ಕನ್ನಡ ಬಿಗ್ ಬಾಸ್ ಮೂಲಕ ಪ್ರಖ್ಯಾತಿ ಪಡೆದು ನಂತರ ಮದುವೆಯಾದ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈಗ ಮತ್ತೊಂದು ಹೊಸ ಟ್ರೆಂಡ್ ಮೂಲಕ ಬಹಳಷ್ಟು ಚರ್ಚೆಯಲ್ಲಿದ್ದಾರೆ. ಮೊದಲಿನಿಂದಲೂ ನಿವೇದಿತಾ ಗೌಡ ರೀಲ್ಸ್ ಗೆ ಫೇಮಸ್ಸು. ಈಗ ಪತಿ ಚಂದನ್ ಶೆಟ್ಟಿ ಜೊತೆ ಸೇರಿಕೊಂಡು ಹಳ್ಳಿಯ ವೇಷವನ್ನು ಧರಿಸಿ, ಪುಟ್ಟಲಕ್ಷ್ಮಿ ಎಂಬ ಒಂದು ಮಿನಿಟ್ ರೀಲ್ಸ್ ಗೆ ಹೆಜ್ಜೆ ಹಾಕಿದ್ದಾರೆ.

ಈ ಮೊದಲು, ಕಾರ್ಯಕ್ರಮ ಒಂದರಲ್ಲಿ ಪ್ರಪೋಸ್ ಮಾಡುವುದರ ಮೂಲಕ ಚಂದನ್ ಶೆಟ್ಟಿ ನಿವೇದಿತ ಗೌಡರನ್ನು ಮದುವೆಯಾಗುವುದನ್ನು ಇಡೀ ಕರ್ನಾಟಕಕ್ಕೆ ತಿಳಿಸಿದ್ದರು. ನಂತರ ಈ ಜೋಡಿ ಹಲವಾರು ರೀಲ್ಸ್ ಗಳ ಮೂಲಕ ಸುದ್ದಿಯಲ್ಲಿದ್ದರು.

ಇತ್ತೀಚೆಗೆ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ಎಂಬ ರಿಯಾಲಿಟಿ ಶೋ ಅಲ್ಲಿ ಕೂಡ ಭಾಗವಹಿಸಿದರು. ಈ ನಡುವೆ ಲಿಪ್ ಕಿಸ್ ಮಾಡುವ ವಿಡಿಯೋ ಒಂದನ್ನು ಶೇರ್ ಮಾಡಿದ ದಂಪತಿ ಬಹಳಷ್ಟು ನೆಟ್ಟಿಗರ ವಿರೋಧಕ್ಕೆ ಪಾತ್ರವಾಗಿದ್ದರು.

ಸದ್ಯಕ್ಕೆ ಅವರು ಮಾಡಿರುವ ಒನ್ ಮಿನಿಟ್ ಥೀಮ್ ನ ರೀಲ್ಸ್ ಬಹಳ ವೈರಲ್ ಆಗಿದ್ದಲ್ಲದೆ ಮೆಚ್ಚುಗೆಗೂ ಪಾತ್ರವಾಗಿದೆ.
ಚಂದನ್ ಶೆಟ್ಟಿ ಅವರು ಮತ್ತು ನಿವೇದಿತಾ ಗೌಡ ಅವರು ಒಂದು ನಿಮಿಷದಲ್ಲಿ ಈ ಹಾಡು ಮಾಡಿದ್ದು, ಇಬ್ಬರೂ ಹಳ್ಳಿ ಹುಡುಗ, ಹುಡುಗಿ ರೀತಿಯಲ್ಲಿ ರೆಡಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಚಂದನ್ ಬೈಕ್ ಮೇಲೆ ಕುಳಿತು “ಹೇ ಪುಟ್ಟ ಲಕ್ಷ್ಮೀ ಬಾರೇ, ಸ್ಪಲ್ಪ ಚೆಂದಾಗಿ ರೆಡಿಯಾಗಿ ಬಾರಮ್ಮಿ, ಹೋ ಮುದ್ದು ಲಕ್ಷ್ಮೀ, ಹತ್ತಿ ಬೈಕ್ ನ್ನು ಗಟ್ಟಿಯಾಗಿ ತಬ್ಬಿಕೋ ನನ್ನನ್ನು. ನಿನಗೆ ಅಂತ 2 ರೂಪಾಯಿ ಇಟ್ಟೀನಿ. ಗೂಡು ಅಂಗಡಿಯಲ್ಲಿ ಮಿಠಾಯಿ ಕೊಡಿಸ್ತೀನಿ…” ಎಂದು ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ಬಹಳ ವಿಭಿನ್ನವಾಗಿ ವಿಶೇಷವಾಗಿ ಮೂಡಿಬಂದಿದ್ದು ನೆಟ್ಟಿದರೆಲ್ಲರಿಗೂ ಖುಷಿಯಾಗಿದೆ.

ಈ ರೀಲ್ಸ್ ಅನ್ನು ಶೇರ್ ಮಾಡಿರುವ ಚಂದನ್ ಶೆಟ್ಟಿ, ಅಭಿಮಾನಿಗಳಿಗೆ ನೀವು ರೀಲ್ಸ್ ಮಾಡ್ರಿ ಎಂದು ಕರೆ ಕೊಟ್ಟಿದ್ದಾರೆ. ಜೊತೆಗೆ ಈ ರೀಲ್ಸ್ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ