ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಲ್ಲಿರುವ ಕೆಲವೇ ಕೆಲವು ಯುವನಟರಲ್ಲಿ ಪ್ರಮುಖರು ಡಾರ್ಲಿಂಗ್ ಕೃಷ್ಣ. ‘ಲವ್ ಮಾಕ್ಟೈಲ್’ ಸರಣಿ ಸಿನಿಮಾಗಳಲ್ಲಿ ಅಪಾರ ಯಶಸ್ಸು ಕಂಡ ಡಾರ್ಲಿಂಗ್ ಕೃಷ್ಣ, ಚಿತ್ರರಂಗದಲ್ಲಿ ತಮಗಿದ್ದ ಬೇಡಿಕೆಯನ್ನು ಕೂಡ ಏರಿಸಿಕೊಂಡರು. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಇವರ ಮುಂದಿನ ಸಿನಿಮಾಗಳಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು ಹೆಸರಾಂತ ನಿರ್ದೇಶಕರು ಶಶಾಂಕ್ ಅವರ ಜೊತೆಗಿನ ಸಿನಿಮಾ. ಸದ್ಯ ಈ ಹೊಸ ಚಿತ್ರದ ಟೈಟಲ್ ಘೋಷಣೆ ಮಾಡಿದ್ದಾರೆ ಚಿತ್ರತಂಡ.

ಇತ್ತೀಚೆಗಷ್ಟೇ ತೆರೆಕಂಡ ‘ಲವ್ 360’ ಸಿನಿಮಾದ ಮೂಲಕ ಹೊಸಬರ ಸಿನಿಮಾವೊಂದನ್ನು ಮಾಡಿ ಅದರ ಯಶಸ್ಸಿನ ಸಂತಸದಲ್ಲಿರುವ ಶಶಾಂಕ್ ಅವರು ತಮ್ಮ ಮುಂದಿನ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ಮಾಡಲಿದ್ದಾರೆ. ಬಹಳ ಹಿಂದೆಯೇ ಘೋಷಿತವಾಗಿದ್ದ ಈ ಚಿತ್ರ ಇದೀಗ ತನ್ನ ಚಿತ್ರೀಕರಣ ಶುರು ಮಾಡುತ್ತಿದೆ. ಒಂದು ವಿಶಿಷ್ಟವಾದ ಹಾಸ್ಯಬರಿತ ವಿಡಿಯೋ ಮೂಲಕ ಚಿತ್ರದ ಟೈಟಲ್ ಹೊರಬಿಟ್ಟಿದ್ದಾರೆ ನಿರ್ದೇಶಕರು. ಈ ಹೊಸ ಸಿನಿಮಾಗೆ ‘ಕೌಸಲ್ಯಾ ಸುಪ್ರಜ ರಾಮ’ ಎಂದು ಹೆಸರಿಡಲಾಗಿದೆ.

ಶಶಾಂಕ್ ನಿರ್ದೇಶನದ ಈ ‘ಕೌಸಲ್ಯ ಸುಪ್ರಜ ರಾಮ’ ಸಿನಿಮಾವನ್ನು ಅವರದೇ ‘ಶಶಾಂಕ್ ಸಿನಿಮಾಸ್’ ಹಾಗು ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರ ‘ಕೌರವ ಪ್ರೊಡಕ್ಷನ್ಸ್’ ಸೇರಿ ನಿರ್ಮಾಣ ಮಾಡಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಇರಲಿದೆ. ಸಿನಿಮಾದಲ್ಲಿ ನಟಿಸಲಿರೋ ನಟರ ಬಗೆಗೆ ಯಾವುದೇ ಸುಳಿವು ಸಿಕ್ಕಿಲ್ಲವಾದರೂ, ಈ ವಿಡಿಯೋನ ಮೂಲಕ ಸಿನಿಮಾದಲ್ಲಿ ಇಬ್ಬರು ಹೀರೋಯಿನ್ ಇರಲಿದ್ದಾರ ಎಂಬ ಕುತೂಹಲವನ್ನ ಅಭಿಮಾನಿಗಳಲ್ಲಿ ತುಂಬಿದ್ದಾರೆ. ಒಟ್ಟಿನಲ್ಲಿ ಇದೊಂದು ಹಾಸ್ಯಬರಿತ ರೋಮ್ಯಾಂಟಿಕ್ ಸಿನಿಮಾ ಆಗಿರುವ ಎಲ್ಲ ಸಾಧ್ಯತೆಗಳಿವೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ