ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೆಕಾಯಿಯ ಆರೋಗ್ಯ ಪುರಾಣದ ಬಗ್ಗೆ ನಿಮಗೆ ತಿಳಿದಿದೆಯಾ? ದ್ವಿದಳ ಧಾನ್ಯಗಳ ಸಾಲಿಗೆ ಸೇರಿರುವ ಕಡಲೆಕಾಯಿಯು ಪ್ರೋಟಿನ್ ಗಳ ಆಗರ. ಸವಿಯಲು ರುಚಿಯಾಗಿರುವ ಕಡಲೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಹಾಗೂ ಖನಿಜಗಳು ಹೇರಳವಾಗಿದ್ದು ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ನಿವಾರಿಸುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುವ ಕಡಲೆಕಾಯಿಯಲ್ಲಿ ಸತುವಿನ ಪ್ರಮಾಣ ಹೇರಳವಾಗಿದ್ದು ಇದು ಮೆದುಳಿನ ಕಾರ್ಯ ಸರಾಗವಾಗಿ ಸಾಗುವಂತೆ ಮಾಡುತ್ತದೆ. ಮಾತ್ರವಲ್ಲ ಸ್ಮರಣಶಕ್ತಿಯನ್ನು ಇದು ಹೆಚ್ಚಿಸುತ್ತದೆ.

ಪಿತ್ತಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ರಾಮಬಾಣವಾಗಿರುವ ಕಡಲೆಕಾಯಿಯು ಪಿತ್ತಕೋಶದಲ್ಲಿ ಕಂಡುಬರುವ ಕಲ್ಲಿನ ಸಮಸ್ಯೆಗೆ ಹೇಳಿ ಮಾಡಿಸಿದ ಮದ್ದು
ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನ ಕಾರಣದಿಂದಾಗಿ ಪಿತ್ತಕೋಶದಲ್ಲಿ ಕಲ್ಲುಗಳಾಗುತ್ತದೆ. ಕಡಲೆಕಾಯಿಯಲ್ಲಿ ಹೇರಳವಾಗಿರುವ ಪೋಷಕಾಂಶಗಳು
ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ. ಜೊತೆಗೆ ಪಿತ್ತಕೋಶದಲ್ಲಿ ಕಲ್ಲುಗಳಾಗದಂತೆ ನೋಡಿಕೊಳ್ಳುತ್ತದೆ.

ಕಡಲೇ ಕಾಯಿಯಲ್ಲಿರುವ ವಿಟಮಿನ್ ಸಿ, ಮ್ಯಾಂಗನೀಸ್ ಅಂಶವು ದೇಹಕ್ಕೆ ತುಂಬಾ ಒಳ್ಳೆಯದು. ಮುಖ್ಯವಾದ ವಿಚಾರವೆಂದರೆ ಕಡಲೆಕಾಯಿಯಲ್ಲಿ ಫೋಲಿಕ್ ಅಂಶವು ಹೇರಳವಾಗಿದ್ದು ಗರ್ಭಿಣಿಯರು ತಪ್ಪದೇ ತಿನ್ನಲೇಬೇಕು. ನಿಯಮಿತವಾಗಿ ಕಡಲೆಕಾಯಿ ತಿನ್ನುವುದರಿಂದ ಗರ್ಭದಲ್ಲಿರುವ ಶಿಶು ಆರೋಗ್ಯಕರ ಬೆಳವಣಿಗೆಯನ್ನು ಹೊಂದಲು ಸಾಧ್ಯ.

ಅಂದ ಹಾಗೇ ಆರೋಗ್ಯದ ಜೊತೆಗೆ ಸೌಂದರ್ಯವನ್ನು ವೃದ್ಧಿಸುವ ಶಕ್ತಿ ಪುಟ್ಟ ಕಡಲೆಕಾಯಿಗೆ ಇದೆ. ನಿಯಮಿತವಾಗಿ ಕಡಲೆಕಾಯಿ ಸೇವಿಸುವುದರಿಂದ ತ್ವಚೆಗೆ ಬೇಕಾದಂತಹ ಪೋಷಣೆಯು ಕೂಡಾ ದೊರೆಯುತ್ತದೆ. ತ್ವಚೆಯ ಕಾಂತಿಯು ಇಮ್ಮಡಿಯಾಗುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ