ನಟಿ ಇತಿ ಆಚಾರ್ಯ ಅವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಭಾರತದ ಸಾಂಸ್ಕೃತಿಕ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವುದ್ದಾರೆ. ಈ ಅವಕಾಶ ದೊರೆತಿರುವುದಕ್ಕೆ ಅವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು “ದೇಶದಾದ್ಯಂತ, ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವಿವಿಧ ಕ್ಷೇತ್ರಗಳ 75 ಜನರನ್ನು ಆಯ್ಕೆ ಮಾಡಲಾಗಿದೆ. ಬ್ರ್ಯಾಂಡ್ ಅಂಬಾಸಿಡರ್ ಆಗಿ, ನಾನು ದೇಶದ ಬಗ್ಗೆ ಹೊಸ ಇಮೇಜನ್ನು ಸ್ಥಾಪಿಸಲು ಭಾರತವನ್ನು ಪ್ರತಿನಿಧಿಸುತ್ತೇನೆ. ಅನೇಕ ದೇಶಗಳಿಗೆ ಇನ್ನೂ ಅಷ್ಟಾಗಿ ತಿಳಿದಿಲ್ಲದ ಮನರಂಜನಾ ಮತ್ತು ಕಲಾ ಕ್ಷೇತ್ರದಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ” ಎಂದರು.
ಏತನ್ಮಧ್ಯೆ, ನಿರ್ದೇಶಕ ರೋಹಿತ್ ಕುಮಾರ್ ಅವರ “ಲಕ್ಷ್ಮಿಪುತ್ರ” ಚಿತ್ರದಲ್ಲಿ ಇತಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್ ಚಿಂಗಾ ನಾಯಕ ನಟನಾಗಿರಲಿದ್ದಾರೆ.

ತನ್ನ ಪಾತ್ರದ ಕುರಿತಂತೆ ಮಾತನಾಡಿದ ಇತಿ “ನಾನು ನಂದು ಎಂಬ ಗಂಡುಬೀರಿ ಪಾತ್ರವನ್ನು ನಿರ್ವಹಿಸುತ್ತೇನೆ. ಇಲ್ಲಿಯ ತನಕ ನಾನು ತೀರಾ ಹುಡುಗಿಯ ಪಾತ್ರವನ್ನು ಮಾಡುತ್ತಿದ್ದವಳು. ಈಗ ನಂದು ಪಾತ್ರ ನನ್ನ ದಾರಿಗೆ ಬಂದಾಗ ನಾನುಅದನ್ನು ಸಂತೋಷದಿಂದ ಸ್ವೀಕರಿಸಿದೆ. ಮತ್ತು ಅದು ನನ್ನ ಅಭಿನಯದ ಹೊಸ ಭಾವವನ್ನು ಹೊರಹಾಕಲು ನೆರವಾಯಿತು” ಎನ್ನುತ್ತಾರೆ ಇತಿ ಆಚಾರ್ಯ.

ಇದರ ಜೊತೆಗೆ “ನಾನು ನನ್ನ ದೇಹ, ಭಾಷೆ ಮತ್ತು ಸಂಭಾಷಣೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ನನ್ನ ಕಂಫರ್ಟ್ ಝೋನ್‌ನಲ್ಲಿ ನಾನು ನನ್ನ ನೋಟವನ್ನು ಪ್ರಯೋಗಿಸುತ್ತೇನೆ ಮತ್ತು ಇದು ಪ್ರೇಕ್ಷಕರಿಗೆ ಸಂತೋಷ ಉಂಟು ಮಾಡಲಿದೆ” ಎನ್ನುತ್ತಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ