ಬಾಲನಟಿಯಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟು ನಾಯಕಿಯಾಗಿ ಮಿಂಚಿದ ಅಮೂಲ್ಯ ಅವರು ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂದ ಹಾಗೇ ಈ ಬಾರಿಯ ಹುಟ್ಟುಹಬ್ಬ ಅಮೂಲ್ಯಗೆ ತುಂಬಾ ಸ್ಪೆಷಲ್ ಹೌದು. ಯಾಕೆಂದರೆ ಅಮೂಲ್ಯ ಅವರು ತಮ್ಮ ಮುದ್ದಿನ ಮಕ್ಕಳ ಜೊತೆಗೆ ಮೊದಲ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಕುಟುಂಬದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಮೂಲ್ಯ “ಈ ವರ್ಷದ ಹುಟ್ಟುಹಬ್ಬ ತುಂಬಾ ಸ್ಪೆಷಲ್” ಎಂದು ಬರೆದುಕೊಂಡಿದ್ದಾರೆ.

ಇನ್ನು ಮುದ್ದಿನ ಮಡದಿ ಅಮೂಲ್ಯ ಹುಟ್ಟುಹಬ್ಬಕ್ಕೆ ಪತಿ ಜಗದೀಶ್ ಅವರು ವಿಶ್ ಮಾಡಿದ್ದು ನನ್ನ ಪಾಲಿಗೆ ಈ ದಿನವೇ ವ್ಯಾಲೆಂಟೈನ್ಸ್ ಡೇ ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಅಮೂಲ್ಯ ಜೊತೆಗಿರುವ ಒಂದಷ್ಟು ಫೋಟೋಗಳನ್ನು ಕೂಡಾ ಹಂಚಿಕೊಂಡಿರುವ ಜಗದೀಶ್ ಅವರು ಸೆಪ್ಟೆಂಬರ್ 14 ನನ್ನ ಪಾಲಿಗೆ ವ್ಯಾಲೆಂಟೈನ್ ಡೇ. ಹುಟ್ಟುಹಬ್ಬದ ಶುಭಾಶಯಗಳು ಅಮೂಲ್ಯ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಇದು ನಾವು ಕಳೆದ ಪ್ರೀತಿಯ ಕ್ಷಣಗಳು” ಎಂದು ಬರೆದುಕೊಂಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಅಮೂಲ್ಯ “ತಾಯ್ತನ ಎನ್ನುವುದು ಒಂದು ಪವಾಡವೇ ಸರಿ. ನಿದ್ದೆಯಿಲ್ಲದೆ ಕಳೆದ ರಾತ್ರಿಗಳಿಗೆ ಲೆಕ್ಕವಿಲ್ಲ. ಇಬ್ಬರು ಮಕ್ಕಳು ಒಟ್ಟಿಗೆ ಅಳುವುದು.. ಅದು ಗಂಟೆಗಟ್ಟಲೆ ಸಮಯ. ಎರಡು ಗಂಟೆಗಳ ಅಂತರದಲ್ಲಿ ಆಹಾರವನ್ನು ನೀಡುವುದು. ಹುಚ್ಚುತನ, ಹಸಿವು, ಕೋಪ ಏನು ಇಲ್ಲ ಆದರೂ ಒಂದು ರೀತಿಯ ಕಿರಿಕಿರು… ಈ ಎಲ್ಲವೂ ಮುದ್ದು ಮಕ್ಕಳು ಮುಗುಳುನಕ್ಕಾಗ ಮಾಯವಾಗುತ್ತದೆ” ಎಂದು ಹೇಳಿದ್ದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ