ಬೆಳಗ್ಗೆ ಎದ್ದು, ಮುಖ ತೊಳೆದು ಫ್ರೆಶ್ ಆಗಿ ಒಂದು ಕಪ್ ಬಿಸಿಬಿಸಿಯಾಗಿರುವ ಕಾಫಿ ಅಥವಾ ಚಹಾವನ್ನು ಒಂದೊಂದೇ ಸಿಪ್ ಆಗಿ ಕುಡಿಯುತ್ತಾ ಕುಳಿತರೆ.. ವ್ಹಾವ್ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಕೂಡಾ ಹಾಯ್ ಎಂದೆನಿಸುತ್ತದೆ. ಜಡವೆಲ್ಲಾ ಮಾಯವಾಗಿ ಇಡೀ ದೇಹಕ್ಕೆ ಚೈತನ್ಯ ದೊರೆತಿರುವಂತೆ ಭಾಸವಾಗುತ್ತದೆ. ಅಂದ ಹಾಗೇ ಬಿಸಿಬಿಸಿ ಕಾಫಿ, ಟೀ, ಗ್ರೀನ್ ಟೀ, ಲೆಮನ್ ಟೀ ಹೀಗೆ ನಾನಾ ನಮೂನೆಯ ಟೀ ಗಳ ಜೊತೆಗೆ ಕಾಫಿಯನ್ನು ಕೂಡಾ ನೀವು ಬೆಳ್ಳಂಬೆಳಗ್ಗೆ ಕುಡಿದಿರುತ್ತೀರಿ? ಆದರೆ ಬ್ಲಾಕ್ ಟೀ ಕುಡಿದಿದ್ದೀರಾ? ಇಲ್ಲ, ನೀವು ಪಕ್ಕಾ ಇದನ್ನು ಖಂಡಿತಾ ಕುಡಿದಿರುವುದಿಲ್ಲ.

ಬೆಳ್ಳಂಬೆಳಗ್ಗೆ ಬ್ಲಾಕ್ ಟೀ ಕುಡಿದಿಲ್ಲವಾದರೆ ಒಮ್ಮೆ ನೀವು ಇದನ್ನು ಟ್ರೈ ಮಾಡಲೇ ಬೇಕು. ಯಾಕಂತೀರಾ? ಬ್ಲಾಕ್ ಟೀ ಕುಡಿಯುವುದರಿಂದ ನೀವು ಉತ್ತಮ ಆರೋಗ್ಯವನ್ನು ಕೂಡಾ ಪಡೆಯಬಹುದು. ಹೌದು, ದಿನದಲ್ಲಿ ಒಂದು ಬಾರಿ ನೀವು ಬ್ಲಾಕ್ ಟೀ ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.

ಇನ್ನು ಮೂಳೆಗಳ ಆರೋಗ್ಯಕ್ಕೂ ಈ ಬ್ಲಾಕ್ ಟೀ ಉತ್ತಮವಾದುದು. ಆದುದರಿಂದ ಬ್ಲಾಕ್ ಟೀ ಸೇವನೆಯಿಂದ ಸದೃಢ ಮೂಳೆ ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ.
ಬ್ಲಾಕ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಬ್ಯಾಕ್ಟೀರಿಯಾ ಗಳನ್ನು ಕೊಲ್ಲುವಲ್ಲಿ ಸಹಕಾರಿ. ಬಾಯಿಯ ಆರೋಗ್ಯ ಕಾಪಾಡುವ ಈ ಟೀ ಯು ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ.

ಬ್ಲಾಕ್ ಟೀ ಗೆ ದೇಹದಲ್ಲಿನ ತೂಕ ಕಡಿಮೆ ಮಾಡುವ ಶಕ್ತಿ ಇದೆ. ಅದೇ ಕಾರಣದಿಂದ ದೇಹದಲ್ಲಿರುವ ಕೊಬ್ಬು ಕಡಿಮೆಯಾಗಬೇಕು ಎಂದಿರುವವರು ಅಂತೂ ಮಿಸ್ ಮಾಡದೇ ಈ ಟೀಯನ್ನು ಕುಡಿಯಲೇಬೇಕು ಅನ್ನಿ! ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಂಡು ಬರುವ ಕಿಡ್ನಿ ಸ್ಟೋನ್ ಸಮಸ್ಯೆಗೂ ಇದು ಹೇಳಿ ಮಾಡಿಸಿದ ಮದ್ದು ಹೌದು. ಬ್ಲಾಕ್ ಟೀ ಸೇವನೆಯಿಂದ ಮೂತ್ರ ಪಿಂಡದಲ್ಲಿ ಆಗುವಂತ ಕಲ್ಲುಗಳನ್ನು ಕರಗಿ ಹೋಗುತ್ತದೆ.

ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬ್ಲಾಕ್ ಟೀ ಯು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮಧುಮೇಹ ಬಾರದಂತೆ ತಡೆಯುವ ಬ್ಲಾಕ್ ಟೀ ಯು ಕುಡಿಯಲು ಕೂಡಾ ರುಚಿಯಾಗಿರುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ