ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣನ್ ತಮಿಳು, ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಜನಪ್ರಿಯರಾದವರು. ಇತ್ತೀಚಿಗಷ್ಟೇ ಲೈಗರ್ ಸಿನೆಮಾದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬಂದಿದ್ದರು. ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ದೊಡ್ಡ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದ್ದು ದೊಡ್ಡ ಕಥೆ. ಆದರೆ ಇದರಲ್ಲಿನ ರಮ್ಯಾ ಕೃಷ್ಣನ್ ಅಭಿನಯ, ಅಭಿಮಾನಿಗಳ ಮನ ಗೆದ್ದಿರುವುದಂತೂ ಹೌದು.

ನಟಿ ರಮ್ಯಾ ಕೃಷ್ಣನ್ ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಬ್ಯುಸಿಯಾಗಿರುವವರು. ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಇವರು ನಂತರ ಹಲವು ಭಾಷೆಗಳ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಹುಬಲಿ ಸಿನಿಮಾದ ರಮ್ಯಾ ಕೃಷ್ಣನ್ ಪಾತ್ರ, ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿರುವಂತಹ ಪಾತ್ರ. ಶಿವಗಾಮಿನಿಯಾಗಿ ರಮ್ಯಾ ಕೃಷ್ಣನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದರು.

ಇನ್ನು ರಮ್ಯಾ ಕೃಷ್ಣ ನಟಿಯಾಗಿ ಎಷ್ಟು ಬೇಡಿಕೆ ಗಳಿಸಿದ್ದರೋ ಪೋಷಕ ನಟಿಯಾಗಿಯೂ ಅಷ್ಟೇ ಬೇಡಿಕೆಯನ್ನು ಸೃಷ್ಟಿಕೊಂಡವರು. ರಜನಿಕಾಂತ್, ಕಮಲ್ ಹಾಸನ್, ರವಿಚಂದ್ರನ್, ನಾಗಾರ್ಜುನ, ವಿಜಯ್, ಸಿಂಬು, ಸೂರ್ಯ ಹೀಗೆ ಅನೇಕ ಸ್ಟಾರ್ ಕಲಾವಿದರ ಜೊತೆ ತೆರೆಹಂಚಿಕೊಂಡು ಸೈ ಎನಿಸಿಕೊಂಡವರೂ ಹೌದು.

ಇದೀಕ ನಟಿ ತನ್ನ ಕ್ರಶ್ ಯಾರೆಂದು ಬಹಿರಂಗ ಪಡಿಸುವುದರೊಂದಿಗೆ ಹೊಸ ವಿಷಯದ ಮೂಲಕ ಜನಜನಿತರಾಗಿದ್ದಾರೆ. ಹೌದು, ತೆಲುಗು ಸ್ಟಾರ್ ನಟರೊಬ್ಬರು ತನ್ನ ಕ್ರಶ್ ಎಂದು ರಮ್ಯಾಕೃಷ್ಣನ್ ಹೇಳಿಕೊಂಡಿದ್ದಾರೆ.
ಸ್ಟಾರ್ ಕಲಾವಿದರ ಜೊತೆ ನಟಿಸಿರುವ ರಮ್ಯಾ ಕೃಷ್ಣನ್ ಕಿರುತೆರೆ ಕಾರ್ಯಕ್ರಮದಲ್ಲಿ ತನ್ನ ಕ್ರಶ್ ಯಾರು ಎಂದು ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ರಮ್ಯಾ ಕೃಷ್ಣನ್ ಅವರ ಕ್ರಶ್ ಮತ್ತೆ ಯಾರೂ ಅಲ್ಲ, ತೆಲುಗು ಸ್ಟಾರ್ ನಟ ನಾಗಾರ್ಜುನ. ಹೌದು, ಅಕ್ಕಿನೇನಿ ನಾಗಾರ್ಜುನ ತನ್ನ ಕ್ರಶ್ ಎಂದು ರಮ್ಯಾ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಜೋಡಿಗಳ ರಿಯಾಲಿಟಿ ಶೋನಲ್ಲಿ ನಾಗಾರ್ಜುನ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಆ ವೇಳೆ ಕಾರ್ಯಕ್ರಮದ ನಿರೂಪಕಿ, ನಾಗಾರ್ಜುನ ಅವರನ್ನು ಕ್ರಶ್ ಬಗ್ಗೆ ಪ್ರಶ್ನಿಸಿದಾಗ, ರಮ್ಯಾ ಕೃಷ್ಣನ್ ಉತ್ತರ ಕೊಟ್ಟಿದ್ದಾರೆ. ”ಅವರ ಕ್ರಶ್ ಯಾರೇ ಆಗಿದ್ರೂ ನಾಗಾರ್ಜುನ್ ಅವ್ರೇ ನನ್ನ ಕ್ರಶ್”ಎಂದಿದ್ದಾರೆ ರಮ್ಯಾ. ಉತ್ತರ ಕೇಳಿದ ಜನರೆಲ್ಲಾ ಶಿಳ್ಳೆ, ಚಪ್ಪಾಳೆ ಹಾಕಿದ್ದು ಮಾತ್ರವಲ್ಲದೆ ಸದ್ಯ ಇದು ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ.

ಅಂದಹಾಗೆ ರಮ್ಯಾ ಕೃಷ್ಣ ಮತ್ತು ನಾಗಾರ್ಜುನ ಜೊತೆಯಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ನಾಗಾರ್ಜುನ ಮತ್ತು ರಮ್ಯಾ ಕೃಷ್ಣ ಅವರ ಸೊಗಾಡೆ ಚಿನ್ನಿ ನಯನ’ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿತ್ತು. ರಮ್ಯಾ ಕೃಷ್ಣನ್ ಅವರ ಸದ್ಯದ ಸಿನಿಮಾ ಪಟ್ಟಿಯನ್ನು ನೋಡುವುದಾದರೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ