ಖನಿಜಾಂಶಗಳು, ಪೋಷಕಾಂಶಗಳ ಜೊತೆಗೆ ವಿಟಮಿನ್ ಗಳು ಹೇರಳವಾಗಿರುವ ಹಣ್ಣುಗಳು ಸವಿಯಲು ಮಾತ್ರ ರುಚಿಯಲ್ಲ. ಬದಲಿಗೆ ಇವುಗಳ ಸೇವನೆ ಆರೋಗ್ಯಕ್ಕೂ ಒಳ್ಳೆಯದು ಹೌದು. ಮನೆಯ ಹಿತ್ತಲಿನಲ್ಲಿ ಬೆಳೆಯಲ್ಪಡುವ ಪಪ್ಪಾಯಿಯು ಕೂಡಾ ಆರೋಗ್ಯ ವೃದ್ಧಿಸುತ್ತದೆ ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಪೋಷಕಾಂಶಗಳ ಆಗರವಾಗಿರುವ ಇದರಲ್ಲಿ ನಾರಿನಾಂಶವೂ ಹೇರಳವಾಗಿದೆ.

ವಿಟಮಿನ್ ಎ, ಸಿ, ಈ, ಕ್ಯಾಲ್ಸಿಯಂ, ಪೋಟಾಶಿಯಂ, ಮೇಗ್ನೇಶಿಯಂ, ಪ್ರೋಟೀನ್ ಗಳು ಅಧಿಕವಾಗಿರುವ ಪಪ್ಪಾಯಿಯು ಚರ್ಮ, ಕಣ್ಣುಗಳ ಆರೋಗ್ಯ, ಹೃದಯ ಸಂಬಂಧಿ ಕಾಯಿಲೆ, ಮಲಬದ್ಧತೆ, ಹೊಟ್ಟೆ ಹುಳು ನಿವಾರಣೆ ಹೀಗೆ ಹತ್ತು ಹಲವು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಈ ಹಣ್ಣಿಗಿದೆ.

ಜೀರ್ಣಕ್ರಿಯೆಯು ಸರಾಗವಾಗಿ ಸಾಗುವಂತೆ ಮಾಡುವ ಪಪ್ಪಾಯಿಗೆ ಸೋಂಕು ತಡೆಗಟ್ಟುವ ಶಕ್ತಿಯಿದೆ. ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹ ಇರುವವರು ಕೂಡಾ ನಿರಾಂತಕವಾಗಿ ಈ ಹಣ್ಣನ್ನು ಸೇವಿಸಬಹುದು.

ಇನ್ನು ಪಪ್ಪಾಯಿಯಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದು ಕಣ್ಣುಗಳ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನಿಯಮಿತವಾಗಿ ಪಪ್ಪಾಯವನ್ನು ಸೇವನೆ ಮಾಡುವುದರಿಂದ ಕಣ್ಣು ಮಂಜಾಗುವುದರ ಜೊತೆಗೆ ಪೊರೆ ಬರುವುದನ್ನು ಕೂಡಾ ತಪ್ಪಿಸಬಹುದಾಗಿದೆ. ಇದರಲ್ಲಿರುವ ವಿಟಮಿನ್ ಸಿ ಯು ಒತ್ತಡವನ್ನು ನಿವಾರಿಸುತ್ತದೆ.

ಮೊಡವೆಯ ಜೊತೆಗೆ ಇತರ ಚರ್ಮದ ಸಮಸ್ಯೆಗಳನ್ನು ಕೂಡಾ ನಿರ್ವಹಿಸುವ ಶಕ್ತಿ ಮನೆಯಂಗಳದ ಪಪ್ಪಾಯಕ್ಕಿದೆ. ಅದೇ ಕಾರಣದಿಂದ ಚರ್ಮದ ಆರೈಕೆಗೆ ಬಳಸಲ್ಪಡುವ ಪೇಸ್ ವಾಶ್, ಬಾಡಿ ಲೋಶನ್ ನ ಜೊತೆಗೆ ಕೋಲ್ಡ್ ಕ್ರೀಮ್ ಗಳಲ್ಲಿಯೂ ಕೂಡಾ ಪಪ್ಪಾಯಿಯನ್ನು ಬಳಸಲಾಗುತ್ತದೆ.

ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಹೊಟ್ಟೆಯ ನೋವಿಗೂ ಇದು ಉತ್ತಮ ಮದ್ದು ಎನ್ನುವುದು ಹಲವರಿಗೆ ತಿಳಿದಿಲ್ಲ! ಪಪ್ಪಾಯಿರುವ ಪೇಪೆನ್ ಅಂಶ ಹೊಟ್ಟೆ ನೋವು ಕಡಿಮೆ ಮಾಡುವುದಲ್ಲದೇ ಋತುಚಕ್ರ ಸರಿಯಾಗುವಂತೆ ನೋಡಿಕೊಳ್ಳುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ