ಬುಲೆಟ್ ಚಿತ್ರದ ಮೂಲಕ ಸದ್ದು ಮಾಡುತ್ತಿರುವ ಧರ್ಮ ಕೀರ್ತಿರಾಜ್. ಹೌದು ಹೆಸರಂತ ನಟ ಕೀರ್ತಿರಾಜ್ ಅವರ ಸುಪುತ್ರ ಧರ್ಮ ಕೀರ್ತಿರಾಜ್ ಇದೀಗ ಸಾಲು ಸಾಲು ಚಿತ್ರಗಳ ಜೊತೆಗೆ ಬ್ಯುಸಿ ಆಗಿದ್ದಾರೆ. ನವಗ್ರಹ ಚಿತ್ರದ ಮೂಲಕ ಸೂಪರ್ ಹಿಟ್ ಆದ ಈ ನಟ ಸದ್ಯಕ್ಕಂತೂ ತಮ್ಮ ಬಳಿ 5 ಚಿತ್ರಗಳನ್ನು ಪ್ರತಿ ಚಿತ್ರದಲ್ಲೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಲ್ವಾರ್, ಸುಮನ್, ವಸುಂಧರದೇವಿ, ಓ ಮನಸೇ ಹಾಗೂ ಟೆನೆಂಟ್ ಎಂಬ ಚಿತ್ರಗಳಲ್ಲಿ ಈ ನಟ ಭರ್ಜರಿ ಬ್ಯುಸಿಯಾಗಿದ್ದಾರೆ.

ಇದೀಗ ಬುಲೆಟ್ ಚಿತ್ರದ ಬಗ್ಗೆ ಮಾತನಾಡಿರುವ ಅವರು ” ಈ ಚಿತ್ರದಲ್ಲಿ ನಾನು ರಾ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದೇನೆ. ಹೈ ಪ್ರೊಫೈಲ್ ಕೇಸ್ ಗಳನ್ನೇ ತೆಗೆದುಕೊಳ್ಳುವ ಈ ಪಾತ್ರದ ಹೆಸರು ರೂನಿ. ರೂನಿ ಜೊತೆ ಚಿತ್ರದುದ್ದಕ್ಕೂ ಒಂದು ರಾಟ್ ವೀಲರ್ ಹಾಗೂ ಒಂದು ಜರ್ಮನ್ ಶಫರ್ಡ್ ನಾಯಿಗಳು ಕೂಡ ನಟಿಸಿವೆ. ಈ ಸಿನಿಮಾದಲ್ಲಿ ನಾನು ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ” ಎಂದಿದ್ದಾರೆ.

ತಂದೆ ಮಗನ ಸಂಬಂಧದ ಬಗ್ಗೆ ತೋರಿಸುವ ಈ ಮೂವಿ ಆಕ್ಷನ್ ಹಾಗೂ ಎಮೋಷನಲ್ ಕಥಾಂದರವನ್ನು ಹೊಂದಿದೆ. ಚಿತ್ರದ ಮೊದಲಾರ್ಧದಲ್ಲಿ ಸಭ್ಯ ಹುಡುಗನ ಹಾಗೆ ಕಂಡರೆ ಕೊನೆಯ ಅರ್ಧದಲ್ಲಿ ಮಾಸ್ ಆಂಟಿ ಹಿರೋ ಆಗಿ ಕಾಣಿಸಿಕೊಳ್ಳಲಿದ್ದೇನೆ.” ಎಂದು ತಮ್ಮ ಚಿತ್ರದ ಬಗ್ಗೆ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.

ಇನ್ನು ಚಿತ್ರಕ್ಕೆ ನಾಯಕಿಯಾಗಿ ಶ್ರಿಯ ಶುಕ್ಲ ಎಂಬುವವರು ಚೊಚ್ಚಲ ಬಾರಿಗೆ ನಟಿಸುತ್ತಿದ್ದು, ದುರ್ಗಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈನ ನಿರ್ದೇಶಕ ಸತ್ಯಜಿತ್ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಪ್ರೇಕ್ಷಕರು ಬಹಳಷ್ಟು ನಿರೀಕ್ಷೆಯಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ