ಬಿಗ್ ಬಾಸ್ ಕನ್ನಡ ನಿಸ್ಸಂದೇಹವಾಗಿ ಕನ್ನಡ ಕಿರುತೆರೆಯಲ್ಲಿ ಬಹು ನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಸತತ ಎಂಟು ಸೀಸನ್‌ಗಳ ಯಶಸ್ಸಿನ ನಂತರ, ಇದೀಗ ಬಿಗ್ ಬಾಸ್ ಕನ್ನಡದ ಒಂಬತ್ತನೇ ಆವೃತ್ತಿ ವಾರದ ಹಿಂದೆ ಶುರುವಾಗಿದೆ. ಹೌದು, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 ರಂದು ಆರಂಭವಾಗಿದೆ.

ಆಶ್ಚರ್ಯಕರವಾದ ಸಂಗತಿಯೆಂದರೆ ಬಿಗ್ ಬಾಸ್ ಕನ್ನಡ ಸರಣಿಯು ಒಬ್ಬ ಮಹಿಳಾ ಸ್ಪರ್ಧಿಯನ್ನು ಮಾತ್ರ ವಿನ್ನರ್ ಆಗಿ ನೋಡಿದೆ ಎಂಬ ಅಂಶವನ್ನು ನಿರ್ಲಕ್ಷಿಸಲಾಗುವುದಿಲ್ಲ.

ಹೌದು! ಹಲವು ವರ್ಷಗಳಿಂದ, ಬಿಗ್ ಬಾಸ್ ಕನ್ನಡದ ಶೀರ್ಷಿಕೆಯನ್ನು ಪಡೆದ ಏಕೈಕ ಮಹಿಳಾ ಅಭ್ಯರ್ಥಿ ಎಂದರೆ ಅದು ನಟಿ ಶ್ರುತಿ ಕೃಷ್ಣ. ಬಿಗ್ ಬಾಸ್ ಕನ್ನಡ ಸೀಸನ್ 3 ರ ವಿನ್ನರ್ ಆಗಿ ಹೊರಹೊಮ್ಮಿದವರು ಶ್ರುತಿ. ನಟಿ ತನ್ನ ಸಹ ಸ್ಪರ್ಧಿ ಚಂದನ್ ಕುಮಾರ್ ಅವರನ್ನು ಮೀರಿಸಿ ವಿಜೇತರಾಗುವುದರೊಂದಿಗೆ, ಚಂದನ್ ಆ ಸೀಸನ್ ನ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದರು.

ಅಂದಿನಿಂದ, ಬಿಗ್ ಬಾಸ್ ಕನ್ನಡ ಸರಣಿಯಲ್ಲಿ ಇದುವರೆಗೆ ಮಹಿಳಾ ಅಭ್ಯರ್ಥಿ ವಿಜೇತರಾಗಿಲ್ಲ. ಮತ್ತೊಂದೆಡೆ, ರಿಯಾಲಿಟಿ ಶೋ ಇಲ್ಲಿಯವರೆಗೆ ಮಹಿಳಾ ರನ್ನರ್ ಅಪ್‌ಗೆ ಸಾಕ್ಷಿಯಾಗಿಲ್ಲ ಎನ್ನುವ ಅಂಶವನ್ನೂ ಮರೆಯುವಂತಿಲ್ಲ.

ಇನ್ನು ಈ ಸರಣಿಯಲ್ಲಾದರೂ ಮಹಿಳಾ ವಿಜೇತರು ಇರುತ್ತಾರೆಯೇ ಎಂಬ ಕುತೂಹಲ ವೀಕ್ಷಕರಿಗೆ, ಅದರಲ್ಲೂ ಬಿಗ್ ಬಾಸ್ ಪ್ರಿಯರಿಗಂತೂ ಖಂಡಿತಾ ಇದೆ. ಅಂದ ಹಾಗೇ ಈ ಸೀಸನ್ ನಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ತನ್ನ ಕೈಯಲ್ಲಿ ವಿಜೇತ ಟ್ರೋಫಿಯನ್ನು ಹಿಡಿದಿರುವುದನ್ನು ನೋಡಲು ನಿಮ್ಮಲ್ಲಿ ಎಷ್ಟು ಮಂದಿ ಬಯಸುತ್ತೀರಿ?
ಜಾಹೀರಾತು ಮತ್ತು ಸುದ್ದಿ ಕಳುಹಿಸಲು ಸಂಪರ್ಕಿಸಿ
9740160669
ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸದಾ ನಿಮ್ಮೊಂದಿಗೆ