ಕಾಂತಾರ ಸಿನಿಮಾ ನೋಡಿ ದಂಗಾದ ಖ್ಯಾತಾ ಬಾಲಿವುಡ್ ನಟಿ ಕಂಗನಾ ರಣಾವತ್, ಮುಂದಿನ ವರ್ಷದ ಆಸ್ಕರ್ ಗೆ ಕಾಂತಾರ ಸಿನಿಮಾ ಕಳಿಸಿ ಎಂದು ಹೇಳಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಕಾಂತಾರ ಸಿನಿಮಾ ನೋಡಿದ ಕಂಗನಾ ವಿಡಿಯೋ ಮೂಲಕ ರಿಷಭ್ ಶೆಟ್ಟಿಗೆ ಅಭಿನಂದಿಸಿದ್ದಾರೆ.

ಇತ್ತೀಚಿಗಷ್ಟೆ ಕಂಗನಾ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿದ್ದ ಬಾಲಿವುಡ್ ಬ್ಯೂಟಿ ‘ಕಾಂತಾರ ಬಗ್ಗೆ, ಕಲಾವಿದರ ಅದ್ಭುತ ನಟನೆಯ ಬಗ್ಗೆ ವಿಷಯಗಳನ್ನು ಕೇಳಲು ತುಂಬಾ ಖುಷಿಯಾಗುತ್ತಿದೆ. ಕಾಂತಾರ ನೋಡಲು ಬಹಳ ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇದೀಗ ಕಾಂತಾರ ಸಿನಿಮಾವನ್ನು ನೋಡಿದ್ದ ಕಂಗನಾ ರಾಣವತ್ ಸಿನಿಮಾ ಮುಗಿಯುತ್ತಿದ್ದಂತೆ ವಿಡಿಯೋ ಮೂಲಕ ರಿಷಭ್ ಅವರನ್ನು ಷ್ಲಾಘಿಸಿರುವ ಇವರು “ರಿಷಭ್ ಶೆಟ್ಟಿ ಅವರೇ ನಿಮ್ಮ ನಿರ್ದೇಶನ, ನಟನೆ, ಆಕ್ಷನ್, ಚಿತ್ರಕಥೆ, ಶೂಟಿಂಗ್ ಎಲ್ಲವೂ ಅದ್ಭುತ. ಇನ್ನು ಒಂದು ವಾರವಾದರೂ ನಾನು ಈ ಸಿನಿಮಾದ ಗುಂಗಿನಲ್ಲೇ ಇರುತ್ತೇನೆನೋ ಎಂದೆನಿಸುತ್ತದೆ. ಸಿನಿಮಾದಲ್ಲಿ ಸ್ಥಳೀಯ
ಜಾನಪದ ಸಂಪ್ರದಾಯದ ಮಿಶ್ರಣ ಬಹಳಾ ಸುಂದರವಾಗಿ ಮೂಡಿಬಂದಿದೆ”ಎಂದು ಹೇಳಿದ್ದಾರೆ.

ಇದರ ಜೊತೆಗೆ “ಸಿನಿಮಾ ಅಂದರೆ ಇದು. ಚಿತ್ರಮಂದಿರದಲ್ಲೂ ಅನೇಕರು ಇಂಥ ಸಿನಿಮಾ ನೋಡಿಲ್ಲ ಎನ್ನುತ್ತಿದ್ದದ್ದನ್ನು ಕೇಳಿದೆ. ನಿಮಗೆ ಹ್ಯಾಟ್ಸ್ ಆಫ್’ ಎಂದು ರಿಷಭ್ ಶೆಟ್ಟಿ ಅವರನ್ನು ಹಾಡಿ ಹೊಗಳಿದರು. ಹಾಗೆ ತಮ್ಮ ಇನ್ಸ್ಟಾಗ್ರಾಂ ಎಕೌಂಟಿನಲ್ಲಿ ಕೂಡ ಕಾಂತಾರ ಪೋಸ್ಟರ್ ಶೇರ್ ಮಾಡಿಕೊಂಡು ಮುಂದಿನ ವರ್ಷ ಕಾಂತಾರವನ್ನು ಆಸ್ಕರ್ ಪ್ರಶಸ್ತಿಗೆ ಕಳಿಸಿ ಎಂದು ಬರೆದುಕೊಂಡಿದ್ದಾರೆ.
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ