ಸಿನಿಮಾರಂಗದಲ್ಲಿ ಸೀಕ್ವೆಲ್ ಬರುವುದು ಇದೀಗ ಟ್ರೆಂಡ್ ಆಗಿ ಬಿಟ್ಟಿದೆಯೆಂದು ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ. ರ್ಯಾಂಬೋ – ರ್ಯಾಂಬೋ 2, ಸವಾರಿ – ಸವಾರಿ 2, ದೃಶ್ಯ – ದೃಶ್ಯ 2, ಭಜರಂಗಿ – ಭಜರಂಗಿ 2, ಮುಂಗಾರು ಮಳೆ – ಮುಂಗಾರು ಮಳೆ 2, ಲವ್ ಮಾಕ್ಟೈಲ್ – ಲವ್ ಮಾಕ್ಟೈಲ್ 2, ಕೆ.ಜಿ. ಎಫ್ ಚಾಪ್ಟರ್ 1 – ಕೆ.ಜಿ.ಎಫ್ ಚಾಪ್ಟರ್ 2, ಗಾಳಿಪಟ – ಗಾಳಿಪಟ 2 ಹೀಗೆ ಸಿನಿಮಾಗಳಲ್ಲಿ ಸೀಕ್ವೆಲ್ ಬರುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿ ಬಿಟ್ಟಿದೆ. ಇದೀಗ ಆ ಟ್ರೆಂಡ್ ಕಿರುತೆರೆಗೂ ಕಾಲಿಟ್ಟಿದೆ ಎನ್ನುವುದಕ್ಕೆ ಶೀಘ್ರದಲ್ಲಿ ಶುರುವಾಗಲಿರುವ ಮತ್ತೆ ಮಯಾಮೃಗ ಧಾರಾವಾಹಿಯೇ ಉದಾಹರಣೆ.

ಬರೋಬ್ಬರಿ 25 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಮಯಾಮೃಗ ಧಾರಾವಾಹಿಯು ಆಗಿನ ಕಾಲದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಯಕೊಂಡಿದ್ದ ಧಾರಾವಾಹಿ ಎಂದರೆ ತಪ್ಪಾಗಲಾರದು. ಟಿ.ಎನ್. ಸೀತಾರಾಮ್ ನಿರ್ದೇಶನದ ಮಾಯಾಮೃಗ ಧಾರಾವಾಹಿಯ ಮುಂದುವರಿದ ಭಾಗ ‘ಮತ್ತೆ ಮಾಯಾಮೃಗ’ ಅತೀ ಶೀಘ್ರದಲ್ಲಿ ಸಿರಿಕನ್ನಡ ಚಾನೆಲ್ ನಲ್ಲಿ ಶುರುವಾಗಲಿದೆ.

ಮತ್ತೆ ಮಯಾಮೃಗ ಧಾರಾವಾಹಿಯಲ್ಲಿ ಹಳೇ ತಂಡದ ಅರ್ಥಾತ್ ಹಳೆಯ ಕಲಾವಿದರುಗಳ ಜೊತೆಗೆ ಹೊಸಬ ಕಲಾವಿದರು ಬಣ್ಣ ಹಚ್ಚಲಿರುವುದು ಸಂತಸದ ವಿಚಾರ. ಈ ಬಗ್ಗೆ ಮಾತನಾಡಿರುವ ಟಿ.ಎನ್. ಸೀತಾರಾಮ್ ಅವರು “25 ವರ್ಷಗಳಷ್ಟು ಹಿಂದಿನ ಮಾಯಮೃಗ ಧಾರಾವಾಹಿಯ ಮುಂದುವರಿದ ಭಾಗ ಮಾಡುವುದು ನಿಜವಾಗಿಯೂ ಸುಲಭದ ವಿಚಾರವಲ್ಲ. ಈ ಸಮಯದಲ್ಲಿ ನಾವು ಸಾಕಷ್ಟು ಸವಾಲುಗಳನ್ನು ಎದುರಾಗುತ್ತದೆ. ಅದನ್ನೆಲ್ಲಾ ಎದುರಿಸಬೇಕು. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ” ಎಂದಿದ್ದಾರೆ.

“ಸಿರಿಕನ್ನಡ ಚಾನೆಲ್ ನ ಸಂಜಯ್ ಶಿಂಧೆ ಅವರು ಈ ಪ್ರಪೋಸಲ್ ತಂದಾಗ ನನಗೆ ಸಂತಸಕ್ಕಿಂತ ಹೆಚ್ಚಿಗೆ ಭಯ ಉಂಟಾಗಿತ್ತು. ಎಲ್ಲದಕ್ಕಿಂತಲೂ ಮೊದಲನೆಯದಾಗಿ ಮಾಯಾಮೃಗ ಧಾರಾವಾಹಿಯ ಸೀಕ್ವೆಲ್ ಮಾಡುವುದು ಹೇಗೆ ಎಂಬ ಚಿಂತೆಯು ಕೂಡಾ ಕಾಡಿತು. ಅಂದು ಮಾಯಮೃಗ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅನೇಕರು ಇಂದು ಬೇರೆ ಬೇರೆ ಕಡೆ ಇದ್ದಾರೆ. ಇನ್ನು ಕೆಲವರಂತೂ ಬಣ್ಣದ ಜಗತ್ತಿನಲ್ಲಿ ಇಲ್ಲ” ಎಂದು ಹೇಳುತ್ತಾರೆ ಟಿ.ಎನ್. ಸೀತಾರಾಮ್.

1988ರಲ್ಲಿ ಡಿಡಿ ಚಂದನದಲ್ಲಿ ಪ್ರಸಾರವಾಗಿದ್ದ ಮಾಯಮೃಗ ಧಾರಾವಾಹಿಯನ್ನು ಟಿ. ಎನ್. ಸೀತಾರಾಮ್ ಅವರು ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ಜೊತೆಯಾಗಿ ನಿರ್ದೇಶಿಸಿದ್ದರು. ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು. ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಸಮಾಜವನ್ನು ಉತ್ತಮಗೊಳಿಸಲು ಪ್ರಯತ್ನಿಸುವ ಇಬ್ಬರು ಮಧ್ಯಮ ವರ್ಗದ ಹುಡುಗಿಯರ ಕುರಿತಾಗಿರುವ ಮಾಯಮೃಗ ಧಾರಾವಾಹಿಯು ಅಂದು ಕಥೆಯ ಹೊರತಾಗಿ ಕಲಾವಿದರುಗಳ ಮೂಲಕವೂ ಮನೆ ಮಾತಾಗಿತ್ತು.
ಎಚ್. ಜಿ. ದತ್ತಾತ್ರೇಯ, ಅವಿನಾಶ್, ಜಯಶ್ರೀ, ರೇಖಾ, ರಾಜೇಶ್, ಮಂಜು ಭಾಷಿಣಿ, ಮಾಳವಿಕ ಅವಿನಾಶ್, ಎಸ್. ಎನ್. ಸೇತುರಾಂ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ವಿದ್ಯಾ ಆಗಿ ಎಂ. ಡಿ. ಪಲ್ಲವಿ ಅಭಿನಯಿಸಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ