ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅಪ್ಪ ಮಗಳ ನಡುವಿನ ಅನ್ಯೋನ್ಯ ಕಥೆಯನ್ನು ಒಳಗೊಂಡಿದ್ದ ದೊರೆಸಾನಿ ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ಕಳೆದ ವಾರ ಪ್ರಸಾರ ನಿಲ್ಲಿಸಿತ್ತು.
ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಆಗಿ ಅಭಿನಯಿಸಿದ್ದ ರೂಪಿಕಾ ಧಾರಾವಾಹಿ ಅರ್ಧದಲ್ಲಿಯೇ ಮುಕ್ತಾಯಗೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

“ದೊರೆಸಾನಿ ಧಾರಾವಾಹಿಯು ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿದೆ. ದೊರೆಸಾನಿ ಧಾರಾವಾಹಿಗೆ ನಾನು ಎಮೋಷನಲ್ ಆಗಿ ಕನೆಕ್ಟ್ ಆಗಿದ್ದೆ. ಎಲ್ಲಾ ಕಲಾವಿದರಿಗೂ ಅಷ್ಟೇ… ಉತ್ತಮವಾದ ಪಾತ್ರಕ್ಕೆ ಜೀವ ತುಂಬಬೇಕು ಎಂಬ ಆಸೆ ಇರುತ್ತದೆ. ದೊರೆಸಾನಿಯ ಮೂಲಕ ನನ್ನ ಆಸೆ ಈಡೇರಿತ್ತು. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಪರಿಚಿತಳಾದ ನಾನು ಈ ಜಗತ್ತಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿಕೊಂಡೇ ಬೆಳೆದವಳು” ಎನ್ನುತ್ತಾರೆ ರೂಪಿಕಾ.

“ದೊರೆಸಾನಿಯ ದೀಪಿಕಾ ಪಾತ್ರ ಸಿಕ್ಕಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆ ಸಂತೋಷಕ್ಕೆ ಜೈಮಾತಾ ಕಂಬೈನ್ಸ್ ಮತ್ತು ಕಲರ್ಸ್ ಕನ್ನಡವೇ ಮುಖ್ಯ ಕಾರಣ.
ಜೈಮಾತಾ ಕಂಬೈನ್ಸ್ ಒಂದು ಒಳ್ಳೆಯ ಪ್ರೊಡಕ್ಷನ್ ಹೌಸ್. ಇಲ್ಲಿಯವರೆಗೆ ಆ ಪ್ರೊಡಕ್ಷನ್ ಹೌಸ್ ನಿಂದ ಉತ್ತಮವಾದ ಸೀರಿಯಲ್ ಗಳು ಮೂಡಿಬಂದಿದೆ. ಸೋ ಅದರ ಭಾಗವಾಗುತ್ತೇನೆ ಎಂಬ ಆಲೋಚನೆಯೇ ನನಗೆ ಖುಷಿ ನೀಡಿತು. ದೀಪಿಕಾ ಆಗಿ ಕಿರುತೆರೆಯಲ್ಲಿ ನಟಿಸಲು ಅವಕಾಶ ನೀಡಿದ ಜೈಮಾತಾ ಕಂಬೈನ್ಸ್ ಹಾಗೂ ಮಿಲನ ಪ್ರಕಾಶ್ ಸರ್ ಇವರಿಗೆ ಧನ್ಯವಾದಗಳು. ಇದರ ಜೊತೆಗೆ ಇಡೀ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ಗೆ,ಕಲರ್ಸ್ ಕನ್ನಡ, ಪರಮೇಶ್ವರ್ ಗುಂಡ್ಕಲ್ ಸರ್, ಜೆಡಿ ಸರ್‌ಗೆ ಧನ್ಯವಾದಗಳು’’ ಎಂದ ಹೇಳಿಕೊಂಡಿದ್ದಾರೆ ರೂಪಿಕಾ.

‘’ದೊರೆಸಾನಿ ಧಾರಾವಾಹಿಯು ಅರ್ಧದಲ್ಲಿಯೇ ಮುಗಿದಿದೆ ನಿಜ. ಆದರೆ ನಾನಿಂದು ಎಲ್ಲೇ ಹೋದರೂ ಜನ ನನ್ನನ್ನು ದೊರೆಸಾನಿ ರೂಪಿಕಾ ಎಂದೇ ಕರೆಯುತ್ತಾರೆ. ಜನರು ನನಗೆ ನೀಡಿದ ಪ್ರೀತಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ನಾನು ದೊರೆಸಾನಿ ಧಾರಾವಾಹಿಯನ್ನು, ಧಾರಾವಾಹಿ ತಂಡವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಹೊಸ ಪ್ರಾಜೆಕ್ಟ್ ಮೂಲಕ ಮತ್ತೆ ನಿಮ್ಮನ್ನು ರಂಜಿಸಲು ನಾನು ಖಂಡಿತಾ ಮರಳುತ್ತೇನೆ. ನನ್ನ ಮೇಲಿನ ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ” ಎಂದು ಹೇಳಿದ್ದಾರೆ ರೂಪಿಕಾ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ