ಧಾರಾವಾಹಿಗಳಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಭರತ್ ಭೂಪಣ್ಣನಿಗೆ ಸಿಕ್ಕಿದೆ ಬಿಗ್ ಬ್ರೇಕ್. ಹೌದು ಗಿರಿಜಾ ಕಲ್ಯಾಣ ಹಾಗೂ ಬ್ರಹ್ಮಗಂಟು ಧಾರವಾಹಿಗಳ ಮೂಲಕ ಕಿರುತರೆ ವೀಕ್ಷಕರನ್ನು ರಂಜಿಸಿದ್ದ ಭರತ್ ಭೂಪಣ್ಣ, “ಡೆಮೋ ಪೀಸ್” ಚಿತ್ರದ ಮೂಲಕ ಹಿರಿತರೆಗೆ ಕಾಲಿಟ್ಟಿದ್ದರು.

ಶ್ರೀಯುತ ವಿಜಯ ಸಂಕೇಶ್ವರ ಅವರ ಜೀವನಧಾರಿತ “ವಿಜಯಾನಂದ” ಚಿತ್ರದಲ್ಲಿ ನಟಿಸಿದ್ದ ಭರತ್ ಭೂಪಣ್ಣ ಗೆ ಈಗ ತಮಿಳು ಚಿತ್ರರಂಗ ಕೈ ಬೀಸಿ ಕರೆಯುತ್ತಿದೆ. ತಮಿಳು ನಿರ್ದೇಶಕ ವಿಜಯ ಅವರ ಚಿತ್ರದಲ್ಲಿ ನಟಿಸುವುದರ ಮೂಲಕ ತಮಿಳು ರಂಗಕ್ಕೆ ಕಾಲಿಡುತ್ತಿದ್ದಾರೆ.

ಹೀರೋ ಆಗಿ ಪ್ರೇಕ್ಷಕರ ಮನ ಗೆದ್ದ ಯುವಕನಿಗೆ ಇದೀಗ, ನೆಗೆಟಿವ್ ರೋಲ್ ಕೊಡಲಾಗಿದೆ. ಅರುಣ್ ವಿಜಯ್, ನಿಮಿಷ ಸಜಯನ್ ಹಾಗೂ ಆಮಿ ಜಾಕ್ಸನ್ ನಟಿಸುತ್ತಿರುವ “ಅಚ್ಚಮ್ ಎಂಬತ್ತು ಇಲ್ಲಯೇ” ಎಂಬ ತಮಿಳು ಚಿತ್ರದಲ್ಲಿ ಭರತ್ ಬೋಪಣ್ಣ ನೆಗೆಟಿವ್ ಪಾತ್ರ ಮಾಡುವುದರ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಅವರು ” ಮೂರು ವರ್ಷದ ಹಿಂದೆ ವಿಜಯ್ ಅವರ ಚಿತ್ರಕ್ಕೆ ಆಡಿಶನ್ ಕೊಟ್ಟಿದ್ದೆ, ಆದರೆ ಸೆಲೆಕ್ಟ್ ಆಗಿರಲಿಲ್ಲ. ಈಗ ಅವರೇ ಕರೆ ಮಾಡಿ ನೆಗೆಟಿವ್ ರೋಲ್ ಮಾಡಲು ಕರೆದಿದ್ದಾರೆ. ಇದಕ್ಕಿಂತ ಅದೃಷ್ಟ ಬೇರೊಂದಿಲ್ಲ. ಆಕ್ಷನ್ ಪಾತ್ರಗಳನ್ನು ವಿಲನ್ ರೋಲ್ ಗಳನ್ನು ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಆದರೆ ಅವಕಾಶವಾಗಿರಲಿಲ್ಲ. ಈಗ ನನ್ನ ಆಸೆಯಂತೆ ಎಲ್ಲವೂ ಸಿಕ್ಕಿರುವುದು ಬಹಳ ಸಂತೋಷ ಸದ್ಯದಲ್ಲೇ ಚೆನ್ನೈನಲ್ಲಿ ಶೂಟಿಂಗ್ ಶುರುವಾಗಲಿದೆ ಅಲ್ಲಿಗೆ ತೆರಳಿದ್ದೇನೆ” ಎಂದಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ