ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೋ (Reliance jio) ಸೋಮವಾರ 5G ಸ್ಪೆಕ್ಟ್ರಮ್ ಹರಾಜಿನಲ್ಲಿ (5g spectrum) ಅತಿ ದೊಡ್ಡ ಬಿಡ್‌ದಾರರಾಗಿ ಹೊರಹೊಮ್ಮಿದೆ , ಇತ್ತೀಚಿನ ಹರಾಜಿನಲ್ಲಿ ₹ 88,078 ಕೋಟಿಗೆ ಮಾರಾಟವಾದ ಎಲ್ಲಾ ಏರ್‌ವೇವ್‌ಗಳ ಅರ್ಧದಷ್ಟು ಭಾಗವನ್ನು ಪಡೆದುಕೊಂಡಿದೆ. ಶ್ರೀಮಂತ ಭಾರತೀಯ ಗೌತಮ್ ಅದಾನಿ ಗ್ರೂಪ್ 400 MHz ಗೆ 212 ಕೋಟಿ ರೂ. ಅಥವಾ ಮಾರಾಟವಾದ ಎಲ್ಲಾ ಸ್ಪೆಕ್ಟ್ರಮ್‌ನ ಶೇಕಡಾ ಒಂದಕ್ಕಿಂತ ಕಡಿಮೆಗೆ ಖರೀದಿ ಮಾಡಿದೆ. ಟೆಲಿಕಾಂ ದೈತ್ಯ ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್ ಟೆಲ್ 43,084 ಕೋಟಿ ಬಿಡ್ ಮಾಡಿದ್ದು ವೊಡಾಫೋನ್ ಐಡಿಯಾ ಲಿಮಿಟೆಡ್ 18,799 ಕೋಟಿಗೆ ಸ್ಪೆಕ್ಟ್ರಂ ಖರೀದಿಸಿದೆ. 10 ಬ್ಯಾಂಡ್‌ಗಳಲ್ಲಿ ನೀಡಲಾದ 72,098 MHz ಸ್ಪೆಕ್ಟ್ರಮ್, 51,236 MHz ಅಥವಾ ಶೇಕಡಾ 71 ಮಾರಾಟವಾಗಿದೆ. ಒಟ್ಟಾರೆಯಾಗಿ, 1,50,173 ಕೋಟಿ ರೂಪಾಯಿ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಲಾಗಿದೆ, ಮೊದಲ ವರ್ಷದಲ್ಲಿ ಸರ್ಕಾರವು 13,365 ಕೋಟಿ ರೂಪಾಯಿಗಳನ್ನು ಪಡೆಯಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
1800 MHz ಬ್ಯಾಂಡ್ ಅನ್ನು ಹೊರತುಪಡಿಸಿ, ಜಿಯೋ ಮತ್ತು ಏರ್‌ಟೆಲ್ ತೀವ್ರ ಬಿಡ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದೆ, ಎಲ್ಲಾ ಬ್ಯಾಂಡ್‌ಗಳಲ್ಲಿನ ಸ್ಪೆಕ್ಟ್ರಮ್ ಅನ್ನು ಮೀಸಲು (ಮೂಲ) ಬೆಲೆಗೆ ಮಾರಾಟ ಮಾಡಲಾಗಿದೆ. ಅಕ್ಟೋಬರ್ ವೇಳೆಗೆ 5G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.