ಕರಾವಳಿ ಮತ್ತು ಮಲೆನಾಡ ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯಲ್ಪಡುವ ಥೈಲ್ಯಾಂಡ್ ಮೂಲದ ಈ ಮೆಣಸಿನ ಹೆಸರು ಗಾಂಧಾರಿ ಮೆಣಸು. ಲವಂಗ ಮೆಣಸು, ಜೀರಿಗೆ ಮೆಣಸು, ಸೂಜಿ ಮೆಣಸು, ಪರಂಗಿ ಮೆಣಸು, ಚೂರು ಮೆಣಸು ಹೀಗೆ ಅನೇಕ ಹೆಸರುಗಳಿಂದ ಗುರುತಿಸಲ್ಪಡುವ ಗಾಂಧಾರಿ ಮೆಣಸಿನ ವೈಜ್ಞಾನಿಕ ಹೆಸರು Capsicum Chainense. ತೋಟದಲ್ಲಿ ಮಾತ್ರವಲ್ಲದೇ ಬೇಲಿ ಬದಿಗಳಲ್ಲಿ ಬೆಳೆಯಲ್ಪಡುವ ಈ ಮೆಣಸಿನ ಗಿಡಕ್ಕೆ ವಿಶೇಷ ಆರೈಕೆಗಳ ಅಗತ್ಯವಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಈ ಮೆಣಸು ನೋಡಲು ಸಣ್ಣದಿದ್ದರೂ ತುಂಬಾ ಖಾರ.
ಅದೇ ಕಾರಣಕ್ಕಾಗಿ ಹಸಿಮೆಣಸಿನ ಬದಲಿಗೆ ಇದನ್ನು ಬಳಸುವವರು ಇದ್ದಾರೆ.

ಆಕಾಶದತ್ತ ಮುಖ ಮಾಡಿ ಬೆಳೆಯುವ ಗಾಂಧಾರಿಯು ವರುಷ ಪೂರ್ತಿ ಕಾಯಿ ಬಿಡುತ್ತದೆ. ಕರಾವಳಿ ಕಡೆಗಳಲ್ಲಿ ಚಟ್ನಿಗೆ ಬಳಸುವ ಇದನ್ನು ಒಣಗಿಸಿ ಇಟ್ಟುಕೊಳ್ಳಲು ಸಾಧ್ಯ. ಹೌದು, ಹಣ್ಣುಮೆಣಸನ್ನು ಕೊಯ್ದು, ಅದನ್ನು ಒಣಗಿಸಿಟ್ಟರೆ ಆಯಿತು. ಅದನ್ನು ವರ್ಷಗಟ್ಟಲೇ ಉಪಯೋಗಿಸಬಹುದು.

ಖಾರದಲ್ಲಿ ಹಸಿಮೆಣಸಿಗಿಂತ ಒಂದು ಕೈ ಜಾಸ್ತಿಯೇ ಇರುವ ಈ ಗಾಂಧಾರಿ ಮೆಣಸು ದೇಹಕ್ಕಂತೂ ತುಂಬಾ ತಂಪು. ಹಸಿಮೆಣಸಿನಕಾಯಿ ಸೇವನೆಯಿಂದ ಉಂಟಾಗುವ ಹೊಟ್ಟೆ ಉರಿ, ಅಲ್ಸರ್, ಉಷ್ಣ, ಎದೆ ಉರಿ ಇದ್ಯಾವ ತೊಂದರೆಯೂ ಗಾಂಧಾರಿ ಮೆಣಸಿನ ಸೇವನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇದರ ಜೊತೆಗೆ ಹೊಟ್ಟೆ ಉಬ್ಬರಿಸುವುದು, ಅಜೀರ್ಣ, ಸಂಧಿವಾತ ನಿವಾರಿಸುವ ಗಾಂಧಾರಿಯು ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗಾಂಧಾರಿ ಮೆಣಸಿನ ರಸವು ಕ್ಷಾರಯುಕ್ತವಾಗಿದೆ. ಇದು ಜಠರ ಮತ್ತು ಕರುಳುಗಳ ಕಾರ್ಯವನ್ನು ವೃದ್ದಿಸುತ್ತದೆ. ಜೊತೆಗೆ ಆಗಾಗ ಕಂಡು ಬರುವಂತಹ ಎಸಿಡಿಟಿಯನ್ನು ಕೂಡಾ ಇದು ದೂರ ಮಾಡುತ್ತದೆ.

ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಮೆಗ್ನೆಶಿಯಂ, ವಿಟಮಿನ್ ಬಿ ಹೀಗೆ ಪೋಷಕಾಂಶಗಳ ಆಗರವಾಗಿರುವ ಗಾಂಧಾರಿಯು ಶರೀರದಲ್ಲಿರುವ ಮೆಟಬಾಲಿಸಂ ಹೆಚ್ಚಾಗುವಲ್ಲಿ ಸಹಕರಿಸಲಾಗುತ್ತದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ