ಇತ್ತೀಚೆಗೆ ಡಾಲಿ ನಟಿಸಿರುವ ಸಲಗ, ರತ್ನನ್ ಪ್ರಪಂಚ, ಬೈರಾಗಿ, ಪುಷ್ಪ, ಹೆಡ್‌ಬುಷ್ ಈ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ `ರಾಬರ್ಟ್’ ಚಿತ್ರದ ಖ್ಯಾತಿಯ ನಿರ್ಮಾಪಕ ಉಮಾಪತಿ ನಿರ್ಮಾಣದ ಚಿತ್ರಕ್ಕೆ ಡಾಲಿ ಅಲಿಯಾಸ್ ಧನಂಜಯ್ ಅವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಉತ್ತರ ಕರ್ನಾಟಕದ ಹೋರಾಟಗಾರನ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಐತಿಹಾಸಿಕ ಪಾತ್ರ ಎಂದರೆ ಸಿಂಧೂರ ಲಕ್ಷ್ಮಣನಾಗಿ ನಟಿಸಲು ಡಾಲಿ ರೆಡಿಯಾಗಿದ್ದಾರೆ.

ಸಿಂಧೂರ ಲಕ್ಷ್ಮಣ ಚಿತ್ರಕ್ಕೆ ಬೇರೆ ಯಾವುದೋ ನಟರನ್ನು ಹಾಕಿಕೊಳ್ಳಬೇಕು ಎಂದು ನಿರ್ಧರಿಸಿದ್ದ ಚಿತ್ರದ ನಿರ್ಮಾಪಕ ಉಮಾಪತಿ ಅವರಿಗೆ ಇದೀಗ ಡಾಲಿ ಪಾತ್ರಕ್ಕೆ ಸೂಕ್ತ ಎಂದೆನಿಸಿದೆ. ಹೀಗಾಗಿ ಸಿಂಧೂರ ಲಕ್ಷ್ಮಣ ಚಿತ್ರವನ್ನು ನಿರ್ದೇಶಕ ತರುಣ್ ಸುಧೀರ್ ಅವರು ನಿರ್ದೇಶಿಸಲಿದ್ದಾರೆ. ಕಥೆ ಕೇಳಿ ಖುಷಿ ಪಟ್ಟ ಡಾಲಿಯೂ ಈ ಚಿತ್ರಕ್ಕೆ ಒಪ್ಪಿದ್ದಾರಂತೆ.

ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಅವರು ಬಡವರಿಂದ ತೆರಿಗೆ ಕೀಳುತ್ತಿದ್ದ ಬ್ರಿಟಿಷರ ವಿರುದ್ಧ, ಹೋರಾಡಿದ ವೀರ ಹೋರಾಟಗಾರ. ಇವರ ಬಗ್ಗೆ ಮುಂಬೈ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಬಹಳಷ್ಟು ಗೌರವವಿದೆ. ಇದೀಗ ಈ ಐತಿಹಾಸಿಕ ಅದ್ಭುತ ಪಾತ್ರಕ್ಕೆ ಜೀವ ತುಂಬಲಿದ್ದಾರೆ, ನಟ ಡಾಲಿ ಅಲಿಯಾಸ್ ಧನಂಜಯ್. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಕೂಡ ತಯಾರಾಗುತ್ತಿದ್ದು ಮುಂದಿನ ಅಪ್ಡೇಟ್ಸ್ ಗಾಗಿ ಕಾಯಬೇಕಿದೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ