ಸಿನಿಮಾಗಾಗಿ ನಟ ನಟಿಯರು ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದನ್ನು ನಾವು ಕೇಳಿದ್ದೇವೆ. ತೂಕದಲ್ಲಿರಬಹುದು, ನಟನೆಯಲ್ಲಿ ಬೇರೆಬೇರೆ ವ್ಯಕ್ತಿಗಳನ್ನು ಗಮನಿಸಿ ಅವರ ಹಾಗೆ ನಟಿಸುವುದನ್ನು ರೂಡಿಸಿಕೊಳ್ಳುವುದರಲ್ಲಿ ಅಥವಾ ಕೂದಲು ಕೂದಲಿನ ಬಣ್ಣ ಈ ರೀತಿ ಬೇರೆ ಬೇರೆ ಪಾತ್ರಗಳಿಗೆ ಜೀವ ತುಂಬಲು ನಟನೆ ಎಷ್ಟು ಮುಖ್ಯವೋ ಹಾಗೆ ಬಾಹ್ಯ ಸೌಂದರ್ಯದ ಬದಲಾವಣೆಗಳು ಮುಖ್ಯವಾಗುತ್ತದೆ ಹಾಗೂ ಅದೆಷ್ಟೋ ನಟರು ಅವರ ಪಾತ್ರಕ್ಕೆ ಜೀವ ತುಂಬಲು ಇವೆಲ್ಲವನ್ನು ಮಾಡುತ್ತಾರೆ. ಈಗ ಅಂತದ್ದೇ ಒಂದು ವಿಶೇಷ ಪಾತ್ರ ಮಾಡಲು ಬಾಲಿವುಡ್ ನ ಸ್ಟಾರ್ ನಟರು ಒಬ್ಬರು ಮಂಗಳ ಮುಖಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅವರೇ ನಟ ನವಜುದ್ದೀನ್ ಸಿದ್ದಿಕಿ.

ಈ ಮೊದಲು ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ನವಜುದ್ದೀನ್ ಇದೀಗ ಮಂಗಳಮುಖಿಯರ ಕುರಿತಾದ ಸಿನಿಮಾ ಒಂದರಲ್ಲಿ ನಟಿಸಲಿದ್ದು ಅದಕ್ಕಾಗಿ ಮಂಗಳಮುಖಿಯರ ಹಾಗೆ ತಮ್ಮ ಪಾತ್ರ ಅಂದರೆ ವೇಷವನ್ನು ಬದಲಾಯಿಸಿಕೊಂಡಿದ್ದಾರೆ. ಈ ಫೋಟೋ ಈಗಾಗಲೇ ಬಹಳಷ್ಟು ವೈರಲ್ ಆಗಿದ್ದು ಒಳ್ಳೆಯ ರೀತಿಯ ರೆಸ್ಪಾನ್ಸ್ ಸಿಗುತ್ತಿದೆ. ಪ್ರೇಕ್ಷಕರೆಲ್ಲರೂ ಮೆಚ್ಚಿದ್ದಾರೆ ಹಾಗೂ ಈ ಚಿತ್ರದ ಬಗ್ಗೆ ಬಹಳಷ್ಟು ಕುತೂಹಲ ಮೂಡಿದೆ ಎಂದೇ ಹೇಳಬಹುದು.

ಅಂದಹಾಗೆ ಈ ಮೊದಲು ಹಲವಾರು ನಟರು ಮಂಗಳಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಉಪೇಂದ್ರ ಅವರ ಇರಬಹುದು ಅಥವಾ ತಮಿಳಿನ ವಿಜಯ್ ಸೇತುಪತಿಯಾಗಿರಬಹುದು ಅಥವಾ ಕನ್ನಡದ್ದೇ ಇನ್ನೋರ್ವ ನಟ ಸಂಚಾರಿ ವಿಜಯ್, ಹಿಂದಿ ನಟ ಅಕ್ಷಯ್ ಕುಮಾರ್ ಹೀಗೆ ಹಲವಾರು ನಟರು ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಇದೀಗ ನವಜುದ್ದಿನ್ ಅವರು ಹಡ್ಡಿ ಎಂಬ ಚಿತ್ರಕ್ಕೆ ಅಂತದ್ದೇ ಪಾತ್ರ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಅವರ ಫಸ್ಟ್ ಲುಕ್ ಫೋಟೋವನ್ನು ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಮೂಲಕ ಈ ಬಗ್ಗೆ ಹೊಸ ಸಂಚಲನ ಮೂಡಿಸಿದ್ದಾರೆ. ಇದು ಯಾರಪ್ಪ ನಟ ಎಂದು ಪ್ರಶ್ನೆ ಮಾಡುವಷ್ಟು ಬದಲಾವಣೆಗಳು ಕಾಣಿಸುತ್ತಿದೆ. ಮಂಗಳಮುಖಿಯರ ನಡುವೆ ನಿಂತ ಫೋಟೋ ತುಂಬಾನೇ ವೈರಲ್ ಆಗಿದೆ.

ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನಟ ನವಾಸುದ್ದಿನ್ ಸಿದ್ದಿಕಿ “ಹಡ್ಡಿ ಸಿನಿಮಾದಲ್ಲಿ ನಿಜ ಜೀವನದ ಟ್ರಾನ್ಸ್ ಮಹಿಳೆಯರೊಂದಿಗೆ ಕೆಲಸ ಮಾಡಿರುವುದು ನಂಬಲಾಗದ ಅನುಭವವಾಗಿದೆ. ಅವರ ಜೊತೆ ಕೆಲಸ ಮಾಡಿದ್ದು ಶಕ್ತಿಯುತವಾಗಿತ್ತು” ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಮಂಗಳಮುಖಿಯಾಗಿ ನಟಿಸಲು ನವಾಜುದ್ದೀನ್ 80ಕ್ಕೂ ಅಧಿಕ ಮಂಗಳಮುಖಿಯರ ಜೊತೆ ಕೆಲಸ ಮಾಡಿದ್ದಾರೆ.

ಹಡ್ಡಿ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿದ ನವಾಜುದ್ದೀನ್, ತನ್ನ ಮಗಳು ಈ ಪಾತ್ರ ಮಾಡಿದ್ದಕ್ಕೆ ಅಪ್‌ಸೆಟ್ ಆಗಿದ್ದಳು ಎಂದು ಹೇಳಿದರು. ಅಲ್ಲದೇ ನಟಿಯರು ಯಾಕೆ ವ್ಯಾನಿಟಿ ವ್ಯಾನ್‌ನಿಂದ ಹೊರಬರುವುದು ತಡವಾಗುತ್ತದೆ ಎಂದು ನನಗೆ ಈಗ ಗೊತ್ತಾಯಿತು ಎಂದು ತಮಾಷೆಯೂ ಮಾಡಿದ್ದಾರೆ.

ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು “ನನ್ನ ಮಗಳು ಮೊದಲು ಈ ಲುಕ್ಕಿನಲ್ಲಿ ನೋಡಿದಾಗ ಅಚ್ಚರಿಪಟ್ಟಿದ್ದಳು ಬಹಳ ನೊಂದಿದ್ದಳು. ಆದರೆ ಈಗ ಅದು ಒಂದು ಅದ್ಭುತ ಪಾತ್ರಕ್ಕಾಗಿ ಅಂತ ತಿಳಿದ ಮೇಲೆ ಖುಷಿಪಟ್ಟಿದ್ದಾಳೆ. ನನಗೆ ಈಗ ತಿಳಿಯುತ್ತಿದ್ದ ನಟಿಯರು ಯಾಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು. ಸಾಮಾನ್ಯವಾಗಿ ನಾವು ಮಹಿಳೆಯರು ಡ್ರೆಸ್ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ತಮಾಷೆ ಮಾಡುತ್ತೇವೆ ಆದರೆ ನಿಜವಾಗಲೂ ಮಹಿಳೆಯರಿಗೆ ಅಷ್ಟು ಸಮಯ ಬೇಕಾಗುವುದು ಸಹಜ. ಕೂದಲಿನಿಂದ ಹಿಡಿದು ಮೇಕಪ್, ಡ್ರೆಸ್, ಉಗುರು, ಉಗುರಿನ ಬಣ್ಣ ಹೀಗೆ ಪ್ರತಿಯೊಂದು ಕೂಡ ಮ್ಯಾಟರ್ ಆಗುತ್ತದೆ ಇದೆಲ್ಲದಕ್ಕೂ ಗಮನ ಕೊಡಬೇಕಾಗುತ್ತದೆ ಹಾಗಾಗಿ ಅವರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ನನಗೆ ಇವಾಗ ಅರಿವಾಗಿದೆ. ಈಗ ನಾನು ಮೊದಲಿಗಿಂತಲೂ ಹೆಚ್ಚು ತಾಳ್ಮೆಯಿಂದ ಕೂಡ ಇದ್ದೇನೆ. ” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಚಿತ್ರದ ಬಗ್ಗೆ ಬಹಳಷ್ಟು ಮಾತುಕತೆಗಳಾಗುತ್ತಿದ್ದು ಚಿತ್ರ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ ಎಂದು ಹೇಳಬಹುದು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ