ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಹೊಸ ಸೀಸನ್ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ನಿನ್ನೆಯಷ್ಟೇ ಪ್ರಸಾರ ಶುರು ಮಾಡಿದೆ. ಈ ಸೀಸನ್ ನ 17 ನೇ ಸ್ಪರ್ದಿಯಾಗಿ ಮಂಗಳಗೌರಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೆಗಾ ಧಾರಾವಾಹಿ ಮಂಗಳ ಗೌರಿ ಮದುವೆಯಲ್ಲಿ ನಾಯಕಿ ಮಂಗಳಗೌರಿಯಾಗಿ ಅಭಿನಯಿಸುತ್ತಿರುವ ಕಾವ್ಯಶ್ರೀ ಇದೀಗ ಮೊದಲ ಬಾರಿಗೆ ರಿಯಾಲಿಟಿ ಶೋ ವಿನಲ್ಲಿ ಕಮಾಲ್ ಮಾಡಲಿದ್ದಾರೆ. ಅಳುಮುಂಜಿ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿ ತಮ್ಮದೇ ಆದ ಅಭಿಮಾನಿಗಳನ್ನು ಪಡೆದಿರುವ ಚೆನ್ನಪಟ್ಟಣದ ಗೊಂಬೆ ಇದೀಗ ದೊಡ್ಮನೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾವ್ಯಶ್ರೀ ತದ ನಂತರ ಬದಲಾದುದು ಮಂಗಳ ಗೌರಿಯಾಗಿ. ಎಳವೆಯಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಿದ್ದ ಕಾವ್ಯಶ್ರೀಗೆ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮಿಂಚುವ ಬಯಕೆ.

ಮನೆಯಲ್ಲಿ ಪಕ್ಕಾ ಸಾಂಪ್ರದಾಯಿಕ ವಾತಾವರಣ. ಹಾಗಾಗಿ ಆಕೆಯ ಬಯಕೆಗೆ ಮನೆಯವತ ಪ್ರೋತ್ಸಾಹ ಸಿಗಲಿಲ್ಲ. ಪತ್ರಿಕೋದ್ಯಮ ಪದವಿ ಪಡೆದಿರುವ ಕಾವ್ಯಶ್ರೀ ಮನ ಬಣ್ಣದ ಲೋಕವನ್ನೇ ಬಯಸಿತ್ತು. ಅದೇ ಕಾರಣದಿಂದ ನಟಿಯಾಗದ್ದಿದ್ದರೇನೂ, ನಿರೂಪಕಿಯಾದರೂ ಆಗೋಣ ಎಂದು ನಿರ್ಧಾರ ಮಾಡಿದರು ಕಾವ್ಯಶ್ರೀ. ಅಂತೆಯೇ ನಿರೂಪಣೆ ಅವರ ಕಿರುತೆರೆ ಪಯಣಕ್ಕೆ ಮುನ್ನುಡಿ ಬರೆಯಿತು.

ನಿರೂಪಕಿಯಾಗಿ ತೆರೆ ಮೇಲೆ ಮೋಡಿ ಮಾಡಿದರೂ ನಟಿಯಾಗಬೇಕು ಎನ್ನುವ ಆಸೆ ಕಡಿಮೆಯಾಗಲಿಲ್ಲ. ತನ್ನ ಬಯಕೆಯನ್ಬು ಈಡೇರಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ಕಾವ್ಯಶ್ರೀ ತಮ್ಮ ಕೆಲಸದ ನಡುವೆ ಆಡಿಶನ್ ಗಳಿಗೆ ಹೋಗಲಾರಂಭಿಸಿದರು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ರಾಮ್ ಜೀ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆಗೆ ಜನಪ್ರಿಯತೆ ನೀಡಿದ್ದು ಮಂಗಳಗೌರಿ ಮದುವೆ ಧಾರಾವಾಹಿ.

“ನಾನು ರಾಮ್ ಜೀ ನಿರ್ದೇಶನದ ಪುಟ್ಟ ಗೌರಿ ಮದುವೆ ಧಾರಾವಾಹಿಯನ್ನು ತಪ್ಪದೇ ನೋಡುತ್ತಿದ್ದೆ. ಪುಟ್ಟ ಗೌರಿ ಮದುವೆ ಧಾರಾವಾಹಿಯ ಕತೆಯನ್ನು ನಾನು ತುಂಬಾ ಇಷ್ಟಪಟ್ಟಿದ್ದೆ. ಅದೇ ಧಾರಾವಾಹಿಯ ಮುಂದುವರಿದ ಭಾಗದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಪುಣ್ಯವೇ ಸರಿ. ಪುಟ್ಟ ಗೌರಿಯನ್ನು ಮನೆ ಮಗಳಾಗಿ ಸ್ವೀಕರಿಸಿದ್ದ ವೀಕ್ಷಕರು ಮಂಗಳಗೌರಿಯನ್ನು ಕೂಡಾ ಮನೆ ಮಗಳಾಗಿ ಒಪ್ಪಿಕೊಂಡಿದ್ದಾರೆ.ಅನುಬಂಧ ಅವಾರ್ಡ್ಸ್ ನಲ್ಲಿ ಮನೆ ಮೆಚ್ಚಿದ ಮಗಳು ಪ್ರಶಸ್ತಿ ಪಡೆದಿರುವುದೇ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿ” ಎಂದು ಈ ಹಿಂದೆ ಹೇಳಿದ್ದರು ಕಾವ್ಯಶ್ರೀ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ