ಡಾರ್ಕ್ ಫ್ಯಾಂಟಸಿ ಮತ್ತು ಆಡಿಸಿದಾತ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸುಶ್ಮಿತಾ ದಾಮೋದರ್ ಅವರು ಇದೀಗ ಸವಾಲಿನ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಫಣೀಶ್ ಭಾರಧ್ವಾಜ್ ನಿರ್ದೇಶನದ ಡಾರ್ಕ್ ಫ್ಯಾಂಟಸಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಸುಶ್ಮಿತಾ ದಾಮೋದರ್ ಬಣ್ಣದ ಪಯಣಕ್ಕೆ ಮುನ್ನುಡಿ ಬರೆದುದು ಮಾಡೆಲಿಂಗ್. ಎಂಬಿಎ ಪದವಿ ಪಡೆದ ಸುಶ್ಮಿತಾ ಮುಂದೆ ಮುಖ ಮಾಡಿದ್ದು 2016ರ ಮಿಸ್ ಬೆಂಗಳೂರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಚೆಲುವೆ. ಮುಂದೆ 2018ರಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದ ಈಕೆ 2019ರಲ್ಲಿ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದರು.

ಭಾರತ ಮತ್ತು ವಿದೇಶ ಸೇರಿದಂತೆ ವಿವಿಧ ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡಿರುವ ಸುಂದರಿ 28 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಂದೆ ಫ್ಯಾಷನ್ ಜಗತ್ತಿಗೆ ಕಾಲಿಡುವ ಮಾಡೆಲ್‌ಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದ ಸುಶ್ಮಿತಾ ಫ್ಯಾಷನ್ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿರುವ ಸುಶ್ಮಿತಾ “ಡಾರ್ಕ್ ಪ್ಯಾಂಟಸಿ ಸಿನಿಮಾದ ನಿರ್ದೇಶಕ ಫಣೀಶ್ ಭಾರದ್ವಾಜ್ ಅವರು ನಾಯಕಿಯಾಗುವ ಅವಕಾಶ ನೀಡಿದಾಗ ತುಂಬಾ ಸಂತಸವಾಯಿತು. ಸಣ್ಣ ವಯಸ್ಸಿನಲ್ಲಿ ಕಲೆಕ್ಟರ್ ಆಗಬೇಕೆಂಬ ಕನಸು ಕಂಡಿದ್ದ ಸುಶ್ಮಿತಾ ಅವರು ಮನಸ್ಸು ಬದಲಾಗಲು ಕಾರಣ ನಾಟಕ. ಕೆಲವು ನಾಟಕಗಳಲ್ಲಿ ನಟಿಸಿದ ಸುಶ್ಮಿತಾ ಮುಂದೆ ತಮ್ಮ ಮನಸ್ಸು ಬದಲಾಯಿಸಿಕೊಂಡು ನಟಿಯಾಗ ಬಯಸಿದರು.

ಕೋಡ್ಲು ರಾಮಕೃಷ್ಣ ಅವರ ಮಕ್ಕಳೇ ಮಾಣಿಕ್ಯ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ಸುಶ್ಮಿತಾ “ಮೊದಲಿನಿಂದಲೂ ನನಗೆ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶಗಳು ದೊರಕಿತ್ತು. ಡಾರ್ಕ್ ಫ್ಯಾಂಟಸಿ ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ. ಮೊದಲ ಬಾರಿಗೆ ನಾನು ಸಿನಿಮಾ ಸ್ಕ್ರಿಪ್ಟ್ ಕೇಳಿದಾಗಲೇ ನಾನು ಮೆಚ್ಚಿಕೊಂಡೆ. ಕೂಡಲೇ ಓಕೆ ಎಂದೆ. ಸಿನಿಮಾವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಮತ್ತು ಬಿಡುಗಡೆಗೆ ಸಜ್ಜಾಗುತ್ತಿದೆ” ಎಂದು ಹೇಳುತ್ತಾರೆ.

ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಡಿಸಿದಾಟದಲ್ಲಿ ಪ್ರಮುಖ ನಟಿಸಿದ್ದಾರೆ. ಹಿರಿಯ ನಟಿ ಮಾಲಾಶ್ರೀ ಅವರ ದೊಡ್ಡ ಅಭಿಮಾನಿಯಾಗಿರುವ ಸುಶ್ಮಿತಾ “ನಾನು ಮಾಲಾಶ್ರೀ ಅವರನ್ನು ನೋಡುತ್ತಾ ಬೆಳೆದವಳು. ನನ್ನ ವೃತ್ತಿಜೀವನದಲ್ಲಿ ನಾನು ಸವಾಲಿನ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ನಾನು ನಟಿಸುವ ಪಾತ್ರಗಳು ಸಮಾಜಕ್ಕೆ ಉತ್ತಮ ಸಂಬಂಧಿತ ಸಂದೇಶಗಳನ್ನು ನೀಡಬಯಸುತ್ತೇನೆ” ಎನ್ನುತ್ತಾರೆ ಸುಶ್ಮಿತಾ ದಾಮೋದರ್.