ಭಾರತೀಯ ಪಾಕಶಾಲೆಯಲ್ಲಿ ಬಹಳವಾಗಿ ಬಳಸುವ ಸಾಮಗ್ರಿ ಎಂದರೆ ಬಾಳೆಲೆ. ಅನಾದಿಕಾಲದಿಂದಲೂ ಬಾಳೆಲೆಯ ಬಳಕೆ ಹಾಗೂ ಪ್ರಯೋಜನಗಳಿಗೆ ತುಂಬಾ ಪ್ರಾಮುಖ್ಯತೆ ಇದೆ. ಆಯುರ್ವೇದದಲ್ಲೂ ಇದರ ಉಲ್ಲೇಖ ಇದೆ, ಚಿನ್ನ ಅಥವ ಬೆಳ್ಳಿ ತಟ್ಟೆಯಲ್ಲಿ ಉಣ್ಣುವುದಕ್ಕಿಂದ ಬಾಳೆಲೆ ಊಟ ಬಹಳ ಆರೋಗ್ಯಕರ ಅಭ್ಯಾಸ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಬಾಳೆಗಿಡದ ಎಲ್ಲಾ ಭಾಗವೂ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ಬಾಳೆ ಹಣ್ಣು, ಬಾಳೆದಿಂಡು, ಬಾಳೆ ಮೂತಿ, ಬಾಳೆ ಎಲೆ ಇತ್ಯಾದಿ ಎಲ್ಲವೂ ಆರೋಗ್ಯ ವೃದ್ಧಿಗೆ ಬಹಳಷ್ಟು ಸಹಕಾರಿ.

ಹಾಗಾದರೆ, ಬಾಳೆಲೆಯಲ್ಲಿ ಊಟ ಮಾಡುವುದರಿಂದ ಆರೋಗ್ಯದ ಮೇಲೆ ಹೇಗೆಲ್ಲಾ ಸತ್ಪರಿಣಾಮಗಳಾಗುತ್ತದೆ ಎಂಬುದನ್ನು ನೋಡೋಣ. ಬಾಳೆಲೆಯಲ್ಲಿ ಪ್ರತಿದಿನ ಊಟ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬಾಳೆಲೆಯನ್ನು ಟೀ ಅಥವಾ ಇನ್ಯಾವುದಾದರೂ ರೂಪದಲ್ಲಿ ಸೇವಿಸಬಹುದು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳು ಇರುವುದರಿಂದ ಜ್ವರದಿಂದ ಬಳಲುತ್ತಿದ್ದವರೂ ಇದನ್ನು ಬಳಸಿದರೆ ಬೇಗ ಜ್ವರ ಮುಕ್ತರಾಗಬಹುದು.

ಪ್ರತಿದಿನ ಬಾಳೆಲೆಯಲ್ಲಿ ಊಟ ಮಾಡುವುದರಿಂದ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪಾಲಿಫಿನಾಲ್‌ಗಳು ಕಂಟೆಂಟ್ ಕ್ಯಾನ್ಸರ್, ಆಲ್ಝೇಮರ್ಸ್, ಮರೆಗುಳಿತನ ಮೊದಲಾದ ತೀವ್ರ ಕಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ.

ಬಾಳೆಲೆಯನ್ನು ಒಣಗಿಸಿ ಪುಡಿ ಮಾಡಿ ಗಾಯಗೊಂಡ ಸ್ಥಳಕ್ಕೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ. ಈ ರೀತಿ ಚರ್ಮದ ಆರೋಗ್ಯವನ್ನೂ ಕಾಪಾಡಬಹುದು. ಸಾಂಪ್ರದಾಯಿಕ ಸ್ಪಾಗಳಲ್ಲಿ ಬಹಳಾ ಮೊದಲಿನಿಂದಲೂ ಇದನ್ನು ಬಳಸುತ್ತಾರೆ. ಇದು ಚರ್ಮದ ತೇವಾಂಶವನ್ನು ಕಾಪಾಡುವಲ್ಲಿ, ಮೊಡವೆಗಳನ್ನು, ತುರಿಕೆಗಳನ್ನು, ಒರಟು ಚರ್ಮವನ್ನು ಹೋಗಲಾಡಿಸುವಲ್ಲಿ ಬಹಳಾ ಸಹಕಾರಿ.
ಇದನ್ನು ಬಳಸುವುದರಿಂದ ತಲೆಹೊಟ್ಟನ್ನೂ ನಿವಾರಿಸಬಹುದು.

ಬಾಳೆಲೆಯಲ್ಲೇ ಪ್ರತಿದಿನ ಊಟ ಮಾಡುವುದರಿಂದ ಆರೋಗ್ಯಕ್ಕೂ ಬಹಳಾ ಒಳ್ಳೆಯದು, ಜೊತೆಗೆ ಪಾತ್ರೆ ತೊಳೆವ ಶ್ರಮವೂ ಕಮ್ಮಿ. ಅಲ್ಲದೆ ಪ್ಲಾಸ್ಟಿಕ್ ತಟ್ಟೆ ಇತ್ಯಾದಿಯನ್ನು ಬಳಸಿ ಪರಿಸರ ಹಾಳುಮಾಡುವುದರ ಬದಲಿಗೆ ಬಾಳೆಲೆ ಬಳಸುವುದು ಬಹಳಾ ಸೂಕ್ತ ಹಾಗೂ ಅವಶ್ಯಕ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ