‘ಶಿವಾಜಿ ಸುರತ್ಕಲ್ 2: ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಚಿತ್ರದ ಟೀಸರ್ ರಮೇಶ್ ಅರವಿಂದ್ ಅವರ ಜನ್ಮದಿನದಂದು ಅಂದರೆ ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ. ಶಿವಾಜಿ ಸುರತ್ಕಲ್ ಭಾಗ 2, ಅಂತಿಮ ಹಂತದಲ್ಲಿದ್ದು ಬಹುತೇಕ ಚಿತ್ರೀಕರಣ ಮುಗಿದು ಡಬ್ಬಿಂಗ್ ನಡೆಯುತ್ತಿದೆ. ಇನ್ನು ಟೀಸರ್ ಬಿಡುಗಡೆಗೆ ಮುಂಚಿತವಾಗಿ, ಚಲನಚಿತ್ರ ನಿರ್ಮಾಪಕ ಆಕಾಶ್ ಶ್ರೀವತ್ಸ ಅವರು ಮೇಘನಾ ಗಾಂವ್ಕರ್ ಅವರ ಪಾತ್ರದ ಮೊದಲ ನೋಟವನ್ನು ಬಹಿರಂಗಪಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಆಕಾಶ್, “ಮೇಘನಾ ಡಿಸಿಪಿ ದೀಪಾ ಕಾಮತ್ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಶಿವಾಜಿಯ ಮುಖ್ಯಸ್ಥರಾಗಿದ್ದಾರೆ. ಮಾತ್ರವಲ್ಲ ಶಿವಾಜಿಗೆ ಪ್ರಕರಣವನ್ನು ನಿಯೋಜಿಸುತ್ತಾರೆ. ಅವರ ಪಾತ್ರಕ್ಕೆ ಹಲವಾರು ಛಾಯೆಗಳಿವೆ ಮತ್ತು ನಾವು ಮೇಘನಾರನ್ನು ಆರಿಸಲೂ ಇದೂ ಒಂದು ಕಾರಣವಾಗಿದೆ” ಎಂದರು.

ಮೇಘನಾ ಅವರ ಪಾತ್ರವನ್ನು ಇನ್ನಷ್ಟು ಬೆಳೆಸುವ ಬಗ್ಗೆ ಹೆಚ್ಚಿನ ಚಿಂತನೆ ನಡೆಯುತ್ತಿದೆ ಎನ್ನುವ ಆಕಾಶ್, “ಶಿವಾಜಿ ಮೆದುಳು ಇದ್ದಂತೆ, ಆದರೆ ನಮಗೆ ವಿಶಿಷ್ಟವಾದ ಪೊಲೀಸ್ ಶಕ್ತಿಯನ್ನು ತರಬಲ್ಲವರು ಬೇಕಾಗಿದ್ದರು. ಮೇಘನಾ ಪಾತ್ರದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಮತ್ತು ಅವರ ತಂದೆ ಪೋಲೀಸ್ ಆಗಿದ್ದು ಕೂಡಾ ಪ್ಲಸ್ ಪಾಯಿಂಟ್ ಆಯಿತು. ಮಹಿಳಾ ಪೊಲೀಸರ ದೇಹ ಭಾಷೆ ಮತ್ತು ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಅವರು ರೂಪಾ ಮೌದ್ಗಿಲ್ ಮತ್ತು ಇತರ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿದ್ದರು. ನಾವು ಪ್ರಜ್ಞಾಪೂರ್ವಕವಾಗಿ ನೈಜವಾಗಿರಲು ಪ್ರಯತ್ನಿಸಿದ್ದೇವೆ ಮತ್ತು ಅವರನ್ನು ಗ್ಲಾಮರಸ್ ಪೋಲೀಸ್ ಎಂದು ಬಿಂಬಿಸುವುದಿಲ್ಲ” ಎನ್ನುತ್ತಾರೆ.

ಮೇಘನಾ ಈ ಫ್ರಾಂಚೈಸಿಯ ದೀರ್ಘಕಾಲದ ಭಾಗವಾಗಿರಲಿದ್ದಾರೆ ಎಂದು ಆಕಾಶ್ ಬಹಿರಂಗಪಡಿಸಿದ್ದಾರೆ. “ದೀಪಾ ಅವರ ಪಾತ್ರವು ಈ ಫ್ರಾಂಚೈಸ್‌ನ ಮುಂದಿನ ಚಲನಚಿತ್ರಗಳಲ್ಲಿ ಅವರು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ಹೇಳುತ್ತದೆ. ಅವರ ಪಾತ್ರಕ್ಕೆ ಖಂಡಿತವಾಗಿಯೂ ದೀರ್ಘಾವಧಿಯ ಶೆಲ್ಫ್ ಲೈಫ್ ಇದೆ. ಅವರನ್ನು ನಾನು ‘ನಿಕ್ ಫ್ಯೂರಿ’ಗೆ ಹೋಲಿಸುತ್ತೇನೆ. ಅವೆಂಜರ್ಸ್ ಫ್ರಾಂಚೈಸ್‌ನಲ್ಲಿ ‘ಸ್ಯಾಮ್ಯುಯೆಲ್ ಎಲ್ ಜಾಕ್ಸನ್’ ನಿರ್ವಹಿಸಿದ ಪಾತ್ರ. ಆಪತ್ರಕ್ಕೂ ಈ ಪಾತ್ರಕ್ಕೂ ಬಹಳಷ್ಟು ವ್ಯತ್ಯಾಸವಿದೆ ವಿಭಿನ್ನವಾದ ದೃಷ್ಟಿಕೋನವನ್ನು ತರಿಸುವ ಶಕ್ತಿ ಈ ಪಾತ್ರಗಳಿಗಿದೆ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ