ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ‘ಗಂಧದಗುಡಿ’ ತೆರೆಮೇಲೆ ಬರಲು ಮುಹೂರ್ತ ಸಮೀಸುತ್ತಿದೆ. ಕರುನಾಡಿನ ವನ್ಯ ವೈವಿಧ್ಯವನ್ನು ತೆರೆಮೇಲೆ ತರಲಿರೋ ಈ ಸಿನಿಮಾ ಅಪ್ಪು ಅವರಿಗೆ ಬಲು ಹತ್ತಿರದ ಕನಸಾಗಿತ್ತು. ಇದೇ ಅಕ್ಟೋಬರ್ 28ಕ್ಕೆ ಈ ಡಾಕ್ಯು-ಮೂವಿ ಪರಿಯ ಸಿನಿಮಾ, ಕನ್ನಡಿಗರೆಲ್ಲರೂ ಹಾತೊರೆದು ಕಾಯುತ್ತಿರುವ ಸಿನಿಮಾಗಳಲ್ಲಿ ಒಂದಾಗಿದೆ. ಸದ್ಯ ಸುದ್ದಿಯಲ್ಲಿರುವ ‘ಗಂಧದಗುಡಿ’ಯ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ತ್ರಿಬಲ್ ರೈಡಿಂಗ್’ ಸಿನಿಮಾದ ಹೆಸರು ಕೇಳಿಬರುತ್ತಿದೆ.

ಅಕ್ಟೋಬರ್ 28ರಂದು ಪ್ರಪಂಚದಾದ್ಯಂತ ಕನ್ನಡ, ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರ ಕನ್ನಡ ನಾಡಿನ ಪರಿಸರದ ಸೌಂದರ್ಯವನ್ನು ಸಾರಲಿದೆ. ಈ ಚಿತ್ರದ ಜೊತೆಗೆ ಗಣೇಶ ಅವರ ಮುಂದಿನ ಸಿನಿಮಾ ‘ತ್ರಿಬಲ್ ರೈಡಿಂಗ್’ನ ಟೀಸರ್ ಕೂಡ ಪ್ರದರ್ಶಿತವಾಗಲಿದೆ ಎನ್ನಲಾಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ‘ಗಂಧದಗುಡಿ’ಯ ಜೊತೆಗೆ ‘ತ್ರಿಬಲ್ ರೈಡಿಂಗ್’ ಸಿನಿಮಾದ ಟೀಸರ್ ಕೂಡ ಜೋಡಣೆಯಾಗಲಿದೆ. ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲಿ ಗಣೇಶ್, ಅದಿತಿ ಪ್ರಭುದೇವ, ರಚನಾ ಇಂದರ್ ಹಾಗು ಮೇಘ ಶೆಟ್ಟಿ ಸೇರಿದಂತೆ ಮೂರು ಹೀರೋಯಿನ್ ಗಳ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.

ಅಮೋಘವರ್ಷ ಅವರ ನಿರ್ದೇಶನದಲ್ಲಿ ಅಪ್ಪು ಹಾಗು ಅಮೋಘವರ್ಷ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ, ಪುನೀತ್ ಅವರು ಅವರದೇ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಣ್ಣಾವ್ರ ಹಿಟ್ ಸಿನಿಮಾ ‘ಗಂಧದಗುಡಿ’ಯ ಹೆಸರನ್ನಿಟ್ಟುಕೊಂಡು ಕನ್ನಡ ನಾಡಿನ ಅರಣ್ಯ ಸಂಪತ್ತನ್ನು ಸೆರೆಹಿಡಿವ ಅಪ್ಪು ಅವರ ಆಸೆ ಇದೇ ಅಕ್ಟೋಬರ್ 28ಕ್ಕೆ ತೆರೆಕಾಣಲಿದೆ. ಪ್ರಪಂಚದಾದ್ಯಂತ ಅಪಾರ ಅಪ್ಪು ಅಭಿಮಾನಿಗಳು ತೆರೆಮೇಲೆ ಪುನೀತ್ ರಾಜಕುಮಾರ್ ಅವರನ್ನು ಕಂಡು ಪುನೀತರಾಗಲು ಕಾಯುತ್ತಿದ್ದಾರೆ.