ಭಾರತೀಯರಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸದೆ ಇರುವವರು ತೀರಾ ಕಮ್ಮಿ. ನಮ್ಮ ದಿನನಿತ್ಯದ ಅಡುಗೆಯಲ್ಲಿ ಇದರ ಬಳಕೆ ಸಾಕಾಗುವಷ್ಟಿದೆ. ಬೆಳ್ಳುಳ್ಳಿ, ಈರುಳ್ಳಿಯ ಕುಟುಂಬದ ಒಂದು ಸಸ್ಯ ಎಂದರೆ ತಪ್ಪಲ್ಲ. ಬೆಳ್ಳುಳ್ಳಿಯ ಪ್ರತಿಯೊಂದು ಭಾಗವನ್ನು ಲವಂಗ ಎಂದು ಕರೆಯಲಾಗುತ್ತದೆ. ಒಂದೇ ಬೆಳ್ಳುಳ್ಳಿಯಲ್ಲಿ ಸುಮಾರು 10-20 ಲವಂಗಗಳಿರುತ್ತವೆ.
ಬೆಳ್ಳುಳ್ಳಿಯನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಅದರ ವಾಸನೆ ಮತ್ತು ರುಚಿಯಿಂದಾಗಿ ಅಡುಗೆಯಲ್ಲಿ ಇದಕ್ಕೆ ಪ್ರಮುಖ ಪಾತ್ರವಿದೆ. ಈಜಿಪ್ಟ್, ಬ್ಯಾಬಿಲೋನ್, ಗ್ರೀಕ್, ರೋಮ್, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ಇದನ್ನು ಪ್ರಮುಖವಾಗಿ ಬೆಳೆಯುತ್ತವೆ.

ಬೆಳ್ಳುಳ್ಳಿಯಿಂದಾಗುವ ಪ್ರಯೋಜನಗಳೆಲ್ಲಾ ಬೆಳ್ಳುಳ್ಳಿಯ ಬಿಡಿಗಳನ್ನು ಕತ್ತರಿಸುವುದರಿಂದ, ಪುಡಿಮಾಡುವುದರಿಂದ, ಅಗಿಯುವುದರಿಂದ ರೂಪುಗೊಳ್ಳುವ ಸಲ್ಫರ್ ಸಂಯುಕ್ತಗಳಿಂದ ಉಂಟಾಗುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗಾದರೆ ಬೆಳ್ಳುಳ್ಳಿಯಿಂದಿರುವ ಪ್ರಯೋಜನಗಳಾವುವು ನೋಡೋಣ ಬನ್ನಿ.
ಬೆಳ್ಳುಳ್ಳಿಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೆ ಕೀಲುಗಳಲ್ಲಿನ ನೋವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲನ್ನು ಸುಧಾರಿಸಲು ಇದೊಂದು ಉತ್ತಮ ದಾರಿಯೆಂದೇ ಹೇಳಬಹುದು. ಅಲ್ಲದೆ ಕೆಮ್ಮು ಮತ್ತು ಶೀತವನ್ನೂ ಶಮನಗೊಳಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಸುಧಾರಿಸುವಲ್ಲಿ ಇದು ಸಹಾಯ ಮಾಡುತ್ತದೆ. ಮೆದುಳಿನ ಕಾರ್ಯನಿರ್ವಹಣೆಯನ್ನು ಅಭಿವೃದ್ಧಿಪಡಿಸುವಲ್ಲೂ ಬೆಳ್ಳುಳ್ಳಿಯ ಪಾತ್ರ ಮಹತ್ವದ್ದು. ಇದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುವುದರೊಂದಿಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಇನ್ನು ಬೆಳ್ಳುಳ್ಳಿಯ ಪ್ರಸಿದ್ಧವಾದ ಸಂಯುಕ್ತವೆಂದರೆ ಅದು ಅಲಿಸಿನ್. ಅಲಿಸಿನ್ ಒಂದು ಅಸ್ಥಿರ ಸಂಯುಕ್ತವಾಗಿದ್ದು ಅದು ತಾಜಾ ಬೆಳ್ಳುಳ್ಳಿಯನ್ನು ಕತ್ತರಿಸಿದರೆ ಅಥವಾ ಪುಡಿಮಾಡಿದರೆ ಮಾತ್ರ ಸಂಕ್ಷಿಪ್ತವಾಗಿ ಇರುತ್ತದೆ. ಬೆಳ್ಳುಳ್ಳಿಯ ಸಲ್ಫರ್ ಸಂಯುಕ್ತಗಳು ಜೀರ್ಣಾಂಗದಿಂದ ದೇಹವನ್ನು ಪ್ರವೇಶಿಸುತ್ತವೆ. ನಂತರ ದೇಹದಾದ್ಯಂತ ಸಂಚರಿಸಿ, ಬಲವಾದ ಜೈವಿಕ ಪರಿಣಾಮಗಳನ್ನು ಬೀರುತ್ತದೆ.
ಪೌಷ್ಟಿಕಾಂಶದ ಆಗರ
ಬೆಳ್ಳುಳ್ಳಿಯು ಪೌಷ್ಟಿಕಾಂಶಯುಕ್ತವಾದವುಗಳಲ್ಲಿ ಒಂದು. ಆದರೆ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ. ಬೆಳ್ಳುಳ್ಳಿಯು 4.5 ಕ್ಯಾಲೋರಿ, 0.2 ಗ್ರಾಂ ಪ್ರೋಟೀನ್ ಮತ್ತು 1 ಗ್ರಾಂ ಕಾರ್ಬೋಹೈಡ್ರೇಟನ್ನು ಹೊಂದಿದೆ.

ರೋಗ ನಿರೋಧಕ ಶಕ್ತಿ ವರ್ಧಕ
ಬೆಳ್ಳುಳ್ಳಿಯು ಆಂಟಿಆಕ್ಸಿಡೆಂಟ್‍ಗಳನ್ನು ಹೊಂದಿದ್ದು, ಆಲ್ಝೈಮರ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆಯನ್ನು ತಡೆಯಲು ಸಹಾಯ ಮಾಡುತ್ತದೆ. ದೇಹದ ರಕ್ಷಣಾತ್ಮಕ ಕಾರ್ಯವಿಧಾನಗಳನ್ನು ಬೆಂಬಲಿಸುವ ಶಕ್ತಿ ಬೆಳ್ಳುಳ್ಳಿಗಿದೆ.
ರಕ್ತದೊತ್ತಡ ನಿಯಂತ್ರಕ
ಬೆಳ್ಳುಳ್ಳಿಯಲ್ಲಿರುವ ಸಕ್ರಿಯ ಸಂಯುಕ್ತಗಳು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಮಾನವ ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿ ಪೂರಕಗಳು ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮ ಬೀರಿವೆ ಎಂದು ತಿಳಿದು ಬಂದಿದೆ. 600-1,500 ಮಿಲ್ಲಿಗ್ರಾಂ ವಯಸ್ಸಾದ ಬೆಳ್ಳುಳ್ಳಿ ಸಾರವು 24 ವಾರಗಳ ಅವಧಿಯಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಅಟೆನೊಲೊಲ್ ಔಷಧದಂತೆಯೇ ಪರಿಣಾಮಕಾರಿ.

ಕೊಲೆಸ್ಟ್ರಾಲ್ ಮಟ್ಟದ ಸುಧಾರಕ
ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಉತ್ತಮ ಮದ್ದಾದ ಬೆಳ್ಳುಳ್ಳಿ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರಿಗೆ, ಬೆಳ್ಳುಳ್ಳಿಯ ಉಪಯೋಗದಿಂದ ಸುಮಾರು 10-15% ರಷ್ಟು ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ.
ಅನಾರೋಗ್ಯದ ಮಿತ್ರ
ಬೆಳ್ಳುಳ್ಳಿ ಸಾಮಾನ್ಯವಾಗಿ ಶೀತ ಸೇರಿದಂತೆ ಹಲವು ಸಾಧಾರಣ ಕಾಯಿಲೆಗಳಿಗೆ ಔಷಧಿಯಾಗಿ ಪರಿಣಮಿಸುತ್ತದೆ. ಬೆಳ್ಳುಳ್ಳಿಯ ಪೂರಕಗಳು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯವನ್ನು ಹೆಚ್ಚಿಸುತ್ತದೆ. ದೈನಂದಿನ ಬೆಳ್ಳುಳ್ಳಿ ಪೂರಕವು ಶೀತಗಳ ಸಂಖ್ಯೆಯನ್ನು 63% ರಷ್ಟು ಕಡಿಮೆ ಮಾಡುತ್ತದೆ ಎನ್ನುತ್ತಾರೆ. ಆಗಾಗ ಶೀತವಾಗುತ್ತಿದ್ದಲ್ಲಿ,ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವುದು ಉತ್ತಮ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ