Bharatha SarathiBharatha Sarathi
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್

Subscribe to Updates

Get the latest creative news from FooBar about art, design and business.

Facebook Twitter Instagram
Trending
  • E paper 01 oct 2023
  • E paper 30 sep 2023
  • E paper 29 sep 2023
  • E paper 27 sep 2023
  • E paper 26 sep 2023
  • E paper 22 sep 2023
  • E paper 22 sep 2023
  • E paper 21 sep 2023
Facebook Twitter Instagram
Bharatha SarathiBharatha Sarathi
AD 1
  • HOME
  • About Us
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಕ್ರೀಡೆ
  • ಕ್ರೈಂ ಸುದ್ದಿ
  • ರಾಜಕೀಯ
  • ರಾಜ್ಯ ಸುದ್ದಿ
  • More
    • ತಂತ್ರಜ್ಞಾನ
    • ರಾಶಿ ಭವಿಷ್ಯ
    • ರಾಷ್ಟ್ರೀಯ ಸುದ್ದಿ
    • ಲೋಕಲ್ ಸುದ್ದಿ
    • ವಾಣಿಜ್ಯ
    • ವಿಶೇಷವರದಿ
    • ಸಿನಿಮಾ
  • ಇ-ಪೇಪರ್
Bharatha SarathiBharatha Sarathi
Home»ವಾಣಿಜ್ಯ»1 ಕೆಜಿ ಸಿಎನ್​ಜಿಗೆ 6, ಒಂದು ಯೂನಿಟ್ ಅಡುಗೆ ಅನಿಲಕ್ಕೆ 4 ರೂಪಾಯಿ ಹೆಚ್ಚಳ
ವಾಣಿಜ್ಯ

1 ಕೆಜಿ ಸಿಎನ್​ಜಿಗೆ 6, ಒಂದು ಯೂನಿಟ್ ಅಡುಗೆ ಅನಿಲಕ್ಕೆ 4 ರೂಪಾಯಿ ಹೆಚ್ಚಳ

August 3, 2022
Facebook Twitter Pinterest LinkedIn WhatsApp Reddit Email Telegram
Share
Facebook Twitter LinkedIn Pinterest Email Telegram WhatsApp

ವಾಹನಗಳಿಗೆ ಇಂಧನವಾಗಿ ಬಳಕೆಯಾಗುವ ಸಿಎನ್​ಜಿ (Compressed Natural Gas – CNG) ಬೆಲೆ ಬುಧವಾರದಿಂದ (ಆಗಸ್ಟ್​ 3) ಒಂದು ಕೆಜಿಗೆ ₹ 6 ಹೆಚ್ಚಾಗಿದೆ. ಈ ಬೆಲೆಏರಿಕೆಯೊಂದಿಗೆ ಮುಂಬೈ ಮಹಾನಗರದಲ್ಲಿ (Mumbai Metropolitan Region – MMR) ಸಿಎನ್​ಜಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 86 ಮುಟ್ಟಿದೆ. ಪೈಪ್ ಮೂಲಕ ಮನೆಗಳಿಗೆ ಸರಬರಾಜಾಗುವ ಅಡುಗೆ ಅನಿಲದ ಬೆಲೆಯನ್ನು ಒಂದು ಯೂನಿಟ್​ಗೆ ₹ 4 ಹೆಚ್ಚಿಸಲಾಗಿದೆ. ಈ ಬೆಲೆಏರಿಕೆಯೊಂದಿಗೆ ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಅಡುಗೆ ಅನಿಲದ ಬೆಲೆಯು ಒಂದು ಯೂನಿಟ್​ಗೆ ₹ 52.50 ಆಗಿದೆ. ಅಡುಗೆ ಅನಿಲ ಬೆಲೆಏರಿಕೆಯು ಮುಂಬೈನ 19 ಲಕ್ಷ ಮನೆಗಳ ಮೇಲೆ ಪರಿಣಾಮ ಬೀರಲಿದೆ.

ಕಳೆದ 13 ತಿಂಗಳಲ್ಲಿ ಇದು 11ನೇ ಬೆಲೆ ಏರಿಕೆಯಾಗಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಒಂದು ಕೆಜಿ ಸಿಎನ್​ಜಿ ಧಾರಣೆಯು ₹ 36ರಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬೆಲೆ ಏರಿಕೆ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಮುಂಬೈನಲ್ಲಿ ಬೆಲೆ ಏರಿಕೆಯಾದ ನಂತರ ಬೆಂಗಳೂರಿನಲ್ಲಿಯೇ ಬೆಲೆ ಹೆಚ್ಚಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ನಗರದಲ್ಲಿ ಪ್ರಸ್ತುತ ಒಂದು ಕೆಜಿ ಸಿಎನ್​ಜಿ ಬೆಲೆಯು ₹ 88 ಇದೆ.

ಸಿಎನ್​ಜಿ ಬೆಲೆಏರಿಕೆ ಹಿನ್ನೆಲೆಯಲ್ಲಿ ಮುಂಬೈ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘವು ಬಾಡಿಗೆ ಹೆಚ್ಚಿಸಲು ಮುಂದಾಗಿದೆ. ‘ಬಾಡಿಗೆ ದರ ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಷ್ಕರ ಮಾಡಬೇಕಾಗುತ್ತದೆ’ ಎಂದು ಸಂಘದ ನಅಧ್ಯಕ್ಷ ಎ.ಎಲ್.ಖದ್ರೊಸ್ ಎಚ್ಚರಿಸಿದ್ದಾರೆ. ‘ಇಂದಿನ ದರ ಏರಿಕೆಯು ನಮ್ಮನ್ನು ಕಷ್ಟಕ್ಕೆ ತಳ್ಳಿದೆ. ನಗರ ವ್ಯಾಪ್ತಿಯಲ್ಲಿ ಮಿನಿಮಮ್ ಟ್ಯಾಕ್ಸಿ ದರವನ್ನು ₹ 35ಕ್ಕೆ ನಿಗದಿಪಡಿಸಬೇಕು’ ಎಂದು ಸಂಘವು ಕೋರಿದೆ.

ಮುಂಬೈ ನಗರ ಸಾರಿಗೆ ‘BEST’ (ಬೆಸ್ಟ್) ಸುಮಾರು 2,100 ಸಿಎನ್​ಜಿ ಚಾಲಿತ ಬಸ್​ಗಳನ್ನು ಬಳಸುತ್ತಿದೆ. ಸಿಟಿ ಬಸ್​ ಟಿಕೆಟ್ ಬೆಲೆಯನ್ನು 5 ಕಿಮೀಗೆ ₹ 5ಕ್ಕೆ ನಿಗದಿಪಡಿಸಲಾಗಿದೆ. ಸಿಎನ್​ಜಿ ಬೆಲೆಏರಿಕೆಯ ನಂತರ ನಗರ ಸಾರಿಗೆ ದರ ಹೆಚ್ಚಳದ ಬಗ್ಗೆಯೂ ಒತ್ತಾಯ ಕೇಳಿ ಬಂದಿದೆ. ಮಂಬೈ ನಗರದಲ್ಲಿ 8,000 ಶಾಲಾ ಬಸ್​ಗಳು ಕಾರ್ಯಾಚರಣೆ ಮಾಡುತ್ತಿವೆ. ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಶಾಲಾ ಬಸ್​ ಮಾಲೀಕರು ದರ ಪರಿಷ್ಕರಣೆಗೆ ಮುಂದಾಗುವ ನಿರೀಕ್ಷೆಯಿದೆ.

ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಮಹಾನಗರ ಗ್ಯಾಸ್ ಲಿಮಿಟೆಡ್ (Mahanagar Gas Limited – MGL), ‘ದೇಶೀಯ ಬಳಕೆಗಾಗಿ ಹಂಚಿಕೆಯಾಗಿರುವ ಅನಿಲದ ಪ್ರಮಾಣ ಕಡಿಮೆಯಾಗಿರುವುದರಿಂದ ಇತರೆಡೆಗಳಿಂದ ಅನಿಲ ಆಮದು ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಸಿಎನ್​ಜಿ ಬಳಕೆ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗಿದೆ. ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚಾಗಿರುವುದರಿಂದ ಕಂಪನಿಯ ಕಾರ್ಯಾಚರಣೆ ವೆಚ್ಚ ದುಬಾರಿಯಾಗಿದೆ. ಇದನ್ನು ಸರಿದೂಗಿಸಲು ಸಿಎನ್​ಜಿ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸಬೇಕಾಗಿದೆ’ ಎಂದು ವಿವರಿಸಿದೆ.

Share. Facebook Twitter Pinterest LinkedIn Telegram Email
Previous Articleರಾಜ್ಯದಲ್ಲಿ 30ಕ್ಕೂ ಹೆಚ್ಚು ಕ್ರಿಮಿನಲ್​ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದ ಸಂಪುಟ ಉಪಸಮಿತಿ
Next Article ಆರ್ಥಿಕ ನಿರ್ಬಂಧದ ಮೂಲಕ ತೈವಾನ್​ನ ಸೆಮಿಕಂಡಕ್ಟರ್ ಉದ್ಯಮಕ್ಕೆ ಪೆಟ್ಟು ಕೊಡಲು ಚೀನಾ ಚಿಂತನೆ; ಭಾರತದಲ್ಲಿ ಆತಂಕದ ಕಾರ್ಮೋಡ

Related Posts

ಎಸ್‌.ಬಿ.ಐ.ನಿಂದ ಸಾಲ ಸೌಲಭ್ಯ ಕೇಂದ್ರ ಸ್ಮಾರ್ಟ್ ಆಪ್

August 17, 2022

ಆಗಸ್ಟ್​​ನಲ್ಲಿ 18 ದಿನ ಬ್ಯಾಂಕ್​ಗಳಿಗೆ ರಜೆ, ಇಲ್ಲಿದೆ ಸಂಪೂರ್ಣ ಮಾಹಿತಿ

August 3, 2022

ಆರ್ಥಿಕ ನಿರ್ಬಂಧದ ಮೂಲಕ ತೈವಾನ್​ನ ಸೆಮಿಕಂಡಕ್ಟರ್ ಉದ್ಯಮಕ್ಕೆ ಪೆಟ್ಟು ಕೊಡಲು ಚೀನಾ ಚಿಂತನೆ; ಭಾರತದಲ್ಲಿ ಆತಂಕದ ಕಾರ್ಮೋಡ

August 3, 2022
Ad 2
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Recent Posts

ನಾನು ಮಾಡೆಲ್ ಆಗಿದ್ದೇನೆ ಎಂದರೆ ಅದಕ್ಕೆ ಪ್ರೇರಣೆ ಕಿಚ್ಚ ಸುದೀಪ್ – ವಿನಯಾ ಗಣೇಶ್

November 18, 2022

ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರುತಿ ನಟನೆಯಲ್ಲಿ ಬ್ಯುಸಿ

August 16, 2022

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪುಟ್ಟಕ್ಕನ ಮಗಳು

August 15, 2022

ಯಶಸ್ವಿ 200 ಸಂಚಿಕೆ ಪೂರೈಸಿದ ಮುದ್ದುಮಣಿಗಳು… ಶಿವು ಪಾತ್ರಧಾರಿ ಹೇಳಿದ್ದೇನು ಗೊತ್ತಾ?

September 19, 2022
About Us
About Us
Facebook Twitter YouTube
October 2023
M T W T F S S
 1
2345678
9101112131415
16171819202122
23242526272829
3031  
« Sep    
Latest Posts

E paper 01 oct 2023

E paper 30 sep 2023

E paper 29 sep 2023

© 2023 Bharatha Sarathi. Powered by FILMY SCOOP.

Type above and press Enter to search. Press Esc to cancel.