ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ (Pro Kabaddi League) ಆಟಗಾರರ ಹರಾಜು ಪ್ರಕ್ರಿಯೆಯ ಮುಂಬೈನಲ್ಲಿ ಇದೇ ಆಗಸ್ಟ್ 5 ಮತ್ತು 6 ರಂದು ನಡೆಯಲಿದೆ. ಇದರಲ್ಲಿ ಸಾಗರೋತ್ತರ ವಿಭಾಗದಲ್ಲಿ ಇರಾನಿ ಕಬಡ್ಡಿ ಆಟಗಾರ ಫಾಜೆಲ್ ಅತ್ರಾಚಲಿ (Sultan Fazel) ಭಾಗವಹಿಸಲಿದ್ದು, ಅವರನ್ನು ಯಾರು ಬಿಡ್ ಮಾಡುವರು ಎಂಬ ಕುತೂಹಲ ಈಗ ಶುರುವಾಗಿದೆ. 9ನೇ ಆವೃತ್ತಿಯ ಹರಾಜು (Auction) ಪ್ರಕ್ರಿಯಲ್ಲಿ ಸಾಗರೋತ್ತರ ವಿಭಾಗದಲ್ಲಿ ‘ಸುಲ್ತಾನ್‘ ಎಂದೇ ಖ್ಯಾತರಾಗಿರುವ ಫಾಜೆಲ್ ಅತ್ರಾಚಲಿ ಗಮನ ಸೆಳೆಯುತಿದ್ದಾರೆ. ಅವರು ಯಾವ ತಂಡಕ್ಕೆ ಸೇರಲಿದ್ದಾರೆ, ಅವರನ್ನು ಯಾರು ಬಿಡ್ ಮಾಡಲಿದ್ದಾರೆ ಎನ್ನುವ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಇದೀಗ ಹರಾಜಿಗೆ ಕೆಲವೇ ದಿನಗಳಿರುವಾಗ ಪ್ರಸಿದ್ಧ ಸಾಮಾಜಿಕ ತಾಣ ಕೂ ಆ್ಯಪ್‌ನಲ್ಲಿ ಒಂದು ಪ್ರತ್ಯೇಕ ಪ್ರೋಮೋ ಬಿಡುಗಡೆ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ‘ ಸುಲ್ತಾನ್‘ ಫಜಲ್ ಘರ್ಜನೆಯನ್ನು ಬಿತ್ತರಿಸಿದೆ. ‘#vivoPKLPlayerAuction 2022 ರಂತೆ ಸುಲ್ತಾನ್ ಫಜಲ್ ಘರ್ಜಿಸುತ್ತಾನೆ!. ನೀವು ಯಾವ #vivoProKabaddi ತಂಡದಲ್ಲಿ ಈ ಡಿಫೆಂಡರ್ ಅನ್ನು ನೋಡಲು ಬಯಸುತ್ತೀರಿ?’, ಎಂದು ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಪೋಸ್ಟ್ ಮಾಡಿದೆ.
ಪ್ರೊ ಕಬಡ್ಡಿ ಲೀಗ್‌ನಲ್ಲಿ ‘ಸುಲ್ತಾನ್‘ ಫಜಲ್ ಅನ್ನು ಟೈಗರ್ ಎಂದು ಕರೆಯಲಾಗುತ್ತದೆ. ಅವರು ಈ ಆವೃತ್ತಿಯಲ್ಲಿ ಹರಾಜಿನಲ್ಲಿ ಭಾಗವಹಿಸುತ್ತಿರುವ ಎರಡನೇ ಡಿಫೆಂಡರ್ ಆಗಿದ್ದಾರೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ 2021 ಗೇಮ್ಸ್‌ನ ಟಾಪ್ 2 ರಲ್ಲಿರುವ 24 ಆಟಗಾರರನ್ನು ಹರಾಜಿಗೆ ಸೇರಿಸಲಾಗಿದೆ. ಈ ಆವೃತ್ತಿಯಲ್ಲಿ ಒಟ್ಟು 12 ಫ್ರಾಂಚೈಸಿಗಳು ಬಿಡ್ಡಿಂಗ್ ಮಾಡಲಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಫ್ರಾಂಚೈಸಿ ಕನಿಷ್ಠ 18 ಆಟಗಾರರು ಮತ್ತು ಗರಿಷ್ಠ 25 ಆಟಗಾರರ ಮೇಲೆ ಬಿಡ್ಡಿಂಗ್ ನಡೆಸಬಹುದು.
4 ವಿಭಾಗಗಳಲ್ಲಿ ಆಟಗಾರರ ಹರಾಜು
ಹರಾಜಿಗೆ ಆಟಗಾರರನ್ನು ಸ್ಥೂಲವಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೇಶೀಯ, ಸಾಗರೋತ್ತರ ಮತ್ತು ಹೊಸ ಯುವ ಆಟಗಾರರು (NYP) ಸೇರಿದ್ದಾರೆ. ಇದಾದ ನಂತರ, ನಾಲ್ಕು ಉಪ–ವರ್ಗಗಳನ್ನು ರಚಿಸಲಾಗುತ್ತದೆ – A, B, C ಮತ್ತು D ಮತ್ತು ಪ್ರತಿ ವಿಭಾಗದಲ್ಲಿ ಆಟಗಾರರನ್ನು ‘ಆಲ್–ರೌಂಡರ್‌ಗಳು‘, ‘ಡಿಫೆಂಡರ್‌ಗಳು‘ ಮತ್ತು ‘ರೈಡರ್‌ಗಳು‘ ಎಂದು ಉಪ ವಿಂಗಡಣೆ ಮಾಡಲಾಗುತ್ತದೆ.
ಪ್ರತಿ ವರ್ಗದ ಮೂಲ ಬೆಲೆ
ಎ ವರ್ಗ – 30 ಲಕ್ಷ ರೂ.
ಬಿ ವರ್ಗ – 20 ಲಕ್ಷ ರೂ.
ಸಿ ವರ್ಗ – 10 ಲಕ್ಷ ರೂ.