” ಎಂದಿದ್ದಾರೆ.

“ಈ ವೆಬ್ ಸೀರೀಸ್ ಹಲವಷ್ಟು ಭಾಷೆಗಳಲ್ಲಿ ಬಿಡುಗಡೆಗೊಳ್ಳುವ ಪ್ಲಾನ್ ಇರುವುದರಿಂದ ಬೇರೆ ಬೇರೆ ಭಾಷೆಯ ನಟರು ಕೂಡ ಇದರಲ್ಲಿ ನಟಿಸಿದ್ದಾರೆ. ಎಲ್ಲರೂ ಅದ್ಭುತ ನಟನೆಯನ್ನು ನೀಡಿದ್ದಾರೆ ಹಾಗಾಗಿ ಅವರೆಲ್ಲರೊಂದಿಗೆ ಕೆಲಸ ಮಾಡುವುದು ನನಗೊಂದು ರೀತಿಯ ಹೊಸ ಅನುಭವ. ಇದರಲ್ಲಿ ನಾನೊಬ್ಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರೂ ಈ ವೆಬ್ ಸೀರೀಸ್ ನಲ್ಲಿ ಒಂದು ರೀತಿ ನಾನೇ ಹೀರೋ. ಸಿನಿಮಾದಿಂದ ವೆಬ್ ಸೀರೀಸ್‌ಗೆ ಕಾಲಿಡುತ್ತಿರುವುದು ಬಹಳಷ್ಟು ಖುಷಿ ತಂದಿದೆ. ಹೀಗೆ ಹಲವಾರು ಹೊಸ ಹೊಸ ಯೋಜನೆಗಳಲ್ಲಿ ಭಾಗಿಯಾಗಲು ಇಚ್ಚಿಸುತ್ತೇನೆ “ಎಂದಿದ್ದಾರೆ.

ಮೂಲತಃ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ವೆಬ್ ಸೀರೀಸ್ ಸೋಶಿಯೊ ಪೊಲಿಟಿಕಲ್ ಕ್ರೈಂ ಡ್ರಾಮಾ ಕಥಹಂದರವನ್ನು ಹೊಂದಿದೆ. ಇದೀಗ ಚಿತ್ರೀಕರಣ ಮುಗಿರಿದ್ದು ಮುಂದಿನ ವರ್ಷ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ