‘ಕಮಲ’ ಹೆಸರೇ ಒಂದು ರೀತಿಯ ಮುದ ನೀಡುತ್ತದೆ. ಹೂ ಕೂಡ ಅಷ್ಟೇ ಕಂಪು ಸೂಸುವುದು ಸುಳ್ಳಲ್ಲ. ಕೆಸರಿನಲ್ಲಿ ಹುಟ್ಟಿ ಬೆಳೆದು ಅರಳುವ ಕಮಲದ ಹೂವು ಕಣ್ಣಿಗೆ ಕಂಪಷ್ಟೇ ಅಲ್ಲ ಜೊತೆಗೆ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಅಲಂಕಾರಕ್ಕೆ, ಚಂದಕ್ಕೆ, ಹೂಮಾಲೆಗೆ ಇತ್ಯಾದಿಯಾಗಿ ಬಳಸಲಾಗುವ ಈ ಹೂವು ಅದರ ಎಲೆ, ಕಾಂಡ, ಬೀಜ ಇತ್ಯಾದಿ ಎಲ್ಲವೂ ಔಷಧೀಯ ಗುಣಗಳನ್ನು ಹೂಂದಿದೆ. ಲಕ್ಷ್ಮಿ ಗೆ ಇಷ್ಟವಾದ ಹೂವು ಇದು ಎಂಬ ನಂಬಿಕೆ ಇದೆ.

ಆರೋಗ್ಯದ ಮೇಲೆ ಇದರ ಪ್ರಯೋಜನಳನ್ನು ನೋಡುವುದಾದರೆ, ಕಮಲ ಉರಿಯೂತ, ಕ್ಯಾನ್ಸರ್ ಕೋಶಗಳು ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿನ ಅಂಶಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನೂ ಕಡಿಮೆ ಮಾಡುವ ಗುಣವನ್ನೂ ಹೊಂದಿದೆ (ಈ ಕುರಿತು ವೈದ್ಯರ ಸಲಹೆ ಮಾಡಿ, ನಂತರ ಸೇವಿಸುವುದು ಉತ್ತಮ). ಅಲ್ಲದೇ ಕಾಂತಿಯುತ ಚರ್ಮಕ್ಕೂ ಇದು ಸಹಕಾರಿ. ಇದು ಮೈಯಲ್ಲಿನ ಕೊಬ್ಬು ಅಂದರೆ ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ. ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೂ ಸಹಕಾರಿ.

ಮಾನಸಿಕವಾಗಿ ಆತಂಕ ಮತ್ತು ಒತ್ತಡ ನಿವಾರಿಸುವ ಇದು ದುರ್ವಾಸನೆ ನಿಯಂತ್ರಿಸುತ್ತದೆ. ರಕ್ತಸ್ರಾವ ಕಡಿಮೆ ಮಾಡುತ್ತದೆ, ಅಜೀರ್ಣದ ಸಮಸ್ಯೆ ತಡೆಯುತ್ತದೆ. ಜ್ವರ ತಡೆಗೆ ಸಹಕಾರಿ, ಯಕೃತ್ತಿನ ಸಮಸ್ಯೆಗೆ ಪರಿಹಾರ ನೀಡುತ್ತದೆ, ಚರ್ಮ ರೋಗ, ನೋಯುತ್ತಿರುವ ಗಂಟಲು ಮತ್ತು ಕೆಮ್ಮು, ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಮಲದ ಸಸ್ಯವು ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಅಂತಹ ಅನೇಕ ಫ್ಲೇವನಾಯ್ಡ್ ಮತ್ತು ಆಲ್ಕಲಾಯ್ಡ್ ಸಂಯುಕ್ತ ಹೊಂದಿದೆ. ಆಂಟಿಆಕ್ಸಿಡೆಂಟ್ಗಳು ದೇಹ ಅನಾರೋಗ್ಯ ಕಾಪಾಡಲು ಸ್ವತಂತ್ರ ರಾಡಿಕಲ್ಗಳನ್ನು ತಟಸ್ಥಗೊಳಿಸುತ್ತದೆ.

ಇದರ ಎಲೆಯ ಸಾರವು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದು ಬಾಯಿ ಮತ್ತು ಹಲ್ಲುಗಳಲ್ಲಿ ಸಂಗ್ರಹವಾದ ಬ್ಯಾಕ್ಟೀರಿಯಾವನ್ನು ತೊಡೆದು ಹಾಕುತ್ತದೆ. ಕಮಲದ ಹೂವಿಗೆ ರಕ್ತಸ್ರಾವ, ಕೆಮ್ಮು, ಜ್ವರ, ಯಕೃತ್ತು ಮತ್ತು ಹೊಟ್ಟೆಯ ಸಮಸ್ಯೆ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಏಷ್ಯಾದಲ್ಲಿ ಈ ಹೂವಿನ ವಿವಿಧ ಭಾಗಗಳನ್ನು ಸಾಮಾನ್ಯವಾಗಿ ಅಡುಗೆ ಮತ್ತು ಪಾನೀಯಗಳಲ್ಲಿ ಬಳಕೆ ಮಾಡುತ್ತಾರೆ. ಕಮಲದ ಬೀಜದಲ್ಲಿ ಹೊಸ ರುಚಿಯ ಪ್ರಯೋಗಗಳನ್ನು ಮಾಡುವುದನ್ನು ನೋಡಬಹುದು. ಇದು ಆರೋಗ್ಯಕ್ಕೂ ಸಹಕಾರಿ ನಾಲಿಗೆಗೂ ರುಚಿ!
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ