ಕ್ಯಾಲಿಫೋರ್ನಿಯಾದಲ್ಲಿ ನಡೆದ “ಭಾರತ ಸ್ವಾತಂತ್ರ್ಯ ದಿನಾಚರಣೆ”ಯಲ್ಲಿ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಸರ್ಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸ್ವಾತಂತ್ರೋತ್ಸವದಂದು ನಡೆದ ಈವೆಂಟ್ ನಲ್ಲಿ ಗ್ರ್ಯಾಂಡ್ ಮಾರ್ಷಲ್ ಆಗಿ ಭಾಗವಹಿಸಿದ್ದ ನಟ ಅಭಿಮನ್ಯು ಅವರೊಂದಿಗೆ ಮೇಘನಾ ರಾಜ್ ಅವರು ಕೂಡಾ ಪರೇಡ್ ನಲ್ಲಿ ಭಾಗವಹಿಸಿದ್ದಾರೆ.

ಈ ಕುರಿತಾದ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮೇಘನಾ ರಾಜ್ ಇಂತಹ ಅದ್ಭುತ ಕಾರ್ಯಕ್ರಮಕ್ಕೆ ತನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದಕ್ಕಾಗಿ ಫ್ರೀಮಾಂಟ್ ನಗರದ ಮೇಯರ್‌ಗೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.

“ಈ ಬಾರಿಯ ಸ್ವಾತಂತ್ರೋತ್ಸವ ನನ್ನ ಪಾಲಿಗೆ ತುಂಬಾ ವಿಶೇಷವಾದುದು. ಈ ಸುಂದರ ಕ್ಷಣವನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ಕ್ಯಾಲಿಫೋರ್ನಿಯಾ ಮತ್ತು ಫ್ರೀಮಾಂಟ್ ನಗರದ ಜನರಿಗೆ ನಾನು ಅದೆಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ಮಂಜು (ಗ್ಲೋಬ್ ಉತ್ಸವ) ಮತ್ತು ಡಾ. ರೋಮೇಶ್ ಜಾಪ್ರಾ ಅವರ ನೇತೃತ್ವದಲ್ಲಿ ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಈ ಸಂಪ್ರದಾಯವನ್ನು ಮುಂದುವರಿದುಕೊಂಡು ಬಂದಿದೆ. ಇದರ ಭಾಗವಾಗಿರುವುದು ನನಗೆ ಖುಷಿ ತಂದಿದೆ” ಎಂದಿದ್ದಾರೆ.

ಇನ್ನು ಇದರ ಜೊತೆಗೆ ” ನಾನು ಈ ಬಾರಿಯ ಸ್ವಾತಂತ್ರ್ಯೋತ್ಸವದ ಗ್ರ್ಯಾಂಡ್ ಮಾರ್ಷಲ್ ಆಗಿದ್ದರಿಂದ ಈ ಸ್ವಾತಂತ್ರ್ಯ ದಿನಾಚರಣೆಯು ನನಗೆ ಜೀವನದ ವಿಶೇಷವಾದ ಕ್ಷಣಗಳಲ್ಲಿ ಒಂದಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನನ್ನ ಸಹವರ್ತಿ, ಗ್ರ್ಯಾಂಡ್ ಮಾರ್ಷಲ್ ನಟ ಅಭಿಮನ್ಯು ಅವರನ್ನು ಭೇಟಿಯಾಗಿದ್ದು ಕೂಡಾ ನನ್ನ ಪಾಲಿಗೆ ಅತ್ಯಂತ ಸುಮಧುರ ಕ್ಷಣವಾಗಿತ್ತು. ಇದಕ್ಕಾಗಿ ನಾನು ಗೌರವಾನ್ವಿತ ಫ್ರೀಮಾಂಟ್ ನಗರದ ಮೇಯರ್ ಅವರಿಗೆ ಪ್ರಾಮಾಣಿಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ” ಎಂದಿದ್ದಾರೆ ಮೇಘನಾ ರಾಜ್ ಸರ್ಜಾ.

ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ