ನಿವೇದಿತಾ ಗೌಡ… ಕಿರುತೆರೆ ವೀಕ್ಷಕರಿಗಂತೂ ತೀರಾ ಪರಿಚಿತ ಹೆಸರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ನಿವೇದಿತಾ ಗೌಡ ಮಾತು, ನಡವಳಿಕೆ ಮೂಲಕ ವೀಕ್ಷಕರ ಮನ ಸೆಳೆದರು. ಕಿರುತೆರೆಯ ಬಾರ್ಬಿ ಡಾಲ್ ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ನಿವೇದಿತಾ ಗೌಡ ತಮ್ಮ ಸಹಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿ ಅವರನ್ನು ವರಿಸಿದ್ದು ವೀಕ್ಷಕರಿಗೆ ತಿಳಿದಿರುವ ವಿಚಾರ. ಬಿಗ್ ಬಾಸ್ ನಂತರ ಕಿರುತೆರೆಯಿಂದ ದೂರವಿದ್ದ ನಿವೇದಿತಾ ಓದಿನ ಕಡೆ ಗಮನ ಹರಿಸಿದ್ದರು.

ಮುಂದೆ ಏರ್ ಪೋರ್ಟ್ ನಲ್ಲಿ ಟರ್ಮಿನಲ್ ಆಫೀಸರ್ ಆಗಿ ಕೆಲಸ ಪಡೆದುಕೊಂಡಿದ್ದ ನಿವೇದಿತಾ ಗೌಡ ಸಂತಸದ ವಿಚಾರವನ್ನು ತಾವೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಎನ್ನುವ ಕಪಲ್ ಶೋವಿನಲ್ಲಿ ತಮ್ಮ ಪತಿ ಚಂದನ್ ಶೆಟ್ಟಿಯವರೊಂದಿಗೆ ಭಾಗವಹಿಸಿದ್ದ ನಿವೇದಿತಾ ಗೌಡ ಆ ಸಮಯದಲ್ಲಿ ಕೆಲಸಕ್ಕೆ ವಿದಾಯ ಹೇಳಿದರು.

ಮುಂದೆ ಗಿಚ್ಚಿ ಗಿಲಿ ಎನ್ನುವ ಕಾಮಿಡಿ ಶೋವಿನ ಸ್ಪರ್ಧಿಯಾಗಿ ಆಯ್ಕೆಯಾಗಿದ್ದ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾನೇ ಆಕ್ಟೀವ್ ಹೌದು. ನಿಯಮಿತವಾಗಿ ಪೋಸ್ಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರುವ ನಿವೇದಿತಾ ಗೌಡ ರೀಲ್ಸ್ ಮೂಲಕವೂ ಸದ್ದು ಮಾಡಿದ ಚೆಲುವೆ.
ಹಳೆಯ ಹಾಡುಗಳು ಮಾತ್ರವಲ್ಲದೇ ಹೊಸದಾಗಿ ಬಂದಿರುವಂತಹ ಹಾಡುಗಳಿಗೂ ಹೆಜ್ಜೆ ಹಾಕುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ ಬಾರ್ಬಿ ಡಾಲ್.
ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಅಭಿನಯದ ರಾಮಾಚಾರಿ ಸಿನಿಮಾದ ‘ಆಕಾಶದಾಗೆ ಯಾರೋ ಮಾಯಗಾರನೋ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ ನಿವೇದಿತಾ ಗೌಡ. ಕನಸಿನ ರಾಣಿಯ ಗೆಟಪ್ ನಲ್ಲಿಯೇ ಈ ಹಾಡಿಗೆ ಹೆಜ್ಜೆ ಹಾಕಿರುವ ನಿವೇದಿತಾ ಗೌಡ “ಮಾಯಾಗಾರನ ಹಾಡು ಯಾವಾಗಲೂ ನನಗೆ ಇಷ್ಟ”ಎಂದು ಬರೆದುಕೊಂಡಿದ್ದಾರೆ.

ರಿಯಾಲಿಟಿ ಶೋ ನಂತರ ಇದೀಗ ನಟನೆಯತ್ತ ಮುಖ ಮಾಡಲಿದ್ದಾರೆ ನಿವೇದಿತಾ ಗೌಡ. ಚುಕ್ಕಿ ಎನ್ನುವ ವೆಬ್ ಸಿರೀಸ್ ನಲ್ಲಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ನಿವೇದಿತಾ ಅದರಲ್ಲಿ ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ