ಕನ್ನಡ ನಟ ಧ್ರುವ ಸರ್ಜಾ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಧ್ರುವ ಸರ್ಜಾ ಪತ್ನಿ ಗರ್ಭಿಣಿಯಾಗಿದ್ದಾರೆ. ಸದ್ಯದಲ್ಲೇ ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಲಿದೆ.

ಗರ್ಭಿಣಿ ಪತ್ನಿಯೊಡನೆ ಧ್ರುವ ಸರ್ಜಾ ಫೊಟೋಶೂಟ್ ಮಾಡಿಸಿಕೊಂಡಿದ್ದು, ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಧ್ರುವ ತನ್ನ ಪತ್ನಿ ಪ್ರೇರಣಾ ಜೊತೆಗೆ ಮಗುವಿನ ಅಲ್ಟ್ರಾ ಸೌಂಡ್ ಚಿತ್ರವನ್ನು ಹಿಡಿದು ಕಾಣಿಸಿಕೊಂಡಿದ್ದಾರೆ.

ಪತ್ನಿಯೊಂದಿಗಿನ ಚಿತ್ರಗಳನ್ನು ಕೊಲೇಜ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿರುವ ಧ್ರುವ ಸರ್ಜಾ, ”ಜೀವನದ ಹೊಸ ಹಂತಕ್ಕೆ ಹೋಗುತ್ತಿದ್ದೇವೆ. ಈ ಹಂತ ಬಹಳ ದಿವ್ಯವಾದ ಹಂತವಾಗಿದೆ. ಶೀಘ್ರದಲ್ಲಿ ಪುಟ್ಟ ಮಗುವಿನ ಆಗಮನವಾಗಲಿದ್ದು, ಮಗುವನ್ನು ಹರಸಿ, ಜೈ ಆಂಜನೇಯ” ಎಂದು ಬರೆದಿದ್ದಾರೆ.

ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ 2019 ರ ನವೆಂಬರ್ ನಲ್ಲಿ ವಿವಾಹವಾಗಿದ್ದರು. ವಿವಾಹವಾದ ಕೆಲವೇ ತಿಂಗಳಲ್ಲಿ ಕೋವಿಡ್ ಬಂತು ಮಾತ್ರವಲ್ಲದೆ ಆ ಬಳಿಕ ಧ್ರುವ ಸರ್ಜಾರ ಸಹೋದರ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದರು. ಈ ಆಘಾತದ ಚೇತರಿಕೆಯ ಮಧ್ಯೆ, ಚಿರಂಜೀವಿ ಸರ್ಜಾರ ಪತ್ನಿ ಮೇಘನಾ ರಾಜ್ 2020ರ ಅಕ್ಟೋಬರ್‌ನಲ್ಲಿ ಗಂಡು ಮಗುವಿಗೆ ಗಂಡು ಮಗುವಿಗೆ ಜನ್ಮ ನೀಡಿದರು.

ಇದೀಗ ಪ್ರೇರಣಾ ಮಗುವಿಗೆ ಜನ್ಮ ನೀಡಲು ತಯಾರಾಗಿದ್ದಾರೆ. ಅಣ್ಣನ ಮಗನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದ ಧ್ರುವ ಸರ್ಜಾ,ಅವನಿಗಾಗಿ ದುಬಾರಿ ತೊಟ್ಟಿಲೊಂದನ್ನು ಉಡುಗೊರೆ ನೀಡಿದ್ದರು. ಇದೀಗ ತಮ್ಮ ಮಗುವನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ ಧ್ರುವ ಸರ್ಜಾ.

ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನೆಮಾ ಚಿತ್ರೀಕರಣದ ಹಂತದಲ್ಲಿದೆ. ಇದಾದ ಬಳಿಕ ಪ್ರೇಮ್ ಜೊತೆಗಿನ ಸಿನಿಮಾಕ್ಕೆ ಧ್ರುವ ಸರ್ಜಾ ಬಣ್ಣ ಹಚ್ಚಲಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ