ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರೊಂದಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ “ವಾರಿಸು” ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಚಿತ್ರದ ರಂಜಿದಮೇ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡುತ್ತಿದೆ. ದೇಶದಲ್ಲಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಬಹಳಷ್ಟು ವೈರಲ್ ಆಗಿರುವ ಈ ಹಾಡಿಗೆ ರಶ್ಮಿಕಾ ಅವರು ಹೆಜ್ಜೆ ಹಾಕಿರುವುದು ಎಲ್ಲರ ಗಮನ ಸೆಳೆದಿದೆ.

ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದ “ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಸಿನಿರಂಗಕ್ಕೆ ಪರಿಚಯವಾದ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಇದೀಗ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಬಹುಭಾಷಾ ಚಿತ್ರಗಳ ಮೂಲಕ ದೇಶದಾದ್ಯಂತ ಬಹಳಷ್ಟು ಫೇಮಸ್ಸು. ದಿನೇ ದಿನೇ ಹೊಸ ಹೊಸ ಚಿತ್ರಗಳ ಆಫರ ಗಳೊಂದಿಗೆ ಇವರ ಪ್ರಸಿದ್ಧಿ ಏರುತ್ತಲೇ ಇದೆ.

ತಮಿಳು ನಿರ್ದೇಶಕ ವಂಶಿಪೈಡುಪಲ್ಲಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾರಿಸು ಚಿತ್ರದಲ್ಲಿ ದಳಪತಿ ವಿಜಯವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅವರು ನಟಿಸುತ್ತಿದ್ದಾರೆ ಈ ಚಿತ್ರ 2023 ಜನವರಿ 12 ಕ್ಕೆ ಬಿಡುಗಡೆಗೊಳ್ಳಲಿದೆ. ಇದೀಗ ಚಿತ್ರದ ಒಂದು ಹಾಡಾದ “ರಂಜಿದಮೇ..” ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಬಹಳಷ್ಟು ವೈರಲ್ ಆಗಿದೆ.

ಪ್ರಪಂಚದಾದ್ಯಂತ ಜನ ಇದನ್ನು ನೋಡಿ ಮೆಚ್ಚಿದ್ದಾರೆ. ಈಗಾಗಲೇ 52 ಮಿಲಿಯನ್ ವೀಕ್ಷಣೆ ಪಡೆದಿರುವ ಈ ಹಾಡು ಗ್ಲೋಬಲ್ ಚಾರ್ಟ್ಸ್ ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇದನ್ನು ಶೇರ್ ಮಾಡಿರುವ ಹಾಡಿನ ಸಂಗೀತ ನಿರ್ದೇಶಕ ತಮನ್ ಎಸ್ ಸಂತಸ ವ್ಯಕ್ತಪಡಿಸಿದ್ದಾರೆ. ಹಾಡು ಇಷ್ಟು ಹಿಟ್ ಆಗಿರುವುದರಿಂದ ಸಹಜವಾಗಿ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಬಹಳ ಕುತೂಹಲ ಮೂಡಿದೆ. ಹೇಗಿರುತ್ತೆ ಏನೆಂಬುದನ್ನು ಕಾದು ನೋಡಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ