ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ಬಾಲಿವುಡ್ ನ ಹ್ಯಾಂಡ್ ಸಮ್ ಹುಡುಗ ಕಾರ್ತಿಕ್ ಆರ್ಯನ್ ಜೊತೆಯಲ್ಲಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಅಸಲಿ ವಿಚಾರವೇನೆಂದರೆ ಈ ಜೋಡಿ ಹೇರ್ ಕೇರ್ ಒಂದರ ಬ್ರ್ಯಾಂಡ್ ಅಂಬಾಸಿಡರ್ ಗಳಾಗಿ ನೇಮಕಗೊಂಡಿದ್ದಾರೆ.

ಹೌದು, D2C ಬ್ಯೂಟಿ ಬ್ರ್ಯಾಂಡ್ ವಾವ್ ಸ್ಕಿನ್ ಸೈನ್ಸ್‌ನ ಬಾಡಿ ಕ್ಯುಪಿಡ್ ಪ್ರೈವೇಟ್ ಲಿಮಿಟೆಡ್ ಇದೀಗ ಕಾರ್ತಿಕ್ ಆರ್ಯನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ತನ್ನ ಹೇರ್ ಕೇರ್ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ನೇಮಿಸಿದೆ.
ಅಂದ ಹಾಗೇ ಈ ಕಂಪೆನಿಯು ಕಳೆದ ಎರಡು ವರ್ಷಗಳಲ್ಲಿ ಕರೀನಾ ಕಪೂರ್ ಖಾನ್ ಮತ್ತು ಭೂಮಿ ಪೆಡ್ನೇಕರ್ ಅವರಂತಹ ಜನಪ್ರಿಯ ನಟಿಯರನ್ನು ಅದರ ರಾಯಭಾರಿಗಳನ್ನಾಗಿ ನೇಮಿಸಿತ್ತು. ಇದೀಗ ಆ ಅವಕಾಶ ರಶ್ಮಿಕಾ ಮಂದಣ್ಣ ಹಾಗೂ ಕಾರ್ತಿಕ್ ಆರ್ಯನ್ ಅವರಿಗೆ ದೊರಕಿದೆ.

“ಕಾರ್ತಿಕ್ ಆರ್ಯನ್ ಮತ್ತು ರಶ್ಮಿಕಾ ಮಂದಣ್ಣ ಅವರು ಈ ಬ್ರ್ಯಾಂಡ್ ನ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದಾರೆ. ನಟನೆಯ ಮೂಲಕ ಸಿನಿಮಾ ವೀಕ್ಷಕರ ಮನ ಸೆಳೆದ ಇವರನ್ನು ಯುವಜನರು ಕೂಡಾ ಮೆಚ್ಚುವುದರಲ್ಲಿ ಎರಡು ಮಾತಿಲ್ಲ. ಇದೀಗ ಇವರು ನಮ್ಮೊಂದಿಗೆ ಸೇರುತ್ತಿರುವುದಕ್ಕೆ ಖುಷಿ ಇದೆ” ಎಂದು ಸಂಸ್ಥೆಯ ಸಹ ಸಂಸ್ಥಾಪಕ ಮನೀಶ್ ಚೌಧರಿ ಹೇಳಿದ್ದಾರೆ.

ಇನ್ನು ಈ ಜಾಹೀರಾತಿನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವ ಕಾರ್ತಿಕ್ ಆರ್ಯನ್ “ನಾನು ನೈಸರ್ಗಿಕ ಉತ್ಪನ್ನಗಳ ಪ್ರತಿಪಾದಕ. ಇದೀಗ ಈ ಬ್ರ್ಯಾಂಡ್‌ನೊಂದಿಗೆ ಕೈ ಜೋಡಿಸುವ ಅವಕಾಶ ದೊರಕಿದೆ. ಮಾತ್ರವಲ್ಲ ಈ ಕಂಪೆನಿಯ ಭಾಗವಾಗಿರಲು ನಾನು ನಿಜವಾಗಿಯೂ ಎಕ್ಸೈಟ್ ಆಗಿದ್ದೇನೆ. ಇನ್ನು ನಟನಾಗಿ ನಾನು ಯಾವತ್ತಿಗೂ ಪ್ರೇಕ್ಷಕರನ್ನು ಮೊದಲ ಸ್ಥಾನದಲ್ಲಿ ಇಡುತ್ತೇನೆ. ಅಂತೆಯೇ ಈ ಬ್ರ್ಯಾಂಡ್ ಕೂಡಾ ಅದನ್ನೇ ಮಾಡುತ್ತದೆ. ಮೊದಲ ಸ್ಥಾನವನ್ನು ಜನರಿಗೆ ನೀಡುತ್ತದೆ” ಎಂದಿದ್ದಾರೆ.

ಇದರ ಜೊತೆಗೆ ರಶ್ಮಿಕಾ ಮಂದಣ್ಣ ಕೂಡಾ ಸಂತಸ ವ್ಯಕ್ತಪಡಿಸಿದ್ದು ” ವಾವ್ ಕುಟುಂಬದ ಭಾಗವಾಗುತ್ತಿರುವುದಕ್ಕೆ ನನಗೂ ಖುಷಿಯಿದೆ. ಮುಖ್ಯವಾಗಿ ಈ ಬ್ರ್ಯಾಂಡ್ ರಾಸಾಯನಿಕ ಮುಕ್ತವಾಗಿದೆ. ಜೊತೆಗೆ ಪರಿಸರ ಸ್ನೇಹಿಯಾಗಿದೆ” ಎಂದಿದ್ದಾರೆ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ