ನಿಮಗೆ ನಿಮ್ಮ ದೇಹದ ತೂಕ ಹೆಚ್ಚಾಗಿದೆ ಎಂದಿನಿಸುತ್ತಿದೆಯೇ? ಬೊಜ್ಜಿನ ಸಮಸ್ಯೆಯಿಂದ ಪರದಾಡುತ್ತಿರುವಿರಾ? ಯಾವಾಗ ಶುಗರ್ ಬರಬಹುದು ಎಂಬ ಭಯವಿದೆಯೇ? ಇದಕ್ಕಾಗಿ ತುಂಬಾ ಚಿಂತಿಸುವ ಅಗತ್ಯವಿಲ್ಲ. ಇಂತಹ ಸಮಸ್ಯೆಗಳ ನಿವಾರಣೆಗಾಗಿಯೇ ಇಲ್ಲಿ ಹೇಳಿರುವ ಮೂರು ತರಹದ ಮಿಲ್ಕ್ ಶೇಕ್ ಗಳನ್ನು ನೀವು ಬಳಸಬಹುದು. ಎಲ್ಲವೂ ಆರೋಗ್ಯಕರ ಮತ್ತು ನೈಸರ್ಗಿಕ.ಇವುಗಳಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ. ಯಾರು ಬೇಕಾದರೂ ಇವುಗಳನ್ನು ಕುಡಿಯಬಹುದು. ನಿಮ್ಮ ಆರೋಗ್ಯಕ್ಕೆ ಮತ್ತು ತೂಕ ನಿರ್ವಹಣೆಗೆ ಉತ್ತಮ ಸಂಗಾತಿ ಎಂದರೆ ತಪ್ಪಾಗಲಾರದು.

ಜೇನುತುಪ್ಪ ಮತ್ತು ವಾಲ್ನಟ್ ಮಿಲ್ಕ್ ಶೇಕ್
ಸಕ್ಕರೆಗೆ ಪರ್ಯಾಯವಾಗಿ ಜೇನುತುಪ್ಪ ಬಳಕೆ ಮಾಡಿದರೆ ನಿಮ್ಮ ದೇಹದ ತೂಕ ಸಾಕಷ್ಟು ಕಂಟ್ರೋಲ್ ಆಗುತ್ತದೆ. ಇದರ ಜೊತೆಗೆ ವಾಲ್ನೆಟ್ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳನ್ನು ಕೊಡುತ್ತದೆ. ಇದರಲ್ಲಿ ನಾರಿನ ಅಂಶ ಕೂಡ ಹೆಚ್ಚಾಗಿರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ. ಬೇಕೆಂದರೆ ಇದಕ್ಕೆ ಸ್ವಲ್ಪ ಪ್ರೋಟೀನ್ ಪೌಡರನ್ನೂ ಮಿಶ್ರಣ ಮಾಡಿಕೊಳ್ಳಬಹುದು.
ಈ ಮಿಲ್ಕ್ ಶೇಕ್ ತಯಾರು ಮಾಡುವ ವಿಧಾನ
2 ಟೀಸ್ಪೂನ್ ಜೇನುತುಪ್ಪ ಮತ್ತು 2 ಟೀಸ್ಪೂನ್ ವಾಲ್ನಟ್ ಜೊತೆಗೆ ಅರ್ಧ ಕಪ್ ಕಡಿಮೆ ಕೊಬ್ಬಿನ ಅಂಶ ಇರುವ ಚೀಸ್ ಅಥವಾ ಮೊಸರು ಮತ್ತು ಬೇಕಾದಲ್ಲಿ 3 ಟೇಬಲ್ ಚಮಚ ಪ್ರೋಟೀನ್ ಪೌಡರ್ ಇವುಗಳನ್ನು ಕಾಲು ಕಪ್ ತಂಪಾದ ನೀರಿನಲ್ಲಿ ಮಿಶ್ರಣ ಮಾಡಿ ತಯಾರು ಮಾಡಿದರಾಯಿತು. ಬೇಕಾದರೆ ಇದು ಗಟ್ಟಿಯಾಗಲು ಸ್ವಲ್ಪ ಐಸ್ ಕ್ಯೂಬ್ ಗಳನ್ನು ಹಾಕಬಹುದು.

ಬಾಳೆಹಣ್ಣು ಮತ್ತು ಕ್ಯಾರೆಟ್ ಮಿಲ್ಕ್ ಶೇಕ್
ಇದರಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೌಷ್ಟಿಕಾಂಶ ಇರುತ್ತದೆ. ಜೊತೆಗೆ ಕ್ಯಾರೆಟ್ ನಲ್ಲಿ ಹೆಚ್ಚಿನ ನಾರಿನ ಅಂಶ, ವಿಟಮಿನ್ ಮತ್ತು ಖನಿಜಾಂಶಗಳೂ ಇರುತ್ತವೆ. ನೈಸರ್ಗಿಕವಾಗಿ ಇವು ಸಿಹಿಯ ಅಂಶವನ್ನು ಒಳಗೊಂಡಿರುವ ಕಾರಣ ಹೆಚ್ಚುವರಿಯಾಗಿ ಸಕ್ಕರೆ ಹಾಕುವ ಪ್ರಮೇಯ ಬರುವುದಿಲ್ಲ. ಇದೊಂದು ಆರೋಗ್ಯಕರವಾದ ಮಿಲ್ಕ್ ಶೇಕ್ ಎಂದು ಹೇಳಬಹುದು.
ತಯಾರಿಸುವ ವಿಧಾನ
ಬಾಳೆಹಣ್ಣು, 2ಟೇಬಲ್ ಚಮಚ ತುರಿದ ಕ್ಯಾರೆಟ್, 1ಟೇಬಲ್ ಚಮಚ ಮೊಸರು, ಒಂದು ಕಪ್ ಹಾಲು, 1 ಕಪ್ ಕ್ರೀಮ್ ಮತ್ತೊಂದು ಟೀ ಚಮಚ ಜೇನುತುಪ್ಪ ಎಲ್ಲವನ್ನೂ ಒಟ್ಟಿಗೆ ಬ್ಲೆಂಡ್ ಮಾಡಬೇಕು.
ಇದಕ್ಕೆ ಸ್ವಲ್ಪ ಐಸ್ ಕ್ಯೂಬ್ ಗಳನ್ನು ಹಾಕಿ ಮಿಶ್ರಣ ಮಾಡಿ ಗಟ್ಟಿಯಾಗುವಂತೆ ನೋಡಿಕೊಳ್ಳಬೇಕು. ಒಂದು ಕಂಟೈನರ್ ನಲ್ಲಿ ಹಾಕಿ ಆನಂತರ ಕುಡಿಯಬಹುದು.

ಚಾಕಲೇಟ್ ಮಿಲ್ಕ್ ಶೇಕ್
ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಚಾಕಲೇಟ್ ಕೂಡ ಸಹಾಯ ಮಾಡುತ್ತದೆ. ಆದರೆ ಇದು ತುಂಬಾ ಜನರಿಗೆ ಗೊತ್ತಿಲ್ಲ. ಸಕ್ಕರೆ ಅಂಶ ಹೆಚ್ಚಾಗಿರುವ ಚಾಕ್ಲೆಟ್ ಬಳಕೆ ಮಾಡುವುದನ್ನು ಬಿಟ್ಟು ಡಾರ್ಕ್ ಚಾಕಲೇಟ್ ಬಳಸಿದರೆ ಉತ್ತಮ. ಇದರಿಂದ ತಯಾರಾಗುವ ಮಿಲ್ಕ್ ಶೇಕ್ ತೂಕವನ್ನು ಸಾಕಷ್ಟು ನಿಯಂತ್ರಣ ಮಾಡಬಲ್ಲದು.
ತಯಾರು ಮಾಡುವ ವಿಧಾನ
ಒಂದು ಬಾಳೆಹಣ್ಣು , ಒಂದು ಕಪ್ ಸಿಹಿ ರಹಿತ ಬಾದಾಮಿ ಹಾಲು, 2 ಟೇಬಲ್ ಚಮಚ ಡಾರ್ಕ್ ಕೋಕೋ ಪೌಡರ್, 2 ಟೀ ಚಮಚ ಮ್ಯಾಪಲ್ ಸಿರಪ್ ಎಲ್ಲವನ್ನು ಚೆನ್ನಾಗಿ ಬ್ಲೆಂಡ್ ಮಾಡಬೇಕು. ಜೊತೆಗೆ ಐಸ್ ಕ್ಯೂಬ್ ಹಾಕಿದರೆ ಒಳ್ಳೆಯದು. ಕತ್ತರಿಸಿದ ಬಾದಾಮಿ ಬೀಜಗಳಿಂದ ಅಲಂಕಾರ ಮಾಡಿ ಒಂದು ಕಂಟೇನರ್ ನಲ್ಲಿ ಹಾಕಿ ಕುಡಿಯಲು ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ