ಭಾರತೀಯ ಸಂಬಾರ ಪದಾರ್ಥಗಳಲ್ಲಿ ಒಂದಾದ ಕೇಸರಿ ತನ್ನ ಬಣ್ಣ ಹಾಗೂ ಪರಿಮಳದಿಂದ ಬಹಳ ವಿಶೇಷ ಸ್ಥಾನ ಪಡೆದಿದೆ. ಕಾಶ್ಮೀರದಲ್ಲಿ ಬೆಳೆಯಲ್ಪಡುವ ಈ ಮಸಾಲೆ ಬಹಳ ದುಬಾರಿಯಾದರೂ ಅಷ್ಟೇ ಬೇಡಿಕೆಯಿರುವುದೂ ಸುಳ್ಳಲ್ಲ. ರುಚಿಗೆ, ಬಣ್ಣಕ್ಕೆ ಹಾಗೂ ಪರಿಮಳಕ್ಕೆ ಬಳಸುವ ಈ ಪದಾರ್ಥ ಹಲವಾರು ಔಷಧೀಯ ಗುಣಗಳನ್ನೂ ಹೊಂದಿದೆ. ಅದೇನೆಂದು ನೋಡೋಣ.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂದೆನಿಸಿಕೊಳ್ಳುತ್ತಿರುವ ವಿವಿಧ ರೀತಿಯ ಕ್ಯಾನ್ಸರ್ ತಡೆಗಟ್ಟಲು ಕೇಸರಿ ಬಹಳ ಸಹಕಾರಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ನಮ್ಮನ್ನು ಹಲವಾರು ರೋಗಗಳಿಂದ ಕಾಪಾಡಬಲ್ಲದು. ಜೊತೆಗೆ ಕೇಸರಿಯ ದಿನನಿತ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ಕಾಪಾಡಿಕೊಳ್ಳಬಹುದು.

ಇದು ಥಯಾಮಿನ್ ಮತ್ತು ರೈಬೋಫ್ಲಾವಿನ್ನಂತಹ ಖನಿಜಗಳಿಂದ ತುಂಬಿರುವುದರಿಂದ ಅಪಧಮನಿಗಳಲ್ಲಿ ಅಡಚಣೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯುತ್ತದೆ.

ಅಲ್ಲದೆ ಕೇಸರಿಯ ಸೇವನೆ ಮೆದುಳಿನ ಬೆಳವಣಿಗೆಗೂ ಬಹಳ ಸಹಕಾರಿ. ಮೆದುಳಿನಲ್ಲಿ ಯಾವುದೇ ರೀತಿಯ ಹಾರ್ಮೋನುಗಳ ಬದಲಾವಣೆ ಮಾಡದೆ ಅಡ್ಡಪರಿಣಾಮಗಳಿಲ್ಲದೇ ಡೊಪಮೈನ್ ಮಟ್ಟವನ್ನು ಹೆಚ್ಚಿಸಿ ಮಾನಸಿಕ ಒತ್ತಡವನ್ನು ನಿಯಂತ್ರಿಸುತ್ತದೆ. ಇದರ ನಿಯಮಿತ ಸೇವನೆಯಿಂದ ಮರೆಗುಳಿತನವನ್ನೂ ನಿಯಂತ್ರಿಸಬಹುದು.

ಜೊತೆಗೆ ದೈಹಿಕವಾಗಿಯೂ ತೂಕವನ್ನು ನಿಯಂತ್ರಿಸಲು ಕೇಸರಿ ಸಹಕಾರಿ. ಅಲ್ಲದೆ ಗರ್ಭಿಣಿಯರು ಕೇಸರಿಯನ್ನು ಸೇವಿಸುವುದರಿಂದ ಮಗುವಿನ ಚರ್ಮ ಕಾಂತಿಯುತವಾಗಿರುತ್ತದೆ ಎಂದು ನಂಬಲಾಗಿದೆ.

ಸಾಮಾನ್ಯವಾಗಿ ಅಲಂಕಾರಕ್ಕೆ, ಬಣ್ಣಕ್ಕೆ ಬಳಸುವ ಕೇಸರಿಯಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿರುವುದರಿಂದ ದಿನನಿತ್ಯ ನಿಯಮಿತ ಬಳಕೆ ಉತ್ತಮ ಆರೋಗ್ಯಕ್ಕೆ ಎಡಮಾಡಿಕೊಡುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ