ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಹೊಸ ಸೀಸನ್ ಆರಂಭವಾಗಿ ಮೂರು ವಾರಗಳು ಕಳೆದಿದೆ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ದೀಪಿಕಾ ದಾಸ್ ಈ ಸೀಸನ್ ನಲ್ಲಿ ದೊಡ್ಮನೆಗೆ ಮರುಪ್ರವೇಶ ಮಾಡಿದ್ದಾರೆ. ಇನ್ನು ಮೂರನೇ ವಾರದ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆಯಾಗುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮಾತ್ರವಲ್ಲ ತಮಗೆ ಇಂತಹ ಸುವರ್ಣ ಅವಕಾಶ ನೀಡಿರುವುದಕ್ಕೆ ಮನೆಯ ಅಷ್ಟೂ ಸದಸ್ಯರಿಗೆ ಅವರು ಧನ್ಯವಾದ ಹೇಳಿದ್ದಾರೆ.

ಮಗಳು ಬಿಗ್ ಬಾಸ್ ಮನೆಯಲ್ಲಿ ಮೂರನೇ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದ ಹಾಗೆಯೇ ದೀಪಿಕಾ ದಾಸ್ ಅವರ ಅಮ್ಮ ಮಗಳಿಗೆ ವಾಯ್ಸ್ ನೋಟ್ಸ್ ಕಳುಹಿಸುವ ಮೂಲಕ ಅಭಿನಂದಿಸಿದ್ದಾರೆ. ‘ನಾವು ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನೀನು ಕ್ಯಾಪ್ಟನ್ ಆಗಿದ್ದಕ್ಕೆ ಎಲ್ಲರಿಗೂ ಖುಷಿಯಾಗಿದೆ. ಆರಾಮಾಗಿ ಆಟವಾಡು. ಎಲ್ಲರೊಂದಿಗೆ ಹೊಂದಿಕೊಂಡು ಸಾಗುತ್ತಿರು. ಎಲ್ಲರ ಜೊತೆ ಜಾಸ್ತಿ ಮಾತಾಡು, ಚೆನ್ನಾಗಿ ಆಡು’ ಎಂದು ದೀಪಿಕಾ ತಾಯಿ ವಾಯ್ಸ್ ನೋಟ್ ಕಳುಹಿಸಿದ್ದಾರೆ.

ಅಂದ ಹಾಗೇ ಬಿಗ್ ಬಾಸ್ ಸೀಸನ್ 7 ರಲ್ಲಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದ ದೀಪಿಕಾ ದಾಸ್ ಬರೋಬ್ಬರಿ 16 ವಾರಗಳ ಕಾಲ ಅವರು ಮನೆಯಲ್ಲಿದ್ದರು. ಆದರೆ ಆ ಸೀಸನ್ ನಲ್ಲಿ ಒಂದು ಬಾರಿಯೂ ಅವರಿಗೆ ಕ್ಯಾಪ್ಟನ್ ಆಗುವಂತಹ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅವರು ಬಿಗ್ ಬಾಸ್ 9 ನೇ ಸೀಸನ್ ನ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದು ಮೂರನೇ ವಾರಕ್ಕೆ ಅವರು ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಸೀಸನ್ 9ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹೆಮ್ಮೆಗೆ ದೀಪಿಕಾ ಪಾತ್ರರಾಗಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ