“ನೀರಾ ಆರ್ಯಾ” ಬಯೋಪಿಕ್ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ ಕನ್ನಡದ ನಿರ್ದೇಶಕಿ ರೂಪ ಅಯ್ಯರ್. ಸ್ವಾತಂತ್ರ್ಯ ಹೋರಾಟಗಾರ್ತಿ ‘ನೀರಾ ಆರ್ಯ’ ಅವರ ಜೀವನಗಾಥೆಯನ್ನು ಚಿತ್ರದ ಮೂಲಕ ತಿಳಿಸಲು ಹೊರಟಿರುವ ದೀಪಾ ಅಯ್ಯರ್ ತಮ್ಮ ಅನುಭವ ಹಾಗೂ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

“ಈ ಚಿತ್ರವು ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಜೀವನ ಹೋರಾಟದ ಬಗ್ಗೆ ಹೇಳಲಿದೆ. ಈ ಮಹಾನ್ ಹೋರಾಟಗಾರ್ತಿಯ ಬಗ್ಗೆ ಹಲವರಿಗೆ ತಿಳಿದೇ ಇಲ್ಲ. ನಮ್ಮ ಈ ಪ್ರಾಜೆಕ್ಟ್ ಮೂರು ವರ್ಷದ ಹಿಂದೆಯೇ ಆರಂಭಗೊಂಡಿತ್ತು. ಆದರೆ ಕೊರೋನಾದ ಕಾರಣ ಮುಂದುವರಿಸಲಾಗಲಿಲ್ಲ. ಇದೀಗ ಮತ್ತೆ ಕೈಗೆ ತೆಗೆದುಕೊಂಡಿದ್ದೇವೆ.” ಎಂದರು.

ಇದರ ಜೊತೆಗೆ “ನೀರಾ ಅಯ್ಯರ್ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಸೇವೆಸಲ್ಲಿಸಿದ ಮೊದಲ ಹೋರಾಟಗಾರ್ತಿ ಹಾಗೂ ಶಾರ್ಪ್ ಶೂಟರ್. ಆಕೆಯ ಗಂಡ ಬ್ರಿಟಿಷ್ ಸರಕಾರಕ್ಕೆ ದುಡಿದರೂ ಈಕೆ ಮಾತ್ರ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದರು. ಈಕೆ ಭಾರತದ ಮೊದಲ ಮಹಿಳಾ ಪತ್ತೇದಾರಿಯಾಗಿ ದುಡಿದರು. ಸುಭಾಷ್ ಚಂದ್ರ ಬೋಸ್ ರ ಬಗ್ಗೆ ಮಾಹಿತಿ ಬಿಟ್ಟುಕೊಡಲಿಲ್ಲವೆಂಬ ಕಾರಣಕ್ಕೆ ಈಕೆಯ ಎದೆಯ ಭಾಗಗಳನ್ನೇ ಬ್ರಿಟಿಷರು ಕತ್ತರಿಸಿದರು. ಈಕೆ ದೇಶಕ್ಕಾಗಿ ತನ್ನ ದೇಶದ್ರೋಹಿ ಪತಿಯನ್ನು ಕೊಂದರು. ಇಷ್ಟೆಲ್ಲಾ ಆದರೂ ಆಕೆಯ ಜೀವನದ ಕೊನೆಯ ದಿನಗಳನ್ನು ಹೂಬಮಾರುವವರಾಗಿ ಕಳೆಯಬೇಕಾಗಿಬರುವುದು ಶೋಚನೀಯ ವಿಷಯ. ಇದಲ್ಲದೆ ಹಲವು ಸ್ಪೂರ್ತಿದಾಕ ಅಂಶಗಳನ್ನು ಹೋರಾಟಗಳನ್ನು ಈ ಚಿತ್ರ ಹೊಂದಿದೆ” ಎಂದರು.

“ಈ ಚಿತ್ರಕ್ಕಾಗಿ ಈಕೆಯ ಬಗ್ಗೆ ಸಂಶೋಧನೆ ನಡೆಸುವಾಗ ಇನ್ನೂ ಹಲವಾರು ಅಂಶಗಳು ಕಂಡುಬಂತು. ಚಿತ್ರವನ್ನು ಒಬ್ಬ ಪತ್ರಿಕೋದ್ಯಮಿಯ ದೃಷ್ಟಿಯಿಂದ ಹೆಣೆಯಲಾಗಿದೆ. ಈ ಚಿತ್ರಕ್ಕಾಗಿ ನಾನು ಹಲವಷ್ಟು ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ. ಈ ಚಿತ್ರವನ್ನು ಚಿತ್ರಿಸಲು ಹಲವಾರು ಛಾಲೆಂಜ್ ಗಳಿವೆ. ನಾವು ಉತ್ತರಪ್ರದೇಶದ ಖೇಕಡದಲ್ಲಿ ಚಿತ್ರದ ಮೊದಲ ಹಂತವನ್ನು ಚಿತ್ರಿಸಲು ನಿರ್ಧರಿಸಿದ್ದೇವೆ ಅದು ಆಕೆಯ ಹುಟ್ಟೂರು. ಅಲ್ಲಿಂದ ಅಂಡಮಾನ್ ನಿಕೋಬಾರ್ ದ್ವೀಪ ಹಾಗೂ ಲಂಡನ್ನಿನಲ್ಲಿ ಚಿತ್ರಿಸಲಿದ್ದೇವೆ. ಈ ಚಿತ್ರದ ಮೂಲ ಉದ್ದೇಶ ‘ನೀರಾ ಆರ್ಯಾ’ರ ಬಗ್ಗೆ ಹಾಗೂ ಅವರ ಹೋರಾಟದ ಬಗ್ಗೆ ಮುಂದಿನ ಯುವ ಪೀಳಿಗೆಗೆ ತಿಳಿಸುವುದು. ಇಂದಿನ ಮಕ್ಕಳಿಗೆ ಗಾಂಧಿ, ಬೋಸ್ ರ ಬಗ್ಗೆ ಚೆನ್ನಾಗಿ ತಿಳಿದಿರಬಹುದು, ಆದರೆ ಇಂಥ ಎಲೆಮರೆ ಕಾಯಂತೆ ಹೋರಾಡಿ ದೇಶಕ್ಕಾಗಿ ಜೀವತೆತ್ತವರ ಬಗ್ಗೆಯೂ ತಿಳಿಸುವುದು ನಮ್ಮ ಜವಾಬ್ದಾರಿ” ಎಂದರು.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ