Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E paper 01 Feb 2023
  • E paper 29 jan 2023
  • E paper 27 jan 2023
  • 26 jan 2023
  • E paper 25 jan 2023
  • E paper 24 jan 2023
  • E paper 22 jan 2023
  • E paper 21 jan 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ಲೋಕಲ್ ಸುದ್ದಿ»ಕಳ್ಳರ ಸಾಮ್ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪ ನ್ಯಾ. ಸಂತೋಷ್ ಹೆಗ್ಡೆ
ಲೋಕಲ್ ಸುದ್ದಿ

ಕಳ್ಳರ ಸಾಮ್ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪ ನ್ಯಾ. ಸಂತೋಷ್ ಹೆಗ್ಡೆ

October 22, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ಬೆಂಗಳೂರು, ಅ, 22; ಹಾಲಿ ಸರ್ಕಾರದಲ್ಲಿ ಶೇ 40 ರಷ್ಟು, ಹಿಂದಿನ ಸರ್ಕಾರದಲ್ಲಿ ಶೇ 10 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಆರೋಪ, ಪ್ರತ್ಯಾರೋಪಗಳು ರಾಜಾರೋಷವಾಗಿ ನಡೆಯುತ್ತಿವೆ. ಆದರೆ ಆನೆ ಕದ್ದವನೂ ಕಳ್ಳ, ಅಡಿಕೆ ಕದ್ದವನೂ ಕಳ್ಳ. ಇಂತಹ ಕಳ್ಳರ ಸಾಮ್ರಾಜ್ಯದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕರೆ ವಿಷಾದ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ವಲಯ 1 ಹಾಗೂ 2ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಕ್ಯಾಮ್ಸ್ ಕರ್ನಾಟಕದಿಂದ ಕುವೆಂಪು ಕಲಾ ಕ್ಷೇತ್ರದಲ್ಲಿ ಖಾಸಗಿ ಶಾಲಾ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಕಾಮಗಾರಿ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಲು ಸಾಧ‍್ಯವೇ?. ಆಗಿರುವ ರಸ್ತೆ ಕಾಮಗಾರಿಗಳಲ್ಲಿ ಶೇ 70 ರಷ್ಟು ಗುಂಡಿ ಬಿದ್ದಿವೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಒಂದು ಕಿಲೋಮೀಟರ್ ರಸ್ತೆಯನ್ನು 17 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಮಳೆ ಬಂದ ನಂತರ ಈ ರಸ್ತೆಯ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಅಂತರಾಷ್ಟ್ರೀಯ ಟ್ರಾನ್ಸ್ಪೆರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕಿಂತ ಚೈನಾದಲ್ಲಿ ಚೈನಾದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ವರದಿ ನೀಡಿದೆ. ಚೈನಾದಲ್ಲಿ ಭ್ರಷ್ಟಾಚಾರ ಮಾಡಿದರೆ ಗಲ್ಲು ಶಿಕ್ಷೆ, ನಮ್ಮಲ್ಲಿ 7 ವರ್ಷ ಜೈಲು ಶಿಕ್ಷೆ. ಹೀಗಾಗಿ ಭ್ರಷ್ಟಾಚಾರ ದೇಶ, ಗಡಿಗಳನ್ನು ಮೀರಿದ ಪಿಡುಗು ಎಂದರು.

ಭ್ರಷ್ಟಾಚಾರ ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರೂ ತೃಪ್ತಿ ಎನ್ನುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ, ಆದರೆ ಇದೇ ರೀತಿ ದುರಾಸೆಯೂ ಸಹ ಅಭಿವೃದ‍್ದಿ ಹೊಂದುತ್ತಿದೆ. ಭ್ರಷ್ಟಾಚಾರ, ಅಕ್ರಮಗಳ ಮೂಲ ದುರಾಸೆಯಾಗಿದ್ದು, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ದುರಾಸೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ವಿಚಿತ್ರವೆಂದರೆ ದುರಾಸೆಯನ್ನು ಸೃಷ್ಟಿಕರ್ತನಿಂದಲೂ ಸಹ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಿಂದೆ ಈ ಮಟ್ಟದ ದುರಾಸೆ ಇರಲಿಲ್ಲ. ಇದೀಗ ಪ್ರಮಾಣಿಕತೆ ಮಾಯವಾಗಿ ಜೀವನಪರ್ಯಂತ ದುರಾಸೆಯಂತಹ ದುರ್ಗುಣಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತವೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಮೌಲ್ಯಗಳು ನಿಶಿಸುತ್ತಿದ್ದು, ಚಿಕ್ಕಂದಿನಲ್ಲೇ ಸಾಮಾಜಿಕ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಮೌಲ್ಯಗಳಲ್ಲೂ ಶ್ರೇಷ್ಠವಾದದ್ದು ತೃಪ್ತಿ ಎನ್ನುವ ಗುಣ. ತೃಪ್ತಿ ಇದ್ದರೆ ದುರಾಸೆ ಬರುವುದಿಲ್ಲ. ಇಂತಹ ಸಮಸ್ಯೆಗಳಿಗೆ ಶಿಕ್ಷಕರಲ್ಲಿ ಮಾತ್ರ ಪರಿಹಾರವಿದೆ. ಶಿಕ್ಷಕರು ಮಾತ್ರ ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ಕರೆ ತರಬಹುದು ಎಂದು ಹೇಳಿದರು.

ಇವತ್ತು ಸಾಮಾಜಿಕ ಮೌಲ್ಯಗಳು ನಶಿಸುತ್ತಿವೆ. ಸಮಾಜವನ್ನು ತಿದ್ದುವವರು ಎಲ್ಲರೂ ಶಿಕ್ಷಕರೇ ಆಗಿರುತ್ತಾರೆ. ಪ್ರಮಾಣಿತೆಯನ್ನು ಅಳವಡಿಸಿಕೊಂಡರೆ ಸುಧಾರಣೆ ತರಬಹುದು. ಏನಾದರು ಆಗು ಮೊದಲು ಮಾನವನಾಗು ಎಂಬ ಕವಿವಾಣಿ ನಮಗೆಲ್ಲರಿಗೂ ದಾರಿ ದೀಪವಾಗಲಿ. ಶಿಕ್ಷಕರು ಸಮಾಜಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡ ಬಲ್ಲರು. ಪ್ರತಿಯೊಬ್ಬರೂ ಮಾನವೀಯತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಬೈಲಾಂಜನಪ್ಪ, ಕ್ಯಾಮ್, ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಜಿ ರಾಜಶೇಖರ, ಹೆಚ್.ಎನ್ ಗಿರಿಜಮ್ಮ, ಕ್ರೀಡೋ ಸಂಸ್ಥೆಯ ಸಹ ವ್ಯವಸ್ಥಾಪಕ ಮೃದುಲ ಶ್ರೀಧರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ವೆಂಕಟರಾಮೇಗೌಡ, ಹನುಮಂತರಾಯಪ್ಪ, ಪುಟ್ಟಸ್ವಾಮಿ ಪಿ. ಮತ್ತಿರರು ಉಪಸ್ಥಿತರಿದ್ದರು.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ

Share. Facebook Twitter Pinterest LinkedIn Telegram Email
Previous ArticleE paper 22 oct 2022
Next Article E paper 23 oct 2022

Related Posts

ಕನ್ನಡೇತರರಿಗೆ ಕನ್ನಡ ಕಲಿಸಲು ವಾರಕ್ಕೆ ಒಂದು ಗಂಟೆ ಮೀಸಲಿಡಿ: ಹಿರಿಯ ನಟ ರಮೇಶ್ ಭಟ್

November 27, 2022

ಮಗು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿಗೆ ಪೊಲೀಸರ ಕಿರುಕುಳ ಕಿರುಕುಳ ಗೃಹ ಸಚಿವರ ಉತ್ತರಕ್ಕೆ HDK ಆಗ್ರಹ

November 3, 2022

ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

August 3, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
February 2023
M T W T F S S
 12345
6789101112
13141516171819
20212223242526
2728  
« Jan    
Latest Posts

E paper 01 Feb 2023

E paper 29 jan 2023

E paper 27 jan 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.