ಪೋಮೋಗ್ರನೇಟ್ ಎಂದು ಕರೆಯಲ್ಪಡುವ ದಾಳಿಂಬೆ ಕಂಡರೆ ಇಷ್ಟವಿಲ್ಲ ಎನ್ನುವರಾರು ಹೇಳಿ? ಕೇವಲ ರುಚಿಯಿಂದ ಮಾತ್ರವಲ್ಲದೇ ಬಣ್ಣದಿಂದಲೂ ಕಣ್ಮನ ಸೆಳೆಯುವ ದಾಳಿಂಬೆ ಆರೋಗ್ಯಕರ ಹಣ್ಣು ಹೌದು. ಹತ್ತು ಹಲವು ಪೋಷಕಾಂಶಗಳನ್ನು ತನ್ನೊಡನೆ ಅಡಗಿಸಿಕೊಂಡಿರುವ ದಾಳಿಂಬೆಯು ಪ್ರೋಟೀನ್ ಮತ್ತು ವಿಟಮಿನ್ ಗಳಿಂದ ಕೂಡಿದೆ. ಲೀತ್ರೇಸಿ ಕುಟುಂಬಕ್ಕೆ ಸೇರಿರುವ ದಾಳಿಂಬೆಯು ಔಷಧಿಯ ಗುಣಗಳನ್ನು ಹೊಂದಿದೆ.

ವಿಟಮಿನ್ ಸಿ, ಈ, ಪೋಟಾಶಿಯಮ್, ಪಾಸ್ಫರಸ್, ಪ್ರೋಟಿನ್ ಗಳು ದಾಳಿಂಬೆಯಲ್ಲಿ ಅಧಿಕ ಪ್ರಮಾಣದಲ್ಲಿವೆ. ಇನ್ನು ಸವಿಯಲು ರುಚಿಯಾಗಿರುವ ಈ ಹಣ್ಣು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ.

ಇನ್ನು ಜಂತುಹುಳ ಸಮಸ್ಯೆಗೆ ಇದು ಹೇಳಿ ಮಾಡಿಸಿದ ಮದ್ದು. ಹೌದು, ಸಾಮಾನ್ಯವಾಗಿ ಮಕ್ಕಳಲ್ಲಿ ಜಂತುಹುಳ ಸಮಸ್ಯೆ ಕಾಣಿಸುವುದು ಹೆಚ್ಚು. ಜಂತುಹುಳದ ಭಾದೆಯಿಂದ ಮಕ್ಕಳ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾಗುತ್ತದೆ. ದಾಳಿಂಬೆ ಸೇವನೆಯಿಂದ ಜಂತುಹುಳ ನಾಶವಾಗುತ್ತದೆ.

ಒಂದೇ ವಾಕ್ಯದಲ್ಲಿ ಹೇಳಬಕೆಂದರೆ ದಾಳಿಂಬೆ ಸರ್ವ ರೋಗ ನಿವಾರಕವೂ ಹೌದು. ದಾಳಿಂಬೆಯ ಸೇವನೆಯಿಂದ
ಶರೀರದ ಶಕ್ತಿ ಹೆಚ್ಚಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಿಶ್ಯಕ್ತತೆಯನ್ನು ದೂರ ಮಾಡುವ ಶಕ್ತಿ ಪುಟ್ಟ ದಾಳಿಂಬೆಗಿದೆ

ಇದರ ಜೊತೆಗೆ ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡವನ್ನು ಇದು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ದಾಳಿಂಬೆ ಹಣ್ಣಿನ ಹೊರತಾಗಿ ಇದರ ಎಲೆಯಿಂದಲೂ ಆರೋಗ್ಯ ವೃದ್ಧಿಸಬಹುದು. ಕೆಮ್ಮು ಇದ್ದಾಗ ದಾಳಿಂಬೆ ಎಲೆ ಸೇವಿಸಿದರೆ ಕೆಮ್ಮು ದೂರಾಗುವುದು. ಮಾತ್ರವಲ್ಲ ದೇಹದಲ್ಲಿ ಸುಟ್ಟ ಗಾಯಗಳು ಆಗಿದ್ದರೆ, ಅದಕ್ಕೂ ಇದರ ಎಲೆ ಉತ್ತಮ ಮದ್ದು. ದಾಳಿಂಬೆ ಎಲೆಯನ್ನು ಜಜ್ಜಿ ಸುಟ್ಟ ಗಾಯಕ್ಕೆ ಹಚ್ಚಿದರೆ ಗಾಯ ವಾಸಿಯಾಗುತ್ತದೆ

ದಾಳಿಂಬೆ ಹಣ್ಣು ತಿಂದ ಬಳಿಕ ಅದರ ಸಿಪ್ಪೆಯನ್ನು ಬೇಡ ಎಂದು ಬಿಸಾಡುವವರೇ ಹೆಚ್ಚು. ಹಾಗೇ ಬಿಸಾಡುವ ಸಿಪ್ಪೆಯನ್ನು ಸೌಂದರ್ಯವರ್ಧಕವನ್ನಾಗಿ ಬಳಸಬಹುದು ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ. ಹೌದು,
ದಾಳಿಂಬೆ ಸಿಪ್ಪೆಯಿಂದ ಮುಖದಲ್ಲಿ ಮೂಡುವ ಮೊಡವೆಗಳಿಗೆ ಪರಿಹಾರ ಪಡೆಯಬಹುದು. ದಾಳಿಂಬೆಯಲ್ಲಿರುವ ಹೇರಳವಾಗಿರುವ ಆಂಟಿ ಆಕ್ಸಿಡೆಂಟ್ ಗಳು ಮೊಡವೆಗಳನ್ನು ದೂರ ಮಾಡುತ್ತದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ದಾಳಿಂಬೆಯನ್ನು ಸನ್ ಸ್ಕ್ರೀನ್ ಲೋಶನ್ ಆಗಿ ಉಪಯೋಗಿಸಬಹುದು. ಸೂರ್ಯನಿಂದ ಬರುವ ಅಪಾಯಕಾರಿ ಯುವಿ ಕಿರಣಗಳನ್ನು ಇದು ತಡೆಯುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ