ಗುಲ್ಕಂದ್ ಹೆಸರು ಕೇಳಿದ್ದೀರಾ? ಹೂಗಳ ರಾಣಿ ಎಂದೇ ಜನಜನಿತವಾಗಿರುವ ಗುಲಾಬಿ ಹೂವಿನ ಎಸಳುಗಳಿಂದ ತಯಾರಿಸಲ್ಪಡುವ ಜಾಮ್ ನ ಹೆಸರೇ ಗುಲ್ಕಂದ್. ಒಮ್ಮೆ ಸವಿದರೆ ಮತ್ತೊಮ್ಮೆ, ಮಗದೊಮ್ಮೆ ಸವಿಯಬೇಕು ಎಂದೆನಿಸುವ ಈ ಗುಲ್ಕಂದ್ ಸೇವನೆ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಮುಖ್ಯವಾಗಿ ನಮ್ಮ ದೇಹವನ್ನು ತಂಪಗೆ ಇಡುವ ಗುಲ್ಕಂದ್ ದೇಹದ ನಿಶ್ಯಕ್ತಿ ದೂರ ಮಾಡುತ್ತದೆ. ಮಾತ್ರವಲ್ಲ ಇದರ ಜೊತೆಗೆ ಸುಸ್ತು ಹಾಗೂ ಆಲಸ್ಯವನ್ನು ಕೂಡಾ ಇದು ದೂರ ಮಾಡುತ್ತದೆ.

ರಕ್ತ ಶುದ್ಧೀಕರಿಸುವ ಶಕ್ತಿ ಹೊಂದಿರುವ
ಗುಲ್ಕಂದ್ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ. ಜೊತೆಗೆ ಅಲ್ಸರ್ ಹಾಗೂ ಕರುಳಿನ ಬಾವು ಕಡಿಮೆ ಮಾಡುವ ಇದು ಮುಟ್ಟಿನ ಸಮಯದಲ್ಲಿ ಕಂಡುಬರುವ ಹೊಟ್ಟೆ ನೋವನ್ನು ನಿವಾರಿಸುವ ಶಕ್ತಿ ಇದಕ್ಕಿದೆ.

ಆಂಟಿ ಆಕ್ಸಿಡೆಂಟ್ಗಳಿಂದ ಹೇರಳವಾಗಿರುವ ಗುಲ್ಕಂದ್ ಸೇವನೆ ದೇಹದ ಕೋಶಗಳು ಪುನರುತ್ಪತ್ತಿಯಾಗಲು ನೆರವಾಗುತ್ತದೆ. ಆರೋಗ್ಯದ ಆಗರವೇ ಆಗಿರುವಂತಹ ಗುಲ್ಕಂದ್ ನ ಸೇವಿಸುವಾಗಲೂ ತುಂಬಾ ಎಚ್ಚರಿಕೆಯಿಂದ ಇರಬೇಕಾದುದು ಕೂಡಾ ಮುಖ್ಯ. ಯಾಕಂತೀರಾ? ಗುಲ್ಕಂದ್ ಸೇವನೆಯಲ್ಲಿ ಹೇರಳ ಪ್ರಮಾಣದ ಸಕ್ಕರೆಯನ್ನು ಉಪಯೋಗಿಸಲಾಗುತ್ತದೆ. ಇನ್ನು ಅಧಿಕ ಪ್ರಮಾಣದ ಸಕ್ಕರೆ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ.

ಅಂದ ಹಾಗೇ ಗುಲ್ಕಂದ್ ಅನ್ನು ನೀವು ಮನೆಯಲ್ಲಿಯೇ ತಯಾರಿಸಲುಬಹುದು. ಹೌದು, ಅದು ತುಂಬಾ ಸುಲಭ ಕೂಡಾ. ಮೊದಲಿಗೆ ಗುಲಾಬಿ ದಳಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಬೇಕು. ನಂತರ ತೊಳೆದ ಗುಲಾಬಿ ದಳಗಳನ್ನು ನೀರಿನಲ್ಲಿ ಒಣಗಿಸಬೇಕು. ಅದು ಒಣಗಿದ ನಂತರ ಜೇನುತುಪ್ಪವನ್ನು ಉಪಯೋಗಿಸಿ ಮನೆಯಲ್ಲಿಯೇ ಗುಲ್ಕಂದ್ ತಯಾರಿಸಬಹುದು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ