ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ಚಿತ್ರ ನಿರ್ದೇಶಿಸುತ್ತಿರುವುದು, ಹಾಗೂ ಆ ಸಿನಿಮಾದಲ್ಲಿ ಶಿವಣ್ಣ ಹಾಗೂ ಉಪೇಂದ್ರ ಅವರು ನಟಿಸುತ್ತಿರುವುದು ವಿಶೇಷವಾದರೆ, ಇದೀಗ ರಾಜ್ ಬಿ ಶೆಟ್ಟಿಯವರೂ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಹೊಸ ವಿಷಯವಾಗಿದೆ.

ಹೌದು! ನಟ, ನಿರ್ದೇಶಕ, ಮಾಸ್ ಐಕಾನ ರಾಜ್ ಬಿ ಶೆಟ್ಟಿಯವರು ಇದೀಗ ಅರ್ಜುನ್ ಜನ್ಯ ಅವರ ನಿರ್ದೇಶನದ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಗೆ ಮೂರು ಮಹಾ ನಟರ ಸಂಗಮ ತೆರೆ ಮೇಲೆ ಆಗಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಸುದ್ದಿ ಈಗಾಗಲೇ ಸಿನಿಪ್ರಿಯರಲ್ಲಿ ಹಾಗೂ ಅಭಿಮಾನಿಗಳಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ.

ಈ ಕುರಿತು ಪತ್ರಕರ್ತರೂಂದಿಗೆ ಮಾತನಾಡಿದ ರಾಜ್ ಬಿ ಶೆಟ್ಟಿ “ಸದ್ಯಕ್ಕೆ ನಾನು ಬಹಳ ಬ್ಯುಸಿ ಇದ್ದೇನೆ. ಯಾವುದೇ ಸಿನಿಮಾ ಒಪ್ಪಿಕೊಳ್ಳಲು ಸಾಧ್ಯ ಇರಲಿಲ್ಲ. ಆದರೆ ಅರ್ಜುನ್ ಜನ್ಯ ಅವರನ್ನು ಭೇಟಿಯಾದ ಮೇಲೆ ನನ್ನ ಮನಸ್ಸನ್ನು ಬದಲಾಯಿಸಿದ್ದೇನೆ. ಒಂದು ಒಳ್ಳೆಯ ಸಿನಿಮಾ ಹೊರತರುವ ತುಡಿತ ಅವರಲ್ಲಿದೆ. ಹಾಗಾಗಿ ನಟಿಸಲು ಒಪ್ಪಿಕೊಂಡೆ. ಜೊತೆಗೆ ಶಿವಣ್ಣ ಹಾಗೂ ಉಪ್ಪಿ ಅವರ ಜೊತೆ ನಟಿಸಲು ಕಾತುರದಿಂದಿದ್ದೇನೆ” ಎಂದಿದ್ದಾರೆ. ಬಹಳಷ್ಟು ನಿರೀಕ್ಷೆ ಇರುವ ಈ ಚಿತ್ರ ಪ್ರೇಕ್ಷಕರಿಗೆ ಹಾಗೂ ಕಲಾರಸಿಕರಿಗೆ ಒಂದೊಳ್ಳೆ ರಸದೌತಣ ನೀಡುವ ಎಲ್ಲಾ ಲಕ್ಷಣಗಳೂ ಇರುವುದಂತೂ ನಿಜ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ