Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E paper 01 oct 2023
  • E paper 30 sep 2023
  • E paper 29 sep 2023
  • E paper 27 sep 2023
  • E paper 26 sep 2023
  • E paper 22 sep 2023
  • E paper 22 sep 2023
  • E paper 21 sep 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ವಿಶೇಷವರದಿ»‘ಕನ್ನಡ ಸೃಜನಶೀಲ ಸಾಹಿತ್ಯ’ ಆಸಕ್ತರಿಗೆ ಇಲ್ಲಿದೆ ಸುವರ್ಣಾವಕಾಶ
ವಿಶೇಷವರದಿ

‘ಕನ್ನಡ ಸೃಜನಶೀಲ ಸಾಹಿತ್ಯ’ ಆಸಕ್ತರಿಗೆ ಇಲ್ಲಿದೆ ಸುವರ್ಣಾವಕಾಶ

August 2, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸಿದೆ. ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು. ಈ ಮೂರು ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಪ್ರತಿವರ್ಷದಂತೆ ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ.  ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ (OCI) ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ) ಹಾಗೂ  18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ಜನವರಿ 1, 1993ರ ನಂತರ ಮತ್ತು ಜನವರಿ 1, 2005 ರ ನಡುವೆ ಹುಟ್ಟಿದವರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಟೊಟೊ ಪುರಸ್ಕಾರವು 50,000 ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರವೇಶಗಳನ್ನು MS Word ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್ ನಲ್ಲಿ ಮಾತ್ರ ಕಳಿಸಬೇಕು. ಮುದ್ರಿತ ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. MS Word ಅಲ್ಲದೇ ಬೇರೆ ಯಾವ ಸಾಫ್ಟವೇರ್ ನಲ್ಲಿಯೂ ಪ್ರವೇಶಗಳನ್ನು ಸ್ವೀಕರಿಸುವುದಿಲ್ಲ. ಪ್ರವೇಶಕ್ಕಾಗಿ ಕಳಿಸುವ ಕತೆ, ಕವಿತೆ, ನಾಟಕಗಳ ಮೇಲೆ ಎಲ್ಲಿಯೂ ನಿಮ್ಮ ಹೆಸರು ಬರೆದಿರಬಾರದು. ಇದನ್ನು ಅರ್ಜಿಯಲ್ಲೇ ಬರೆದು, ಪ್ರವೇಶದ ಜೊತೆ ಕಳಿಸಬೇಕು. ಕವಿತೆಗಳನ್ನು ಕಳುಹಿಸುವವರು 8 ರಿಂದ 12 ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು, ಆದರೆ ಎಲ್ಲ ಕತೆಗಳೂ ಸೇರಿ 7500 ಶಬ್ದಗಳನ್ನು ಮೀರಬಾರದು. ಪ್ರವೇಶಕ್ಕೆ ಕಳಿಸುವ ನಾಟಕಗಳ ಶಬ್ದಮಿತಿ 10,000 ಶಬ್ದಗಳು.

ಒಬ್ಬರು ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿ ಪ್ರತ್ಯೇಕ ಪ್ರವೇಶಕ್ಕೂ ಪ್ರತ್ಯೇಕ ಅರ್ಜಿ ಕಳಿಸಬೇಕು.

ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು. ಈಮೇಲ್ Subject ನಲ್ಲಿ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: ‘ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ’,‘ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ’ ಅಥವಾ‘ ಕನ್ನಡ ಸೃಜನಶೀಲ ಸಾಹಿತ್ಯ – ಕತೆ’. ಎಲ್ಲವೂ ಇ-ಮೇಲ್ ಮೂಲಕ ಮಾತ್ರ ಕಳಿಸಬೇಕು.

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ:  15, ಸೆಪ್ಟೆಂಬರ್, 2022. ಪ್ರವೇಶಗಳನ್ನು ಕಳಿಸಬೇಕಾದ ಇ-ಮೇಲ್ totokannada@gmail.com ಸಂದೇಹಗಳಿದ್ದಲ್ಲಿ ಇದೇ ವಿಳಾಸಕ್ಕೆ ಬರೆದು ಹೆಚ್ಚಿನ ವಿವರ ಕೇಳಬಹುದು. ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ಅರ್ಜಿಯನ್ನು ಲಗತ್ತಿಸಬೇಕು. ಈ ಅರ್ಜಿಯನ್ನು http://totofundsthearts.blogspot.com ಇಲ್ಲಿಂದ ನಕಲಿಳಿಸಬಹುದು. ಈ ಅರ್ಜಿ ಇಲ್ಲದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

(ಟಿ.ಎಫ್.ಎ. ಸಂಸ್ಥೆಯು ಆಂಗೀರಸ ‘ಟೊಟೊ’ ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳು ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.)

Share. Facebook Twitter Pinterest LinkedIn Telegram Email
Previous Articleರಂಗ ಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ; ಇಂದು ವಿಶೇಷ ಅಂಚೆ ಚೀಟಿ ಬಿಡುಗಡೆ
Next Article ಈ ಬಾರಿಯ ರಕ್ಷಾ ಬಂಧನಕ್ಕೆ ಭದ್ರನ ನೆರಳು, ರಕ್ಷಾ ಬಂಧನದ ದಿನಾಂಕ, ಇತಿಹಾಸ, ಪ್ರಾಮುಖ್ಯತೆ ಇಲ್ಲಿದೆ

Related Posts

ಇನ್ಸ್ಪೆಕ್ಟರ್ ನಂದೀಶ್ ಸಾವಿನ ತನಿಖೆಗೆ ಎಚ್. ಡಿ. ಕೆ ಒತ್ತಾಯ

October 30, 2022

ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಆಸ್ತಿ ಹಂಚಿಕೆ ಏಕೆ ಬಹಳ ಮುಖ್ಯ -ರಿನಾ ನಥಾನಿ, ಮುಖ್ಯ ವ್ಯವಹಾರ ಅಧಿಕಾರಿ, ಕ್ವಾಂಟಮ್ ಎಎಂಸಿ.

October 20, 2022

ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪುಸ್ತಕ ಮುಕ್ತ ದಿನ

October 1, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
October 2023
M T W T F S S
 1
2345678
9101112131415
16171819202122
23242526272829
3031  
« Sep    
Latest Posts

E paper 01 oct 2023

E paper 30 sep 2023

E paper 29 sep 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.